Transgender Marriage: ಮನೆಯವರನ್ನು ಒಪ್ಪಿಸಿ ಮಂಗಳಮುಖಿಯನ್ನು ಮದುವೆಯಾದ ಯುವಕ….!

ಪ್ರೀತಿಗೆ ವಯಸ್ಸು, ಜಾತಿ, ಆಸ್ತಿ ಯಾವುದೂ ಲೆಕ್ಕಕ್ಕಿಲ್ಲ ಎನ್ನಲಾಗುತ್ತದೆ. ಇತ್ತೀಚಿಗೆ ಗಂಡು-ಗಂಡು, ಹೆಣ್ಣು-ಹೆಣ್ಣು ಮದುವೆಗಳು ನಡೆಯುತ್ತಿವೆ. ಜೊತೆಗೆ ಅನೇಕ ಯುವಕರು ತೃತೀಯ ಲಿಂಗಿಗಳನ್ನು ಸಹ ಪ್ರೀತಿಸಿ ಮದುವೆಯಾಗುತ್ತಿರುವ ಸುದ್ದಿಗಳನ್ನು ಕೇಳುತ್ತಿದ್ದೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಸುಮಾರು 2 ವರ್ಷಗಳ ಕಾಲ ಮಂಗಳಮುಖಿಯನ್ನು ಪ್ರೀತಿಸುತ್ತಿದ್ದ ಯುವಕನೋರ್ವ ತಮ್ಮ ಮನೆಯವರನ್ನು ಹಿರಿಯರನ್ನು ಒಪ್ಪಿಸಿ ಶಾಸ್ತ್ರೋಕ್ತವಾಗಿ (Transgender Marriage) ಮದುವೆಯಾಗಿದ್ದಾನೆ. ಈ ಸುದ್ದಿ ಸದ್ಯ ಎಲ್ಲಾ ಕಡೆ ಹರಿದಾಡುತ್ತಿದೆ.

Telangana Man Married Transgender 2

ಸದ್ಯ ಸಮಾಜದಲ್ಲಿ ಹೊಸ ಟ್ರೆಂಡ್ ಆರಂಭವಾಗುತ್ತಿದೆ ಎನ್ನಬಹುದಾಗಿದ್ದು, ಯುವಕ – ಯುವತಿಯರು ಟ್ರಾನ್ಸ್ ಜೆಂಡರ್‍ ಗಳನ್ನು ಪ್ರೀತಿಸಿ ಮದುವೆಯಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಯುವಕನೋರ್ವ ತೆಲಂಗಾಣದಲ್ಲೂ ಸಹ ಮಂಗಳಮುಖಿಯನ್ನು ಪ್ರೀತಿಸಿ ಮದುವೆಯಾದ ಘಟನೆಯೊಂದು ನಡೆದಿದೆ. ತೆಲಂಗಾಣದ ಜಗಿತ್ಯಾಲ ಜಿಲ್ಲೆಯ ಗೊಲ್ಲಪಲ್ಲಿ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಶ್ರೀನಿವಾಸ ಮಲ್ಯ ಅವರ ಪ್ರೀತಿಯು ಸಾಮಾಜಿಕ ಮಾನದಂಡಗಳನ್ನು ಮೀರಿ, ಸಮಾಜಕ್ಕೆ ತೋರಿಸಿದ್ದಾರೆ. ಶ್ರೀನಿವಾಸ ಅವರು ಎಲ್ಲ ತರಹದ ತಾರತಮ್ಯದ ಅಡೆತಡೆಗಳನ್ನು ಮುರಿದು, ತನ್ನ ಕುಟುಂಬದ ಸಂಪೂರ್ಣ ಬೆಂಬಲದೊಂದಿಗೆ ಮಡಂಪಲ್ಲಿಯ ಕರುಣಾಂಜಲಿ ಎಂಬ ಮಂಗಳಮುಖಿಯನ್ನು ಮದುವೆಯಾಗಿದ್ದಾರೆ.

