Viral Video – ನವರಾತ್ರಿ ಹಾಗೂ ವಿಜಯದಶಮಿ (Dasara 2024) ಹಿಂದೂಗಳ ಪವಿತ್ರ ಹಬ್ಬ. ಭಾರತದಲ್ಲಿ ಈ ಹಬ್ಬವನ್ನು ತುಂಬಾನೆ ಅದ್ದೂರಿಯಾಗಿ ಶ್ರದ್ದಾ ಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ. ಕೆಲವು ದಿನಗಳ ಹಿಂದೆಯಷ್ಟೆ ಈ ಹಬ್ಬವನ್ನು ತುಂಬಾ ವಿಜೃಂಭಣೆಯಿಂದ ಆಚರಿಸಲಾಗಿದೆ. ಇದೀಗ ವಿಜಯದಶಮಿ ಹಬ್ಬದ ದಿನ ನಡೆದ ಘಟನೆಯ ವಿಡಿಯೋ ಒಂದು ತುಂಬಾನೆ ಸದ್ದು ಮಾಡುತ್ತಿದೆ. ವಿಜಯದಶಮಿ ಹಬ್ಬದ ದಿನ ಹುಟ್ಟಿದ ಹೆಣ್ಣು ಮಗುವನ್ನು ವೈದ್ಯೆಯೊಬ್ಬರು ದುರ್ಗಾದೇವಿಯಂತೆ ಅಲಂಕಾರ (Viral Video) ಮಾಡಿದ್ದಾರೆ. ಈ ವಿಡಿಯೋ ಎಲ್ಲರ ಮನ ಗೆದ್ದಿದೆ.
ವಿಜಯದಶಮಿಯಂದು ಹುಟ್ಟಿದ ಹೆಣ್ಣು ಮಗುವನ್ನು ವೈದ್ಯೆಯೊಬ್ಬರು ದುರ್ಗಾಮಾತೆಯಂತೆ ಅಲಂಕಾರ ಮಾಡಿದ್ದಾರೆ. ತುಂಬಾ ವಿಶೇಷವಾಗಿ ಮುದ್ದು ದೇವಿಯನ್ನು ಕುಟುಂಬಸ್ಥರಿಗೆ ಪರಿಚಯಿಸಿದ್ದಾರೆ. ಹೆಣ್ಣು ಮಕ್ಕಳನ್ನು ದೇವಿಯ ರೂಪವೆಂದೇ ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹೆಣ್ಣು ಮಗುವನ್ನು ದುರ್ಗಾ ಮಾತೆಯಂತೆ ಅಲಂಕಾರ ಮಾಡಿದ್ದಾರೆ. ಈ ವಿಶೇಷ ದಿನದಂದು ಹುಟ್ಟಿದ ಮಗುವಿಗೆ ಆಸ್ಪತ್ರೆಯ ವೈದ್ಯೆಯೊಬ್ಬರು ದುರ್ಗಾ ದೇವಿಯಂತೆ ಬಟ್ಟೆ ತೊಡಿಸಿ ಅಲಂಕಾರ ಮಾಡಿ ಬಳಿಕ ಮಗುವನ್ನು ಕುಟುಂಬಸ್ಥರ ಕೈಗೆ ಕೊಟ್ಟಿದ್ದಾರೆ. ಈ ವಿಡಿಯೋ ನೋಡಿದ ಎಲ್ಲರೂ ಸಾಕ್ಷಾತ್ ದುರ್ಗಾ ಮಾತೆಯ ಸ್ವರೂಪ ಎಂದು ಭಾವಿಸುತ್ತಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ಈ ಸಂಬಂಧ ವಿಡಿಯೋ ಒಂದನ್ನು ವಿನಿತಾ ಸಿಂಗ್ ಎಂಬುವವರು @ biharigurl ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಜಯದಶಮಿಯಂದು ಜನಿಸಿದ ಹೆಣ್ಣು ಮಗುವನ್ನು ದುರ್ಗಾ ದೇವಿಯಂತೆ ಕಂಗೊಳಿಸಿದ ವೈದ್ಯೆ ಎಂಬ ಟೈಟಲ್ ನಡಿ ವಿಡಿಯೋ ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವೈದ್ಯೆಯೊಬ್ಬರು ವಿಜಯದಶಮಿಯ ದಿನದಂದು ಜನಿಸಿದ ಮಗುವಿಗೆ ಕೆಂಪು ಬಟ್ಟೆ, ಕುಂಕುಮ, ಕಿರೀಟ ತೊಡಿಸಿ ದುರ್ಗಾ ದೇವಿಯಂತೆ ಸಿಂಗರಿಸಿದ ದೃಶ್ಯವನ್ನು ಕಾಣಬಹುದು. ಹೀಗೆ ದೇವಿಯಂತೆ ಅಲಂಕಾರಗೊಂಡ ಮಗುವನ್ನು ಬಹಳ ವಿಶೇಷ ರೀತಿಯಲ್ಲಿ ಅವರು ಕುಟುಂಬಸ್ಥರಿಗೆ ಪರಿಚಯಿಸಿದ್ದಾರೆ. ಇನ್ನೂ ಈ ವಿಡಿಯೋ ಕಳೆದ ಅ.17 ರಂದು ಹಂಚಿಕೊಂಡಿದ್ದು ಮಿಲಿಯನ್ ಗಟ್ಟಲೇ ವೀಕ್ಷಣೆ ಕಂಡಿದೆ. ಅನೇಕರು ಮೆಚ್ಚುಗೆಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.