Crime News: ಕೆಲಸ ಸಿಕ್ಕಿದೆ ಅಂತಾ ಪಾರ್ಟಿ ಕೊಡಿಸಿದ ಗೆಳತಿಯನ್ನೆ ಅತ್ಯಾಚಾರ ಮಾಡಿದ ಸ್ನೇಹಿತರು….!

ದೇಶದಲ್ಲಿ ಅತ್ಯಾಚಾರಿಗಳಿಗೆ ಕಠಿಣ ಕಾನೂನು ಇದ್ದರೂ ಅತ್ಯಾಚಾರಗಳು, ದೌರ್ಜನ್ಯಗಳು ನಿಲ್ಲುತ್ತಿಲ್ಲ. ಒಂದಲ್ಲ ಒಂದು ಕಡೆ ಅಂತಹ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ತನಗೆ ಸಾಫ್ಟ್ ವೇರ್‍ ಕೆಲಸ ಸಿಕ್ಕಿದೆ ಎಂದು ಗೆಳೆಯನಿಗೆ ತಿಳಿಸಿದ್ದಾಳೆ. ಅದಕ್ಕೆ ಅವನು ಪಾರ್ಟಿ ಕೇಳಿದ್ದಾನೆ. ಆ ಯುವತಿ ಕೆಲಸ ಸಿಕ್ಕ ಖುಷಿಯಲ್ಲಿ ಎಣ್ಣೆ ಪಾರ್ಟಿ ಕೊಡಿಸುವುದಾಗಿ ಹೇಳುತ್ತಾಳೆ. ಪಾರ್ಟಿಗೆ ತನ್ನ ಇನ್ನೊಬ್ಬ ಸ್ನೇಹಿತನೊಂದಿಗೆ ಬಂದ ಆ ಗೆಳೆಯ ಚೆನ್ನಾಗಿ ಕುಡಿದು ಗೆಳತಿಯನ್ನೆ ಕೋಣೆಯಲ್ಲಿ ಕೂಡಿಹಾಕಿ ಅತ್ಯಾಚಾರ (Crime News) ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇಂದಿನ ಯುವಜನತೆ ಹೆತ್ತವರಿಗಿಂತ ಸ್ನೇಹಿತರನ್ನೇ ಹೆಚ್ಚಾಗಿ ನಂಬುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವತಿ ತನ್ನ ಬಾಲ್ಯ ಸ್ನೇಹಿತನನ್ನು ನಂಬಿ ಮೋಸ ಹೋಗಿದ್ದಾಳೆ. 2ನೇ ತರಗತಿಯಿಂದ 10ನೇ ತರಗತಿಯವರೆಗೆ ಒಂದೇ ಶಾಲೆಯಲ್ಲಿ ಓದುತ್ತಾ ಬಂದಿದ್ದ ಸ್ನೇಹಿತನನ್ನು ಯುವತಿ ತುಂಬಾನೆ ನಂಬಿದ್ದಳು. ಆತನೊಂದಿಗೆ ಬಹುತೇಕ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಳಂತೆ. ಅದರಂತೆ ಆ ಯುವತಿಗೆ ಸಾಫ್ಟ್ ವೇರ್‍ ಕಂಪನಿಯಲ್ಲಿ ಕೆಲಸ ಸಿಕ್ಕಿದೆ. ಈ ಖುಷಿಯನ್ನು ಆಕೆ ತನ್ನ ಸ್ನೇಹಿತನೊಂದಿಗೆ ಹಂಚಿಕೊಂಡಿದ್ದಾಳೆ. ಆಕೆ ಈ ವಿಚಾರವನ್ನು ಹೇಳುತ್ತಿದ್ದಂತೆ ಆತ ಪಾರ್ಟಿ ಕೇಳಿದ್ದಾನೆ. (Crime News)ಆಕೆ ನೀನು ಏನು ಕೇಳುತ್ತೀಯಾ ಅದೇ ಪಾರ್ಟಿ ಕೊಡಿಸುತ್ತೇನೆ ಎಂದು ಹೇಳಿದ್ದಾರೆ. ಆಗ ಆತ ಎಣ್ಣೆ ಪಾರ್ಟಿ ಕೊಡಿಸುವಂತೆ ಕೇಳಿದ್ದು, ಅದಕ್ಕೆ ಆಕೆ ಸಹ ಒಪ್ಪಿದ್ದಾಳೆ.

Friends raped girlfriend 1

ಇನ್ನೂ ಆ ಯುವತಿಯ ಗೆಳೆಯ ಹೇಳಿದ್ದ ಫ್ಯಾಮಿಲಿ ಬಾರ್‍ ಅಂಡ್ ರೆಸ್ಟೋರೆಂಟ್ ನಲ್ಲಿ ಪಾರ್ಟಿ ಕೊಡಿಸುವುದಾಗಿ ಹೇಳಿದ್ದಾಳೆ. ಈ ಪಾರ್ಟಿಗೆ ಆತ ಮತ್ತೊಬ್ಬ ಸ್ನೇಹಿತನನ್ನು ಕರೆದುಕೊಂಡು ಬಂದಿದ್ದಾನೆ. (Crime News) ಅಲ್ಲಿ ಎಲ್ಲರೂ ಸೇರಿ ಪಾರ್ಟಿ ಮಾಡಿದ್ದಾರೆ. ಇಬ್ಬರೂ ಯುವಕರು ಕಂಟ ಪೂರ್ತಿ ಕುಡಿದಿದ್ದಾರೆ. ಬಳಿಕ ಆ ಯುವತಿಯನ್ನು ಬಲವಂತವಾಗಿ ಎತ್ತಕೊಂಡು ರೆಸ್ಟೋರೆಂಟ್ ನ ಕೋಣೆಯೊಂದರಲ್ಲಿ ಹಾಕಿ ಅತ್ಯಾಚಾರ ಮಾಡಿದ್ದಾರೆ. ಅಂದಹಾಗೆ ಈ ಘಟನೆ ಕಳೆದ ಜು.29 ರ ಸೋಮವಾರ ಸಂಜೆ ನಡೆದಿದೆ. ಹೈದರಾಬಾದ್ ನ ವನಸ್ಥಲಿಪುರಂ ನಲ್ಲಿರುವ ಬಾರ್‍ ನಲ್ಲಿ ನಡೆದಿದೆ. ಯುವತಿಯ ಬಾಲ್ಯ ಸ್ನೇಹಿತರ ಗೌತಮ್ ರೆಡ್ಡಿ ಹಾಗೂ ಆತನ ಸ್ನೇಹಿತ ಅತ್ಯಾಚಾರ ಮಾಡಿದ್ದಾರೆ. ಈ ಸಂಬಂಧ ಯುವತಿ ಪೊಲೀಸರಿಗೆ (Crime News) ದೂರು ನೀಡಿದ್ದು, ಈ ಸಂಬಂಧ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Leave a Comment

Your email address will not be published. Required fields are marked *

Scroll to Top