Puneeth Rajkumar – ಕನ್ನಡ ಸಿನಿರಂಗದ ಮೇರು ನಟ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮಿಂದ ದೂರವಾಗಿ ಮೂರು ವರ್ಷಗಳು ಕಳೆದಿದೆ. ಅವರು ಅಗಲಿ ಮೂರು ವರ್ಷಗಳಾದರೂ ಸಹ ಇನ್ನೂ ಅವರ ನೆನಪು ಕನ್ನಡಿಗರ ಮನದಲ್ಲೇ ಉಳಿದಿದೆ ಎನ್ನಬಹುದು. ಇದೀಗ ಕನ್ನಡಿಗರು ಪ್ರೀತಿಯಿಂದ ಅಪ್ಪು ಎಂದೇ ಕರೆಯುವ ಪುನೀತ್ ರಾಜ್ ಕುಮಾರ್ (Puneeth Rajkumar) ರವರ ದೇವಾಲಯವನ್ನು ನಿರ್ಮಿಸಲು ಅಭಿಮಾನಿಗಳು ಮುಂದಾಗಿದ್ದಾರೆ. ಹಾವೇರಿ ಜಿಲ್ಲೆಯ ಪ್ರಕಾಶ್ ಎಂಬಾತ ತಾನು ದೇವರಂತೆ ಆರಾಧಿಸುವಂತಹ ಪುನೀತ್ ರಾಜ್ ಕುಮಾರ್ (Puneeth Rajkumar)ರವರ ದೇವಾಲಯ ನಿರ್ಮಾಣ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹಾವೇರ ಜಿಲ್ಲೆಯ ಪ್ರಕಾಶ್ ಎಂಬಾತ ದಿವಂಗತ (Puneeth Rajkumar)ಪುನೀತ್ ರಾಜ್ ಕುಮಾರ್ ರವರ ವೀರ ಅಭಿಮಾನಿಯಂತೆ. ಹಾವೇರಿಯ ಯಲಗುಚ್ಚ ಗ್ರಾಮದ ಪ್ರಕಾಶ್ ರವರಿಗೆ ಪುನೀತ್ ರಾಜ್ ಕುಮಾರ್ ಎಂದರೇ ಪಂಚಪ್ರಾಣವಂತೆ, ಜೀವನದಲ್ಲಿ ಒಮ್ಮೆಯಾದರೂ ಆತನ ಜೊತೆಗೆ ಸಿನೆಮಾದಲ್ಲಿ ನಟಿಸಬೇಕೆಂದು ಕನಸು ಕಂಡಿದ್ದನಂತೆ. ಇದೇ ಕಾರಣದಿಂದ ಹಲವು ಬಾರಿ (Puneeth Rajkumar)ಪುನೀತ್ ರಾಜ್ ಕುಮಾರ್ ಭೇಟಿಗೆ ಪ್ರಕಾಶ್ ಪ್ರಯತ್ನಿಸಿದ್ದರಂತೆ ಆದರೂ ಸಹ ಅದು ಸಾಧ್ಯವಾಗಿರಲಿಲಲ್ಲವಂತೆ. ದೂರದಿಂದಲೇ ಅಪ್ಪು ರನ್ನು ನೋಡಿ ಮನೆಗೆ ವಾಪಸ್ ಆಗುತ್ತಿದ್ದನಂತೆ. ಇನ್ನೂ ಅಪ್ಪು ಜೊತೆಗೆ ನಟಿಸಬೇಕೆಂಬ ಕನಸು ಕಂಡಿದ್ದ ಪ್ರಕಾಶ್ ಗೆ ಪುನೀತ್ ರಾಜ್ ಕುಮಾರ್ (Puneeth Rajkumar)ರವರ ಅಕಾಲಿಕ ಮರಣ ಅತೀವ ನೋವು ತಂದುಕೊಟ್ಟಿತ್ತು.
ಅಪ್ಪು (Puneeth Rajkumar) ನಿಧನದಿಂದ ತೀವ್ರ ನೊಂದಿದ್ದ ಪ್ರಕಾಶ್ ಅವರ ನೆನಪಿಗಾಗಿ ದೇವಾಲಯ ನಿರ್ಮಾಣ ಮಾಡಲು ಮುಂದಾಗಿದ್ದ. ಇದಕ್ಕಾಗಿ ಸುಮಾರು ಐದು ಲಕ್ಷ ರೂಪಾಯಿ ಖರ್ಚು ಮಾಡಿ ಚಿಕ್ಕದಾದ ದೇವಾಲಯ ನಿರ್ಮಾಣ ಮಾಡಿದ್ದಾನೆ. ಸದ್ಯ ದೇವಾಲಯದ ಕಾರ್ಯ ಸಂಪೂರ್ಣವಾಗಿ ಮುಗಿದಿದ್ದು, ದೇವಾಲಯಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. (Puneeth Rajkumar)ಡಾ.ಪುನೀತ್ ರಾಜ್ ಕುಮಾರ್ ರವರ ಪ್ರತಿಮೆ ಮಾಡಿಸಲಾಗುತ್ತಿದೆ. ಪ್ರತಿಮೆ ಪೂರ್ಣಗೊಂಡ ಬಳಿಕ ದೇವಾಸ್ಥಾನದೊಳಗೆ ಪ್ರತಿಷ್ಟಾಪಿಸಿ ಪುನೀತ್ (Puneeth Rajkumar)ರವರ ಪತ್ನಿ ಅಶ್ವಿನಿಯವರಿಂದ ಉದ್ಘಾಟನೆ ಮಾಡಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಅಶ್ವಿನಿ (Puneeth Rajkumar)ಪುನೀತ್ ರಾಜ್ ಕುಮಾರ್ ರವರನ್ನು ಸಹ ಭೇಟಿ ನೀಡಿ ದೇವಾಲಯದ ಉದ್ಘಾಟನೆಗೆ ಆಹ್ವಾನ ನೀಡಿದ್ದಾರಂತೆ. ಎಲ್ಲವೂ ಅಂದುಕೊಂಡಂತೆ ನಡೆದರೇ ಆಗಸ್ಟ್ ತಿಂಗಳ ಅಂತ್ಯದೊಳಗೆ ದೇವಾಲಯದ ಉದ್ಘಾಟನೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ದೇವಾಲಯದ ನಿರ್ಮಾಣಕ್ಕೆ (Puneeth Rajkumar)ಸಂಬಂಧಿಸಿದ ವಿಡಿಯೋ ಹಾಗೂ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಪ್ಪು ನಮ್ಮನ್ನು ಅಗಲಿದರೂ ನಮ್ಮಲ್ಲಿ ಜೀವಂತವಾಗಿದ್ದಾರೆ (Puneeth Rajkumar)ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.