ಇನ್ನೂ ಕಳೆದ ಎರಡು ವರ್ಷಗಳ ಹಿಂದೆ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಮೊದಲಿಗೆ ಸ್ನೇಹವಾಗಿ ಬಳಿಕ ಇಬ್ಬರ ನಡುವೆ ಪ್ರೀತಿ ಹುಟ್ಟಿದೆ. ಶ್ರೀನಿವಾಸ್ ಕೆಲಸದ ನಿಮಿತ್ತ ದುಬೈಗೆ ಹೋಗಿದ್ದರು. ಅಲ್ಲಿಂದ ಮನೆಗೆ ವಾಪಸ್ಸಾದ ಶ್ರೀನಿವಾಸ್ ಗೆ ಮನೆಯವರು ಮದುವೆ ಮಾಡಲು ಯುವತಿಯ ಹುಡುಕಾಟದಲ್ಲಿದ್ದರು. ಈ ಸಮಯದಲ್ಲೇ ತಮ್ಮ ಹಿರಿಯರಿಗೆ ಶ್ರೀನಿವಾಸ್ ತನ್ನ ಪ್ರೀತಿಯ ವಿಚಾರವನ್ನು ತಿಳಿಸಿದ್ದಾರೆ. ಮಂಗಳಮುಖಿಯಾದ ಕರುಣಾಂಜಲಿಯನ್ನು ಪ್ರೀತಿಸುತ್ತಿದ್ದ ವಿಚಾರವನ್ನು ಶ್ರೀನಿವಾಸ್ ತಮ್ಮ ಪೋಷಕರಿಗೆ ಹೇಳಲು ಸಮಸ್ಯೆಗೆ ಸಿಲುಕಿದ್ದರು. ಅದರಲ್ಲೂ ಶ್ರೀನಿವಾಸ್ ಕುಟುಂಬದವರಿಗೆ ಟ್ರಾನ್ಸ್ ಜೆಂಡರ್‍ ಎಂಬ ಪರಿಕಲ್ಪನೆ ಸಹ ತಿಳಿದಿಲ್ಲ ಎನ್ನಲಾಗಿದೆ.

ಮೊದಲಿಗೆ ತಾನು ಪ್ರೀತಿಸುತ್ತಿರುವುದು ಹುಡುಗಿಯನ್ನಲ್ಲ, ತೃತೀಯಲಿಂಗಿಯನ್ನು ಎಂದು ಹೇಳಿದಾಗ ಶ್ರೀನಿವಾಸ್ ಕುಟುಂಬಸ್ಥರು ಶಾಕ್ ಆಗಿದ್ದರು. ಆದರೂ ಸಹ ಕುಟುಂಬ ಸದಸ್ಯರ ಬಳಿ ತಮ್ಮ ಪ್ರೀತಿಯ ಬಗ್ಗೆ ವಿವರಿಸಿದರು. ಪ್ರೀತಿಗೆ ಲಿಂಗ ಬೇಧವಿಲ್ಲ ಎಂದು ಮನವರಿಕೆ ಮಾಡಿಕೊಡಲು ಕೆಲವೊಂದು ಉದಾಹರಣೆಗಳನ್ನು ಸಹ ನೀಡಿದರು. ಜೊತೆಗೆ ಕರುಣಾಂಜಲಿಯ ಗುಣಗಳ ಬಗ್ಗೆ ಮನವರಿಕೆ ಮಾಡಿದರು. ಬಳಿಕ ಎಲ್ಲರೂ ಶ್ರೀನಿವಾಸ್ ಪ್ರೀತಿಯನ್ನು ಒಪ್ಪಿ ಶ್ರೀನಿವಾಸ್ ಹಾಗೂ ಕರುಣಾಂಜಲಿ ಮದುವೆಗೆ ಒಪ್ಪಿಗೆ ನೀಡಿದ್ದಾರೆ. ಬಳಿಕ ಸ್ಥಳೀಯ ಮಂಗಳಮುಖಿ ಸಮುದಾಯದ ಸದಸ್ಯರೊಂದಿಗೆ ಶ್ರೀನಿವಾಸ್ ಕುಟುಂಬಸ್ಥರು ಸೇರಿ ಎಲ್ಲಾ ಸಂಪ್ರದಾಯದಂತೆ ಅದ್ದೂರಿಯಾಗಿಯೇ ಮದುವೆ ಮಾಡಿಕೊಟ್ಟಿದ್ದಾರೆ.

Telangana Man Married Transgender 2

ಇನ್ನೂ ಅವರ ಮದುವೆ ಎಲ್ಲರ ಮದುವೆಯಂತೆ ನಡೆದಿದೆ. ಮದುವೆಯ ಮೆರವಣಿಗೆಯನ್ನು ಸಹ ನಡೆಸಿದ್ದು, ಈ ವೇಳೆ ತೃತೀಯ ಲಿಂಗಿ ಸಮುದಾಯದವರು ನೃತ್ಯ ಸಹ ಮಾಡಿ ಸಂಭ್ರಮಿಸಿದ್ದಾರೆ. ಇನ್ನೂ ಶ್ರೀನಿವಾಸ್ ರವರ ಪ್ರೀತಿಯ ವಿಚಾರ ತಿಳಿದಾಗ ಅನೇಕರು ಶಾಕ್ ಆದರೂ ಸಹ ಅವರ ಪ್ರೀತಿಯ ಪಾವಿತ್ರತೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top