Viral Video: ನಮ್ಮ ಸಮಾಜದಲ್ಲಿ ತಾಯಿಯನ್ನು ದೇವರಿಂತ ಮಿಗಿಲು ಎನ್ನಲಾಗುತ್ತದೆ. ತಾಯಿ ತನ್ನ ಮಕ್ಕಳ ಹಸಿವು ನೀಗಿಸಲು ಕಷ್ಟದ ಕೆಲಸಗಳನ್ನು ಮಾಡಲು ಸಹ ಹಿಂದೆ ಸರಿಯಲ್ಲ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತನ್ನ ಮಗುವಿನ ಹಸಿವು ನೀಗಿಸಲು, ಹಾಲು ತರಲು ರೈಲಿನಿಂದ ಸ್ಟೇಷನ್ ನಲ್ಲಿ ಇಳಿದಿದ್ದಾಳೆ. ಆದರೆ ಆ ಸಮಯದಲ್ಲಿ ರೈಲು ಚಲಿಸಲು ಆರಂಭಿಸಿದೆ. ಮಹಿಳೆ ಸಹ ರೈಲಿನಲ್ಲಿ ಹತ್ತಲು ಓಡಿದ್ದಾಳೆ. ಆದರೆ ಅದಾಗಲೇ ರೈಲು ಜೋರಾಗಿ ಹೋಗಿದೆ. ತನ್ನ ಮಗುವನ್ನು ನೆನಪಿಸಿಕೊಂಡು ಆಕೆ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆ ರೈಲ್ವೇ ಟ್ರಾಕ್ ಪಕ್ಕ ನಿಂತುಕೊಂಡು ಅಳುತ್ತಿರುವುದನ್ನು ಕಾಣಬಹುದು. ಹಾಲು ಖರೀದಿ ಮಾಡಿ ಬಳಿಕ ಸ್ಷೇಷನ್ ನಲ್ಲಿ ರೈಲು ಹತ್ತಲು ಪ್ರಯತ್ನಿಸುತ್ತಿರುವಂತೆ ಕಾಣಿಸಿದೆ. ಆದರೆ ಆ ಮಹಿಳೆಗೆ ರೈಲ್ವೆ ಗಾರ್ಡ್ ದೇವರಂತೆ ಬಂದು ಸಹಾಯ ಮಾಡಿದ್ದಾನೆ. ಮಹಿಳೆ ಗಾರ್ಡ್ ತನ್ನ ಪರಿಸ್ಥಿತಿಯ ಬಗ್ಗೆ ಹೇಳಿದ್ದಾಳೆ. ಅದರಂತೆ ಆತ ರೈಲ್ ಅನ್ನು ನಿಲ್ಲಿಸಿದ್ದಾನೆ. ರೈಲು ನಿಂತ ಕೂಡಲೇ ಮಹಿಳೆ ರೈಲು ಹತ್ತಲು ವೇಗವಾಗಿ ಓಡುವುದನ್ನು ಕಾಣಬಹುದಾಗಿದೆ. ಈ ಘಟನೆಯನ್ನು ನೋಡಿದ ಅಲ್ಲಿದ್ದವರು ಭಾವೋದ್ವೇಗಕ್ಕೆ ಗುರಿಯಾಗಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಅಲ್ಲಿ ನಿಜಕ್ಕೂ ಏನು ನಡೆದಿದೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಅಂದಹಾಗೆ ಈ ವಿಡಿಯೋವನ್ನು @Gulzar_sahab ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರೀ ವೀಕ್ಷಣೆ ಕಂಡಿದೆ. ಸುಮಾರು 14 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋ ವೀಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ. ಓರ್ವ ತಾಯಿ ಹಾಲು ತರಲು ಹೋಗಿದ್ದಾಳೆ. ರೈಲು ಚಲಿಸಿದೆ, ಗಾರ್ಡ್ ನೋಡಿ ರೈಲು ನಿಲ್ಲಿಸಿದ್ದಾನೆ ಎಂದು ವಿಡಿಯೋ ಹಂಚಿಕೊಳ್ಳಲಾಗಿದೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.