ಸದ್ಯ ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿರುವ BSNL ದಿನಕ್ಕೊಂದು ಸ್ಕ್ರೋಕ್ ಎಂಬಂತೆ ಇತರೆ ಟೆಲಿಕಾಂ ಕಂಪನಿಗಳಿಗೆ ಶಾಕ್ ಕೊಡುತ್ತಿದೆ. ಈಗಾಗಲೇ ಕಡಿಮೆ ಪ್ಲಾನ್ ಗಳನ್ನು ಪರಿಚಯಿಸುವ ಮೂಲಕ ಇತರೆ ಟೆಲಿಕಾಂ ಕಂಪನಿಗಳಿಗೆ ನಡುಕು ಹುಟ್ಟಿಸುತ್ತಿದೆ. ಲಕ್ಷಾಂತರ ಮಂದಿ ಬಿ.ಎಸ್.ಎನ್.ಎಲ್ ತನ್ನ ನೆಟ್ ವರ್ಕ್‌ಗೆ ಸೆಳೆದುಕೊಳ್ಳುವ ಮೂಲಕ ಮಹತ್ತರ ಕ್ರಾಂತಿ ಮಾಡಿದೆ. ಇದೀಗ ಮತ್ತೊಂದು ಟೆಕ್ನಾಲಿಜಿ ಮೂಲಕ ಇತರೆ ಟೆಲಿಕಾಂ ಕ್ಷೇತ್ರಗಳಿಗೆ ಮಾಸ್ಟರ್ ಸ್ಟ್ರೋಕ್ ನೀಡಿದೆ. ಈ ಟೆಕ್ನಾಲಜಿ ಮೂಲಕ ಯಾವುದೇ ನೆಟ್ ವರ್ಕ್, ಸಿಮ್ ಇಲ್ಲದೇ ಕರೆ ಮಾಡಲು (BSNL) ಸಾಧ್ಯವಾಗುತ್ತದೆಯಂತೆ. ಶೀಘ್ರದಲ್ಲೇ ಈ ಸೇವೆ ಭಾರತೀಯರಿಗೆ ಸಿಗಲಿದೆ ಎಂದು ಹೇಳಲಾಗಿದೆ.

ಬಿಎಸ್‌ಎನ್‌ಎಲ್ ಇದೀಗ ಡೈರೆಕ್ಟ್ 2 ಡಿವೈಸ್(D2D)ತಂತ್ರಜ್ಞಾನದ ಮೂಲಕ ಯಾವುದೇ ನೆಟ್‌ವರ್ಕ್, ಸಿಮ್ ಇಲ್ಲದೆ ಕರೆ ಮಾಡುವ ಸೌಲಭ್ಯ ನೀಡುತ್ತಿದೆ. ಇದು ಗ್ಲೋಬಲ್ ಸ್ಯಾಟಲೈಟ್ ಕಮ್ಯೂನಿಕೇಶನ್ ವಯಾಸ್ಯಾಟ್ ಜೊತೆಗಿನ ಸಹಭಾಗಿತ್ವದಲ್ಲಿ ಬಿಎಸ್‌ಎನ್‌ಎಲ್ ಹೊಸ ಕ್ರಾಂತಿ ಮಾಡುತ್ತಿದೆ. ಈ ಹೊಸ ಸಂವಹನ ಕ್ರಾಂತಿ ಟೆಲಿಕಾಂ ಕ್ಷೇತ್ರವನ್ನು ಬುಡಮೇಲು ಮಾಡುವಂತಿದೆ ಎನ್ನಲಾಗಿದೆ. ಈ ಹೊಸ ತಂತ್ರಜ್ಞಾನದ ಮೂಲಕ ಬಿ.ಎಸ್.ಎನ್.ಎಲ್ ನಿಂದ ಕರೆ ಮಾಡಲು ಯಾವುದೇ ಸಿಮ್, ನೆಟ್ ವರ್ಕ್ ಬೇಕಾಗಿಲ್ಲ, ಹಳ್ಳಿಯಾಗಲಿ, ಕಾಡಿನಲ್ಲಾಗಲಿ ಟವರ್, ನೆಟ್ ವರ್ಕ್ ಇಲ್ಲದೇ ಸ್ಯಾಟಲೈಟ್ ಮೂಲಕವೇ ಸಂವಹನ ಮಾಡಬಹುದಾಗಿದೆ ಎನ್ನಲಾಗಿದೆ. ಈ ಸೇವೆ ಆಂಡ್ರಾಯ್ಡ್, ಐಓಎಸ್ ಮಾತ್ರವಲ್ಲದೇ ಸ್ಮಾರ್ಟ್‌ವಾಚ್ ಸೇರಿದಂತೆ ಸ್ಮಾರ್ಟ್ ಗ್ಯಾಜೆಟ್ ಗಳಲ್ಲೂ ಸಹ ಕಾಲ್ ಮಾಡಲು ಸಾಧ್ಯವಾಗಲಿದೆ ಎನ್ನಲಾಗಿದೆ.

ಇನ್ನೂ ಈ ಸೇವೆ ಪ್ರಮುಖವಾಗಿ ನೆಟ್ ವರ್ಕ್ ಇಲ್ಲದ ರಿಮೂಟ್ ವಲಯಗಳಲ್ಲಿ ಮೊದಲ ಹಂತದಲ್ಲಿ ಬಳಕೆಯಾಗಲಿದೆ. ಕರೆ ಮಾಡಲು ಮೊಬೈಲ್ ಬೇಕಾಗಿಲ್ಲ, ಸ್ಮಾರ್ಟ್ ಗ್ಯಾಜೆಟ್ ಇದ್ದರೇ ಸಾಕು. ನೇರವಾಗಿ ಸ್ಯಾಟಲೈಟ್ ಕಮ್ಯೂನಿಕೇಷನ್ ಮೂಲಕ ಸಂಪರ್ಕ ಮಾಡಬಹುದು. ವಯಾಸ್ಯಾಟ್ ಸಹಭಾಗಿತ್ವದಲ್ಲಿ ಬಿಎಸ್‌ಎನ್‌ಎಲ್ ಈಗಾಗಲೇ ಡಿ2ಡಿ ಪ್ರಯೋಗ ಯಶಸ್ವಿಯಾಗಿ ಮಾಡಿದೆ. ಇದೀಗ ಹಂತ ಹಂತವಾಗಿ ಡಿ2ಡಿ ಸ್ಯಾಟಲೈಟ್ ಕಮ್ಯೂನಿಕೇಶನ್ ಜಾರಿಯಾಗಲಿದೆ. ಈ ಮೂಲಕ ಭಾರತದಲ್ಲಿ ರಿಮೂಟ್ ಏರಿಯಾದಲ್ಲೂ ಕರೆ, ಜಗತ್ತಿನೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಲಿದೆ. ಇನ್ನೂ ಈಗಾಗಲೇ ಎರಡು ಮಾದರಿಯಲ್ಲಿ ಈ ಪ್ರಯೋಗ ನಡೆಸಿದ್ದು, ಯಶಸ್ವಿಯಾಗಿದೆ ಎನ್ನಲಾಗಿದೆ. ಈ ಹೊಸ ಸಂವಹನ ತಂತ್ರಜ್ಞಾನ ಇತರೆ ಟೆಲಿಕಾಂಗಳಿಗೆ ನಡುಕ ಹುಟ್ಟುವಂತೆ ಮಾಡಿದೆ ಎನ್ನಬಹುದಾಗಿದೆ.