Viral Video – ಇದೀಗ ಶಿಕ್ಷಕರು ವಿದ್ಯಾರ್ಥಿಗಳನ್ನು ಹೊಡೆಯುವಂತಿಲ್ಲ. ಮಾತುಗಳ ಮೂಲಕವೇ ಮಕ್ಕಳನ್ನು ನಿಯಂತ್ರಣ ಮಾಡಬೇಕು. ಆದರೂ ಆಗಾಗ ವಿದ್ಯಾರ್ಥಿಗಳನ್ನು ಹೊಡೆಯುವಂತಹ ಘಟನೆಗಳು ನಡೆದಿರುತ್ತವೆ. ಶಿಕ್ಷಣ ನೀಡಲು (Viral Video) ಮಕ್ಕಳಿಗೆ ಹೊಡೆದರೇ ಪೋಷಕರೂ ಸಹ ಅಷ್ಟೊಂದು ರಿಯಾಕ್ಟ್ ಆಗುವುದಿಲ್ಲ. (Viral Video) ಆದರೆ ಕ್ಷುಲ್ಲಕ ಕಾರಣಕ್ಕೆ ಹೊಡೆದರೇ ಪ್ರತಿಯೊಬ್ಬರೂ ಅಂತಹ ಶಿಕ್ಷಕರ ವಿರುದ್ದ ತಿರುಗಿ ಬೀಳುವುದನ್ನು ನೋಡಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಶಾಲಾ ಶುಲ್ಕ ಕಟ್ಟಿಲ್ಲ ಅಂತಾ ವಿದ್ಯಾರ್ಥಿಯನ್ನು ಹೊಡೆದ ಘಟನೆ ನಡೆದಿದೆ.
ಅಂದಹಾಗೆ ಈ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ (Viral Video) ನಡೆದಿದ್ದು, ಶಾಲಾ ಶುಲ್ಕದ ಕಾರಣದಿಂದ ಪ್ರಾಂಶುಪಾಲೆ ಹಾಗೂ ವಿದ್ಯಾರ್ಥಿಯ ನಡುವೆ ಗಲಾಟೆಯಾಗಿದೆ. ಈ ಕಾರಣದಿಂದ ಕೋಪಗೊಂಡ ಪ್ರಾಂಶುಪಾಲೆ (Viral Video) ವಿದ್ಯಾರ್ಥಿಗೆ ಬೆತ್ತದಿಂದ ಬಾಸುಂಡೆ ಬರುವಂತೆ ಬಾರಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ. ಖಾಸಗಿ ಶಾಲೆಯೊಂದರಲ್ಲಿ 11 ನೇ ತರಗತಿಯ ವಿದ್ಯಾರ್ಥಿ ಹಾಗೂ ಪ್ರಾಂಶುಪಾಲರ ನಡುವೆ ಈ ಜಗಳ ನಡೆದಿದೆ. ಕೆಲವು ವರದಿಗಳ ಪ್ರಕಾರ ದಲಿತ ಸಮುದಾಯಕ್ಕೆ ಸೇರಿದ (Viral Video) ವಿದ್ಯಾರ್ಥಿ ಧ್ರುವ ಆರ್ಯ 11 ನೇ ತರಗತಿಯಲ್ಲಿ ಅನುತ್ತೀರ್ಣನಾಗಿದ್ದ. ಈ ಹಿನ್ನೆಲೆಯಲ್ಲಿ ಟಿಸಿ ಪಡೆಯಲು ಶಾಲೆಗೆ ಹೋಗಿದ್ದನಂತೆ. ಈ ವೇಳೆ ಧ್ರುವ ಹಾಗೂ ಶಾಲೆಯ ಪ್ರಾಂಶುಪಾಲೆ ನಿಶಾ ಸೆಂಗಾರ್ ನಡುವೆ ಶಾಲಾ ಶುಲ್ಕದ ಕುರಿತಂತೆ ವಿವಾದ ಏರ್ಪಟ್ಟಿದೆ. ಬಾಕಿಯಿರುವ ಎಲ್ಲಾ ಶುಲ್ಕವನ್ನು ನಾನು (Viral Video) ಪಾವತಿಸಿದ್ದೇನೆ ಎಂದು ಧ್ರುವ ಹೇಳಿದ್ದಾನೆ. ಆದರೆ ಇನ್ನೂ ಶುಲ್ಕ ಬಾಕಿಯಿದ್ದು, ಶುಲ್ಕ ಪಾವತಿಸದ ಹಿನ್ನೆಲೆಯಲ್ಲಿ ಟಿಸಿ ಕೊಡಲು ಸಾಧ್ಯವಿಲ್ಲ (Viral Video) ಎಂದು ಪ್ರಾಂಶುಪಾಲರು ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: https://x.com/FreePressMP/status/1827319975926813091
