Viral Video – ತನ್ನ ಬಾಯ್ ಫ್ರೆಂಡ್ ಮಾತಿಗೆ ಕಟ್ಟುಬಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಮನೆಯ ಲಾಕರ್ ಕದ್ದಿದ್ದಾಳೆ. ಬಳಿಕ ಆಕೆ ಸಿಕ್ಕಿಬಿದಿದ್ದಾಳೆ. ಈ ಘಟನೆ ಗುಜರಾತಿನ ಅಹಮದಾಬಾದಿನ ಶೆಲಾದಲ್ಲಿ ನಡೆದಿದೆ ಎನ್ನಲಾಗಿದೆ. ಸದ್ಯ ಅಪ್ರಾಪ್ತ ಬಾಲಕಿ ಪೊಲೀಸರ ಅತಿಥಿಯಾಗಿದ್ದಾಳೆ. ಅಪ್ರಾಪ್ತ ಬಾಲಕಿ ಮನೆಯಲ್ಲಿದ್ದ ಲಾಕರ್ ಕದ್ದು ತನ್ನ ಪ್ರಿಯಕರನೊಂದಿಗೆ ಬೈಕ್ ನಲ್ಲಿ ಎಸ್ಕೇಪ್ ಆಗುತ್ತಿರುವ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿದೆ.

ಗುಜರಾತಿನ ಅಹಮದಾಬಾದಿನ ಶೆಲಾದಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತ ಬಾಲಕಿ ತನ್ನ ಪ್ರಿಯಕರನ ಮಾತಿಗೆ ಕಟ್ಟುಬಿದ್ದು, ತನ್ನ ಮನೆಯಲ್ಲಿನ ಲಾಕರ್ ಕದಿಯಲು ಪ್ಲಾನ್ ಮಾಡಿದ್ದಾಳೆ. ಅದರಂತೆ ಮನೆಯಲ್ಲಿನ ಲಾಕರ್ ಕದ್ದು ತನ್ನ ಪ್ರಿಯಕರನೊಂದಿಗೆ ಬೈಕ್ ನಲ್ಲಿ ಎಸ್ಕೇಪ್ ಆಗುವ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದ್ದು, ಬಾಲಕಿಯ ಈ ಕೆಲಸಕ್ಕೆ ಭಾರಿ ಆಕ್ರೋಷ ಸಹ ವ್ಯಕ್ತವಾಗಿದೆ. ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ನೀಡಿದ್ದು, ಈ ಘಟನೆ ಕಳೆದ 2024 ಸೆಪ್ಟೆಂಬರ್ ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದ್ದು, ಅಪ್ರಾಪ್ತ ಬಾಲಕಿಯ ತಂದೆ ಯಾವುದೋ ದಾಖಲೆ ಹುಡುಕಾಡುತ್ತಿದ್ದಾಗ ಕಬೋರ್ಡ್‌ನಲ್ಲಿರುವ ಲಾಕರ್ ಇಲ್ಲದೇ ಇದ್ದಿದ್ದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅನುಮಾನದ ಮೇರೆಗೆ ಬಾಲಕಿಯನ್ನು ವಿಚಾರಣೆ ನಡೆಸಿದ್ದಾರೆ. ಆದರೆ ಆಕೆ ತನಗೆ ಏನು ಗೊತ್ತಿಲ್ಲವೆಂದು ಹೇಳಿದ್ದಾಳೆ. ನಂತರ ಸಿಸಿಟಿವಿ ವಿಡಿಯೋ ಪರಿಶೀಲನೆ ಮಾಡಿದಾಗ ಅಸಲೀ ಸತ್ಯ ಹೊರಬಂದಿದೆ. ಬಾಲಕಿ ತನ್ನ ಪ್ರಿಯಕರನೊಂದಿಗೆ ಸೇರಿ ಕಳ್ಳತನ ಮಾಡಿರುವುದು ತಿಳಿದಿದೆ. ನಂತರ ಪ್ರಿಯಕರ ರಿತುರಾಜ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಇಬ್ಬರೂ ಸೇರಿ ಈ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇನ್ನೂ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಬೋಪಾಲ್ ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.