Viral Snake Video: ಮಲಗಿರುವ ಮಹಿಳೆಯ ತಲೆಯ ಕೂದಲಿನಲ್ಲಿ ಹರಿದಾಡಿದ ಹಾವು, ವೈರಲ್ ಆದ ವಿಡಿಯೋ…!

ಸಾಮಾನ್ಯವಾಗಿ ಮಳೆಗಾಲದಲ್ಲಿ ಹಾವುಗಳು ಸೇರಿದಂತೆ ಕೆಲವು ವಿಷ ಕೀಟಗಳು ಮನೆಗಳ ಒಳಗೆ ಸೇರಿಕೊಳ್ಳುತ್ತವೆ. ಅದರಲ್ಲೂ ಹಾವುಗಳು ಮನೆಯ ಒಳಗೆ, ಅಡುಗೆ ಕೋಣೆ, ಶೌಚಾಲಯ, ಬೈಕ್, ಹೆಲ್ಮೇಟ್, ಕಾರುಗಳು, ಶೂಗಳಲ್ಲಿ ಸೇರಿಕೊಂಡಿರುತ್ತವೆ. ಅಂತಹ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ. ಇನ್ನೂ ಹಾವುಗಳನ್ನು ನೋಡಿದ ಕೂಡಲೇ ನೂರು ಅಡಿ ದೂರ ಕೆಲವರು ಓಡುತ್ತಾರೆ. ಇದೀಗ (Viral Snake Video) ಮತ್ತೊಂದು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಮಲಗಿರುವ ಮಹಿಳೆಯ ತಲೆಯ ಕೂದಲಿನಲ್ಲಿ ಹಾವು ಹರಿದಾಡುತ್ತಿರುವುದು ಕಂಡು ಬಂದಿದೆ.

snake in women head 0

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಮಲಗಿರುತ್ತಾರೆ. (Viral Snake Video) ಅವರ ಕೂದಲಿನಲ್ಲಿ ಹಾವು ತೆವಳುತ್ತಿದೆ. ಹಾವು ಆಕೆಯ ಕೂದಲನ್ನು ಸುತ್ತಿ, ಅವಳ ತಲೆಯ ಹಿಂಭಾಗಕ್ಕೆ ಹೋಗಿದೆ. ಆದರೆ ಮಹಿಳೆ ಮಾತ್ರ ತನಗೆ ಏನು ತಿಳಿದೇ ಇಲ್ಲ ಎಂಬಂತೆ ಇದ್ದಾರೆ. ಈ ವಿಡಿಯೋವನ್ನು @kashikyatra ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ (Viral Snake Video)ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ ವೈರಲ್ ಸಹ ಆಗಿದೆ. ಲೇಹ್ ಲಡಾಖ್ ಬೈಕ್ ರೈಡ್ ಟೂರ್‍ ಪ್ಯಾಕೇಜ್ ಎಂಬ ಟೈಟಲ್ ನಡಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ನೀವು ಈ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ. : https://www.instagram.com/p/C97vvjBSYSF

ಇನ್ನೂ 2 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಹೊಂದಿರುವ @kashikyatra ಬಳಕೆದಾರರು ತನ್ನ ಖಾತೆಯಲ್ಲಿ ಈ ರೀತಿಯ ಹಲವು (Viral Snake Video) ಭಯಾನಕ ಹಾವಿನ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಲೇಹ್ ಲಡಾಖ್ ಬೈಕ್ ರೈಡ್ ಟೂರ್‍ ಪ್ಯಾಕೇಜ್ ಎಂಬ ಟೈಟಲ್ ನಡಿ ಹಂಚಿಕೊಂಡ ವಿಡಿಯೋ ಎಲ್ಲರ ಗಮನ ಸೆಳೆದಿದೆ. ವಿಡಿಯೋವನ್ನು 226 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, 128 ಸಾವಿರ ಮಂದಿ ಶೇರ್‍ ಮಾಡಿದ್ದಾರೆ. (Viral Snake Video) ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಅನೇಕರು ಮಹಿಳೆಯ ಕೂದಲನ್ನು ಸುರಕ್ಷಿತ ಹಾಗೂ ಬೆಚ್ಚಗಿನ ಸ್ಥಳವೆಂದು ಭಾವಿಸಿ ಅಲ್ಲಿ ಸೇರಿದೆ ಎಂತಲೂ, (Viral Snake Video) ಮತ್ತೊಬ್ಬರು ಹರ್‍ ಹರ್‍ ಮಹಾದೇವ್ ಎಂತಲೂ, ಮತ್ತೆ ಕೆಲವರು ಈ ರೀತಿಯ ಹಾವುಗಳು ಹಾನಿಕಾರಕವಲ್ಲ ಎಂತಲೂ ಕಾಮೆಂಟ್ ಗಳ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Leave a Comment

Your email address will not be published. Required fields are marked *

Scroll to Top