Viral Video – ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ಬಾಲ್ಯ ವಿವಾಹದ ಬಗ್ಗೆ ಸರ್ಕಾರ, ಸಂಘ ಸಂಸ್ಥೆಗಳ ಮೂಲಕ ಅರಿವು ಮೂಡಿಸುತ್ತಿದ್ದರೂ ಸಹ ಅನೇಕ ಕಡೆ ಇನ್ನೂ ಬಾಲ್ಯ ವಿವಾಹಗಳು ನಡೆಯುತ್ತಿವೆ. ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಿಗೆ ಬಲವಂತವಾಗಿ ಮದುವೆ ಮಾಡುವಂತಹ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಇದೀಗ ಅಂತಹ ಸುದ್ದಿಯೊಂದು ನಡೆದಿದೆ. 12 ವರ್ಷದ ಬಾಲಕಿಗೆ 62 ವರ್ಷ ವಯಸ್ಸಿನ ಮುದುಕನೊಂದಿಗೆ ಬಾಲಕಿಯ ಮನೆಯವರೇ (Viral Video) ಮುಂದಾಗಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಸದ್ಯ (Viral Video) ವೈರಲ್ ಆಗುತ್ತಿರುವ ವಿಡಿಯೋದಲ್ಲಿ 12 ವರ್ಷದ ಬಾಲಕಿಯನ್ನು 62 ವರ್ಷದ ವೃದ್ದನೊಂದಿಗೆ ಮದುವೆ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಆ ಬಾಲಕಿ ಬೇಡ ಬೇಡ ಅಂತಾ ಅಳುತ್ತಾ ಕೇಳಿಕೊಂಡರೂ ಕ್ಯಾರೆ ಅನ್ನದೇ ಆಕೆಯ ಮನೆಯವರು ಮದುವೆ ಮಾಡಲು ಮುಂದಾಗಿದ್ದಾರೆ. ಆದರೆ (Viral Video) ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈ ವಿಡಿಯೋವನ್ನು TaraBull ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದ್ದು, 12 ವರ್ಷದ ಬಾಲಕಿಯನ್ನು ಆಕೆಯ ಮನೆಯವರೇ 62 ವರ್ಷದ ವ್ಯಕ್ತಿಯೊಂದಿಗೆ ಮದುವೆಯಾಗುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಆಕ್ರೋಷ ಎಲ್ಲಿದೆ ಎಂಬ ಟೈಟಲ್ ನಡಿ ವಿಡಿಯೋ (Viral Video) ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.
Video Here: https://x.com/Salwan_Momika1/status/1823064605977194944
ಈ ವಿಡಿಯೋದಲ್ಲಿ (Viral Video) ವೃದ್ದನನ್ನು ಮದುವೆಯಾಗುವಂತೆ ಬಾಲಕಿಯನ್ನು ಒತ್ತಾಯಿಸುತ್ತಿರುವುದು ಹಾಗೂ ಬಾಲಕಿ ಬೇಡ ಬೇಡ ಅಂತಾ ಹೇಳಿದರೂ , ಅತ್ತರೂ ಮನೆಯವರು ಮದುವೆಗೆ ಸಹಿ ಹಾಕುವಂತೆ ಬಲವಂತ ಮಾಡಿದ್ದಾರೆ. ಆ.15 ರಂದು ಹಂಚಿಕೊಂಡ ಈ ವಿಡಿಯೋ ಬರೊಬ್ಬರಿ 5 ಮಿಲಿಯನ್ ಗೂ ಅಧಿಕ (Viral Video) ವೀಕ್ಷಣೆಗಳನ್ನು ಕಂಡಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅನೇಕರು ಈ ವಿಡಿಯೋದಲ್ಲಿ ಬಾಲಕಿಯ ಮದುವೆ ಮಾಡಲು ಬಲವಂತ ಮಾಡಿದವರ ವಿರುದ್ದ ಕಠಿಣ ಕ್ರಮ (Viral Video) ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.