Train Accident: ಉತ್ತರ ಪ್ರದೇಶದಲ್ಲಿ ಭೀಕರ ದುರಂತ, ಹಳಿ ತಪ್ಪಿದ ರೈಲು, ನಾಲ್ವರ ದುರ್ಮರಣ…!

ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯಲ್ಲಿ ಭೀಕರ ದುರಂತವೊಂದು (Train Accident) ನಡೆದಿದ್ದು, ಈ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಒಡಿಶಾದ ಬಾಲಸೋರ್‍-ಪಶ್ವಿಮ ಬಂಗಾಳದ ದಾರ್ಜಿಲಿಂಗ್ ನಲ್ಲಿ ನಡೆದ ಅಪಘಾತವನ್ನು ಈ ದುರಂತ ನೆನಪಿಸಿದೆ. ಚಂಡಿಗಢ-ದಿಬ್ರುಗಡ ಎಕ್ಸ್ ಪ್ರೆಸ್  ರೈಲಿನ ಹಲವು ಕೋಚ್ ಗಳು ಹಳಿ ತಪ್ಪಿದ್ದರಿಂದ ಈ ದುರಂತ ಸಂಭವಿಸಿದೆ. ಈ ದುರಂತದಲ್ಲಿ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಚಂಡೀಗಢ ನಿಲ್ದಾಣದಿಂದ ಬುಧವಾರ ರಾತ್ರಿ 11.35ಕ್ಕೆ ಹೊರಟಿದ್ದ ರೈಲು ಅಸ್ಸಾಂನ ದಿಬ್ರುಗಢಕ್ಕೆ ತೆರಳುತ್ತಿತ್ತು, ಮಾರ್ಗಮಧ್ಯೆ ಹಲವು ಕೋಚ್ ಗಳು ಹಳಿ ತಪ್ಪಿದ ಪರಿಣಾಮ (Train Accident)  ದುರಂತ ಸಂಭಸಿದೆ.  ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್ ರೈಲಿನ (Chandigarh-Dibrugarh Express Train) ಹಲವು ಕೋಚ್‌ಗಳು ಹಳಿ ತಪ್ಪಿದ್ದರಿಂದ ರೈಲು ಅಪಘಾತ (Train Accident)  ಸಂಭವಿಸಿದೆ. ಗೋಂಡಾ ಮತ್ತು ಜಿಲಾಹಿ ನಡುವಿನ ಪಿಕೌರಾ ಪ್ರದೇಶದಲ್ಲಿ ಅಪಘಾತ (Train Accident) ಸಂಭವಿಸಿದ್ದು, 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರೇ, ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಇನ್ನೂ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿದೆ. 15 ಆಂಬ್ಯುಲೆನ್ಸ್ ಗಳು ಹಾಗೂ 40 ಸದಸ್ಯರ ವೈದ್ಯಕೀಯ ತಂಡ ಸ್ಥಳಕ್ಕೆ ಬಂದಿವೆ.

Chandigarh Dibrugarh Express Train Accident

ಇನ್ನೂ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಘಟನಾ ಸ್ಥಳಕ್ಕೆ (Train Accident) ಭೇಟಿ ನೀಡಿದ್ದಾರೆ. ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಹಾರ ಕ್ರಮಗಳನ್ನು ಶೀಘ್ರವಾಗಿ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ. ಸಿಎಂ ಭೇಟಿ ಬೆನ್ನಲ್ಲೇ ರಾಜ್ಯ ವಿಪತ್ತು ನಿರ್ವಹಣಾ ತಡ ಸ್ಥಳಕ್ಕೆ (Train Accident)  ಧಾವಿಸಿ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

Next Post

Viral News: ನಂಗೆ ಅಕ್ಕನ ಗಂಡನೇ ಬೇಕು, ಅವನನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದ ಯುವತಿ?

Thu Jul 18 , 2024
ಸಮಾಜದಲ್ಲಿ ಆಗಾಗ ಕೆಲವೊಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಅಂತಹುದೇ ಘಟನೆಯೊಂದು ತೆಲಂಗಾಣದಲ್ಲಿ (Viral News) ನಡೆದಿದೆ. ತನಗೆ ಸ್ವಂತ ಅಕ್ಕನ ಗಂಡನ ಮೇಲೆ ಇಷ್ಟಪಟ್ಟ ಯುವತಿ, ಆತನನ್ನೆ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ. ಅದಕ್ಕೆ ಮನೆಯವರು ಒಪ್ಪದೇ ಇದ್ದಾಗ ಕ್ರಿಮಿನಾಶಕ ಸೇವಿಸಿ ಆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ. ಅಂದಹಾಗೆ ಈ ಘಟನೆ ಹೈದರಾಬಾಆದ್ ನ ಹಯಾತ್ ನಗರದಲ್ಲಿ ನಡೆದಿದೆ ಎನ್ನಲಾಗಿದೆ. ಹೈದರಾಬಾಆದ್ ನ ಹಯಾತ್ ನಗರದಲ್ಲಿ ಸ್ವಂತ ಅಕ್ಕನ […]
yonger sister wants marry his sister husband
error: Content is protected !!