Viral – ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಅತ್ತೆ ಸೊಸೆ ಜಗಳ ಅನ್ನೋದು ಆಗಾಗ ನಡೆಯುತ್ತಲೇ ಇರುತ್ತದೆ. ಅನೇಕ ಕಾರಣಗಳಿಂದ ಆಗಾಗ ಜಗಳ ನಡೆದು, ಕೆಲವೊಂದು ಜಗಳಗಳು ನ್ಯಾಯಾಲಯ, ಪೊಲೀಸ್ ಠಾಣೆಯವರೆಗೂ ಹೋದಂತಹ ಘಟನೆಗಳ ಬಗ್ಗೆ ಸಹ ಕೇಳಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಹೋಗಿದ್ದ ಅತ್ತೆ ಸೊಸೆ ನ್ಯಾಯಾಲಯದ ಆವರಣದಲ್ಲಿಯೇ ಕೈ ಕೈ ಮಿಲಾಸಿಕೊಂಡು ಜಗಳವಾಡಿದ್ದಾರೆ. ಇದನ್ನು ಕಂಡ ಅಲ್ಲಿದ್ದವರು ಬೆಚ್ಚಿ ಬಿದ್ದಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

ಕೆಲವು ದಿನಗಳ ಹಿಂದೆಯಷ್ಟೆ ಸೊಸೆಯೊಬ್ಬಳು, ತನ್ನ ಅತ್ತೆಯನ್ನು ಕೊಲೆ ಮಾಡಲು ಡಾಕ್ಟರ್ ಬಳಿ ಮಾತ್ರೆಗಳನ್ನು ಕೇಳಿರುವ ಸುದ್ದಿಯೊಂದು ತುಂಬಾನೆ ವೈರಲ್ ಆಗಿತ್ತು. ಇದೀಗ ಅದೇ ರೀತಿಯ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದಿದೆ. ಕೋರ್ಟ್ ವಿಚಾರಣೆಗಾಗಿ ಅತ್ತೆ ಸೊಸೆ ನ್ಯಾಯಾಲಯಕ್ಕೆ ಹೋಗಿದ್ದರು. ಆದರೆ ಕೋರ್ಟ್ ಆವರಣದಲ್ಲಿಯೇ ಒಬ್ಬರೂ ಜಗಳವಾಡಿದ್ದಾರೆ. ಜಗಳಕ್ಕೂ ಮುನ್ನಾ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಬಳಿಕ ಮಾತುಕತೆ ತಾರಕಕ್ಕೇರಿದೆ. ಇವರ ಜೊತೆಗೆ ಸಂಬಂಧಿಕರೂ ಸಹ ಜಗಳ ಆಡಲು ಶುರು ಮಾಡಿದ್ದಾರೆ. ಇಬ್ಬರೂ ಗುಂಪು ಪರಸ್ಪರ ದೈಹಿಕ ಹಲ್ಲೆ ಮಾಡಿಕೊಂಡಿದ್ದಾರೆ. ಅಲ್ಲಿದ್ದವರು ಈ ಜಗಳ ನಿಲ್ಲಿಸಲು ತುಂಬಾನೆ ಪ್ರಯತ್ನಿಸಿದ್ದಾರೆ. ಆದರೂ ಅದು ಸಾಧ್ಯವಾಗದ ಕಾರಣ ಪೊಲೀಸರು ಮಧ್ಯಪ್ರವೇಶಿಸಿ ಜಗಳ ನಿಲ್ಲಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ಈ ಸಂಬಂಧ ವಿಡಿಯೋವನ್ನು @gharkekaleshಎಂಬ ಹೆಸರಿನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅತ್ತೆ ಹಾಗೂ ಸೊಸೆ ನಡುವೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಜಗಳವನ್ನು ಕಾಣಬಹುದು. ವಿಚಾರಣೆಯ ಸಂಬಂಧ ಕೋರ್ಟ್‌ಗೆ ಬರುತ್ತಿದ್ದಂತೆ ಅತ್ತೆ-ಸೊಸೆ ನಡುವೆ ವಾಗ್ವಾದ ಶುರುವಾಗಿದೆ. ಬಳಿಕ ಮಾತಿಗೆ ಮಾತು ಬೆಳೆದಿದೆ. ಈ ವಾಗ್ವಾದ ಅತಿರೇಕಕ್ಕೆ ತಿರುಗಿ ಕೋರ್ಟ್ ಆವರಣದಲ್ಲಿಯೇ ಇಬ್ಬರೂ ಜಗಳವಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಫೆ.21 ರಂದು ಹಂಚಿಕೊಳ್ಳಲಾಗಿದ್ದಯ, ಲಕ್ಷಾಂತರ ವೀಕ್ಷಣೆ ಕಂಡಿದೆ. ಜೊತೆಗೆ ವಿಡಿಯೋ ನೋಡಿದ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.