ಇದೇ ಕಾರಣಕ್ಕಾಗಿ (Viral Video) ಇಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆ ಜೋರಾಗಿದ್ದು, ಪ್ರಾಂಶುಪಾಲೆ ನಿಶಾ ಸಂಗಾರ್ ವಿದ್ಯಾರ್ಥಿ ಧ್ರುವಾ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಉಪಪ್ರಾಂಶುಪಾಲರಾದ (Viral Video) ರಾಕೇಶ್ ಸಿಂಗ್ ಹಾಗೂ ರಜಿನಿ ಎಂಬುವವರು ವಿದ್ಯಾರ್ಥಿಗೆ ಥಳಿಸಿದ್ದಾರೆ. ಧ್ರುವ ತನ್ನನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಂಶುಪಾಲೆಯನ್ನು ದೂರ ತಳ್ಳಿದ್ದಾನೆ. ಈ ಘಟನೆ ಅಲ್ಲಿನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸರೆಯಾಗಿದೆ. (Viral Video) ಈ ಗಲಾಟೆಯಲ್ಲಿ ವಿದ್ಯಾರ್ಥಿಯ ಕುತ್ತಿಗೆ, ತಲೆ ಹಾಗೂ ಮುಖಕ್ಕೆ ಗಾಯಗಾಳಗಿದೆ. ಈ ಘಟನೆಯ ಬಳಿಕ ಎರಡೂ ಕಡೆಯವರೂ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. (Viral Video) SC/ST ದೌರ್ಜನ್ಯ ಕಾಯ್ದೆಯಡಿ ಪ್ರಾಂಶುಪಾಲೆ ನಿಶಾ ಸೆಂಗರ್, ಉಪ ಪ್ರಾಂಶುಪಾಲ ರಾಕೇಶ್ ಸಿಂಗ್ ಹಾಗೂ ಶಿಕ್ಷಕಿ ರಜನಿ ವಿರುದ್ದ ಹಲ್ಲೆ ಹಾಗೂ ಕಿರುಕುಳ ಪ್ರಕರಣ ದಾಖಲಿಸಿಕೊಂಡಿದ್ದಾರೆ (Viral Video) ಎಂದು ತಿಳಿದುಬಂದಿದೆ.
ಇನ್ನೂ ಈ ಗಲಾಟೆಯ ವಿಡಿಯೋವನ್ನು Ghar Ke Kalesh ಎಂಬ ವ್ಯಕ್ತಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ.25 ರಂದು (Viral Video) ಹಂಚಿಕೊಂಡ ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಕಂಡಿದೆ. ವಿದ್ಯಾರ್ಥಿಯ ಮೇಲೆ ಶಿಕ್ಷಕರ ಹಲ್ಲೆಯ ವಿರುದ್ದ ನೆಟ್ಟಿಗರು ಆಕ್ರೋಷ ಹೊರಹಾಕುತ್ತಿದ್ದಾರೆ. ತಮ್ಮದೇ ಆದ ಶೈಲಿಯಲ್ಲಿ ಕಾಮೆಂಟ್ ಗಳನ್ನು (Viral Video) ಹರಿಬಿಡುತ್ತಿದ್ದಾರೆ.