ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕೆಲವೊಂದು ರಾಜ್ಯಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರವಾಸಿ ತಾಣಗಳ ಭೇಟಿಗೆ ನಿರ್ಬಂಧ ಸಹ ವಿಧಿಸಲಾಗಿದೆ. ಆದರೂ ಸಹ ಕೆಲವು ಪ್ರಯಾಣಿಕರು ಅಪಾಯಕಾರಿ ತಾಣಗಳಿಗೆ ಪ್ರವಾಸ ಕೈಗೊಂಡು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದೀಗ ಮಹಾರಾಷ್ಟ್ರದ ಖ್ಯಾತ ಪ್ರವಾಸಿ ತಾಣ ಛತ್ರಪತಿ ಶಿವಾಜಿ ಕೋಟೆಗೆ ಟ್ರೆಕ್ಕಿಂಗ್ ಗೆ ಹೋಗಿದ್ದ ಪ್ರವಾಸಿಗರು ಪ್ರವಾಹಕ್ಕೆ ಸಿಲುಕಿ ಸಂಕಷ್ಟ (Viral Flood Video) ಎದುರಿಸುತ್ತಿದ್ದಾರೆ. ಅವರನ್ನು ಕಾಪಾಡಲು ಹರಸಾಹಸ ಪಡಬೇಕಾಗಿದೆ.
ಈ ಘಟನೆ ಮಹಾರಾಷ್ಟ್ರದ ರಾಯ್ ಘಡದಲ್ಲಿ ನಡೆದಿದೆ. ರಾಯ್ ಘಡ ಕೋಟೆ ಶಿವಾಜಿ ಮಹಾರಾಜ ಆಳಿದ ಕೋಟೆಯಾಗಿದೆ. ಈ ಕೋಟೆಗೆ ತಲುಪಲು ಟ್ರೆಕ್ಕಿಂಗ್ ಮೂಲಕವೇ ತೆರಳಬೇಕಿದೆ. ಬೇಸಿಗೆ ಕಾಲದಲ್ಲಂತೂ ಇದೊಂದು ಅಪಾಯಕಾರಿ ಟ್ರೆಕ್ಕಿಂಗ್ ಎಂದೇ ಹೇಳಲಾಗುತ್ತದೆ. ಆಯ ತಪ್ಪಿದರೇ ಪ್ರಪಾತಕ್ಕೆ ಉರುಳುವ ಸಾಧ್ಯತೆ ತುಂಬಾನೆ ಇದೆ. ಆದ್ದರಿಂದ ಮಳೆಗಾಲದಲ್ಲಿ ಹೆಚ್ಚಾಗಿ ಈ ಕೋಟೆಗೆ ಪ್ರವಾಸಿಗರು ಬರುತ್ತಿರುತ್ತಾರೆ. ಮಳೆಗಾಲದಲ್ಲಿ ಜಲಪಾತ, ಸುಂದರ ಪ್ರಕೃತಿಯನ್ನು ಸಹ ವೀಕ್ಷಣೆ ಮಾಡಬಹುದಾಗಿದೆ. ಸದ್ಯ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣದಿಂದ ಪ್ರವಾಸಿಗರು ಕೋಟೆಯ ಅರ್ಧ ಭಾಗಕ್ಕೆ ಹೋಗುತ್ತಿದ್ದಂತೆ ಭಾರಿ ಪ್ರವಾಹ ಸೃಷ್ಟಿಯಾಗಿದೆ. ಬೆಟ್ಟದ ಮೇಲಿಂದ ನೀರು ಏಕಾಏಕಿ ಹರಿದುಬಂದಿದೆ. ಕೋಟೆಯ ಮೆಟ್ಟಿಲು ಹಾಗೂ ಬೆಟ್ಟದ ಬದಿಗಳಿಂದ ನೀರು ಪ್ರವಾಹದ (Viral Flood Video) ರೀತಿಯಲ್ಲಿ ಹರಿದುಬಂದಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಪ್ರಾಣ ಉಳಿಸಿಕೊಳ್ಳು ಪರದಾಡುವಂತಾಗಿತ್ತು ಎನ್ನಲಾಗಿದೆ.
https://x.com/chaitralicMT/status/1810184211732599255
ಇನ್ನೂ ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಈ ಪ್ರವಾಹ ಸೃಷ್ಟಿಯಾಗಿದ್ದು, ಮೆಟ್ಟಿಲು ಹತ್ತುವಾಗಿ ಹಾಕಿದ್ದಂತಹ ಕಬ್ಬಿಣದ ರಾಡ್ ಗಳನ್ನು ಹಿಡಿದುಕೊಂಡು ಪ್ರವಾಸಿಗರು ತಮ್ಮ ಜೀವ ಉಳಿಸಿಕೊಂಡರು. ಸದ್ಯ ಈ ಸಂಬಂಧ ವಿಡಿಯೋ (Viral Flood Video) ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಇನ್ನೂ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ. ಸುಮಾರು ತಾಸುಗಳ ಕಾಲ ನಡೆದಂತಹ ರಕ್ಷಣಾ ಕಾರ್ಯದ ಮೂಲಕ ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಇನ್ನೂ ಜುಲೈ 31 ರವರೆಗೆ ರಾಯ್ ಘಡ ಸೇರಿದಂತೆ ಪರ್ವತಾರೋಹಿ ಕೋಟೆಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಜತೆಗೆ ಕೋಟೆಯ ಪ್ರವೇಶ ದ್ವಾರದ ಬಳಿ ಪೊಲೀಸರಿದ್ದು, ಪ್ರವಾಸಿಗರನ್ನು ಕೋಟೆಗೆ ಹೋಗಲು ಬಿಡದೇ ನಿರ್ಬಂಧ ಹಾಕಿದ್ದಾರೆ.