Friday, June 13, 2025
HomeNationalViral News: ನಂಗೆ ಅಕ್ಕನ ಗಂಡನೇ ಬೇಕು, ಅವನನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದ ಯುವತಿ?

Viral News: ನಂಗೆ ಅಕ್ಕನ ಗಂಡನೇ ಬೇಕು, ಅವನನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದ ಯುವತಿ?

ಸಮಾಜದಲ್ಲಿ ಆಗಾಗ ಕೆಲವೊಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಅಂತಹುದೇ ಘಟನೆಯೊಂದು ತೆಲಂಗಾಣದಲ್ಲಿ (Viral News) ನಡೆದಿದೆ. ತನಗೆ ಸ್ವಂತ ಅಕ್ಕನ ಗಂಡನ ಮೇಲೆ ಇಷ್ಟಪಟ್ಟ ಯುವತಿ, ಆತನನ್ನೆ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ. ಅದಕ್ಕೆ ಮನೆಯವರು ಒಪ್ಪದೇ ಇದ್ದಾಗ ಕ್ರಿಮಿನಾಶಕ ಸೇವಿಸಿ ಆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ. ಅಂದಹಾಗೆ ಈ ಘಟನೆ ಹೈದರಾಬಾಆದ್ ನ ಹಯಾತ್ ನಗರದಲ್ಲಿ ನಡೆದಿದೆ ಎನ್ನಲಾಗಿದೆ.

ಹೈದರಾಬಾಆದ್ ನ ಹಯಾತ್ ನಗರದಲ್ಲಿ ಸ್ವಂತ ಅಕ್ಕನ ಗಂಡನನ್ನೆ ಯುವತಿ ಪ್ರೀತಿಸಿದ್ದಾಳೆ. ಅಕ್ಕನ ಮದುವೆಯಾದ ದಿನದಿಂದಲೇ ತನ್ನ ಭಾವನನ್ನು ಪ್ರೀತಿಸುತ್ತಿದ್ದಳಂತೆ. ಆತನನ್ನೆ ಮದುವೆಯಾಗುವುದಾಗಿ ಪೋಷಕರಿಗೆ ತಿಳಿಸಿದ್ದಾಳೆ. ಈ ವೇಳೆ ಪೋಷಕರು ಆ ರೀತಿ ಮಾಡಿದರೇ ನಿಮ್ಮ ಅಕ್ಕನ ಜೀವನ ಹಾಳಾಗುತ್ತದೆ, ಇದನ್ನು ಇಲ್ಲಿಗೆ ಬಿಟ್ಟು ಬಿಡು ಎಂದು ಬುದ್ದಿವಾದ ಹೇಳಿದ್ದಾರೆ. ಆದರೆ ಹಠಮಾರಿ ಯುವತಿ ಭಾವನ ಜೊತೆಗೆ ನನ್ನ ಜೀವನ ನಡೆಸಲು ತೀರ್ಮಾನಿಸಿದ್ದಾನೆ, ಅವನೊಂದಿಗೆ ನನ್ನ ಮದುವೆ ಮಾಡಿ ಎಂದು ಹಠ ಹಿಡಿದಿದ್ದಾಳೆ. ಅದಕ್ಕೆ ಪೋಷಕರು ಒಪ್ಪದ ಹಿನ್ನೆಲೆಯಲ್ಲಿ ಆಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

yonger sister wants marry his sister husband 1

ಮೃತ ದುರ್ದೈವಿಯನ್ನು ಇಂದಿರಾ ಎಂದು ಗುರ್ತಿಸಲಾಗಿದೆ. ತನ್ನ ಸ್ವಂತ ಅಕ್ಕನ ಗಂಡನ ಮೇಲೆ ಪ್ರೀತಿ ಬೆಳೆಸಿಕೊಂಡ ಇಂದಿರಾ ಆತನನ್ನೆ ಮದುವೆ ಮಾಡಿಕೊಡುವಂತೆ ಕುಟುಂಬದ ಹಿರಿಯರ ಜೊತೆಗೆ ದುಂಬಾಲು ಬಿದಿದ್ದಾಳೆ. ಆದರೆ ಆಕೆ ಕುಟುಂಬಸ್ಥರು ಆಕೆಯ ಮನವೊಲಿಸಲು ಮುಂದಾಗಿದ್ದಾರೆ. ಈ ಸಮಯದಲ್ಲೇ ಆಕೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯಿಂದ ಹೊರಗೆ ಹೋಗಿ ಇಂದಿರಾ ಕ್ರಿಮಿನಾಶಕ ಸೇವನೆ ಮಾಡಿದ್ದಾಳೆ. ಮನೆಯ ಬಳಿ ಪ್ರಜ್ಞಾಹೀನ ಸ್ಥೀತಿಯಿಲ್ಲಿ ಕುಸಿದು ಬಿದ್ದಿದ್ದ ಇಂದಿರಾಳನ್ನು ನೋಡಿದ ಕುಟುಂಬಸ್ಥರು ಆಕೆಯನ್ನು ಹುಸ್ಮಾನಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದಿರಾ ಮೃತಪಟ್ಟಿದ್ದಾಳೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಕೊಂಡಿದ್ದು, ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular