Accident News: ಹುಟ್ಟುಹಬ್ಬದ ದಿನದಂದೇ ಸ್ಮಶಾನ ಸೇರಿದ ಯುವತಿ, ಕಾರು ಅಪಘಾತದಲ್ಲಿ ಮೃತಪಟ್ಟ ಚಿಕ್ಕಬಳ್ಳಾಪುರ ಯುವತಿ….!

ಹುಟ್ಟು ಖಚಿತ ಸಾವು ನಿಶ್ಚಿತ ಎಂಬಂತೆ ಸಾವು ಯಾರಿಗೆ ಯಾವಾಗ ಬರುತ್ತದೆ ಎಂಬುದು ತಿಳಿದಿರುವುದಿಲ್ಲ. ನೋಡ ನೋಡುತ್ತಿದ್ದಂತೆ ಅನೇಕರು ಹಾಗೆಯೇ ಸಾಯುತ್ತಾರೆ. ಇದೀಗ ಚಿಕ್ಕಬಳ್ಳಾಪುರ ಯುವತಿಯೊಬ್ಬಳು ತನ್ನ ಹುಟ್ಟುಹಬ್ಬದಂದೆ ಮೃತಪಟ್ಟಿದ್ದಾರೆ. ಕಾರು ಅಪಘಾತದಲ್ಲಿ (Accident News) ಕಾಲೇಜಿನ ವಿದ್ಯಾರ್ಥಿನಿ ಇಹಲೋಕ ತ್ಯೆಜಿಸಿದ ಘಟನೆಯೊಂದು ಚಿಕ್ಕಬಳ್ಳಾಪುರದ ನಗರದ ಹೊರವಲಯದಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರ ತಾಲ್ಲೂಕಿನ‌ ಹೊನ್ನೇನಹಳ್ಳಿ ಗ್ರಾಮದ ವಿದ್ಯಾರ್ಥಿ ರಕ್ಷಿತಾ ಎಂದು ಗುರ್ತಿಸಲಾಗಿದೆ. ರಕ್ಷಿತಾ ಬೆಂಗಳೂರಿನ ನಿಟ್ಟೆ ಮಿನಾಕ್ಷಿ ಕಾಲೇಜಿನಲ್ಲಿ ಬಿಕಾಂ ಪದವಿ ಓದುತ್ತಿದ್ದಳು. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮೃತಳು ಮನೆಗೆ ಕಾರಿನಲ್ಲಿ ಬರುತ್ತಿದ್ದಳು. ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ ಹೊನ್ನೆನಹಳ್ಳಿ ಗ್ರಾಮಕ್ಕೆ ಬರುವ ವೇಳೆ ನಾಗಾರ್ಜುನ ಕಾಲೇಜಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‍ ಗೆ ಕಾರು ಡಿಕ್ಕಿ (Accident News) ಹೊಡೆದಿದೆ. ಈ ಪರಿಣಾಮವಾಗಿ ರಕ್ಷಿತಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದೆ.

chikkaballapur girl died in accident 0

ಮನುಷ್ಯರಿಗೆ ಸಾವು ಯಾವಾಗ ಹೇಗೆ ಬರುತ್ತದೆ ಎಂಬುದನ್ನು ಹೇಳೋಕೆ ಸಾಧ್ಯವೇ ಇಲ್ಲ ಎನ್ನಬಹುದಾಗಿದೆ. ಇದಕ್ಕೆ ಉದಾಹರಣೆ ರಕ್ಷಿತಾ ಸಾವು ಎನ್ನಬಹುದಾಗಿದೆ. ಹುಟ್ಟುಹಬ್ಬದಂದೆ ರಕ್ಷಿತಾ ಇಹಲೋಕ ತ್ಯೆಜಿಸಿರೋದು ಅವರ ಕುಟುಂಬ ಹಾಗೂ ಸ್ನೇಹಿತರಿಗೆ ಭರಿಸಲಾಗದ ನೋವು ತಂದುಕೊಟ್ಟಿದೆ. ಸದ್ಯ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ (Accident News). ಚಾಲಕನಿಗಾಗಿ ಪೊಲೀಸರು ಶೋಧ ನಡೆಸುತತಿದ್ದಾರೆ. ಈ ಪ್ರಕರಣ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *

Scroll to Top