Crime News: ಅಶ್ಲೀಲ ವಿಡಿಯೋ ನೋಡಿದ ಮದರಸಾ ಶಿಕ್ಷಕ, ಬಾಲಕನನ್ನು ಅತ್ಯಾಚಾರವೆಸಗಿ ಕೊಲೆ ಮಾಡಿಬಿಟ್ಟ…!

ಇಂದಿನ ಸಮಾಜದಲ್ಲಿ ಕಾಮುಕರಿಗೆ ಕಠಿಣ ಶಿಕ್ಷೆ ನೀಡುತ್ತಿದ್ದರೂ ಸಹ ಲೈಂಗಿಕ ದೌರ್ಜನ್ಯಗಳು, ಅತ್ಯಾಚಾರಗಳು ಮಾತ್ರ ಕಡಿಮೆಯಾಗಿಲ್ಲ. ಇದೀಗ ಉತ್ತರ ಪ್ರದೇಶದಲ್ಲಿ ಬಾಲಕನ ಮೇಲೆ ಮದರಸಾ ಶಿಕ್ಷಕ ಅತ್ಯಾಚಾರವೆಸಗಿ ಕೊಲೆ (Crime News) ಮಾಡಿದ್ದಾನೆ. ಪ್ರತಿನಿತ್ಯ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ಶಿಕ್ಷಕ ಬಾಲಕ ವಿದ್ಯಾರ್ಥಿಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದಾನೆ. ಉತ್ತರ ಪ್ರದೇಶದ ಫತೇಪುರ್‍ ಜಿಲ್ಲೆಯ ಸೌರಾ ಎಂಬ ಗ್ರಾಮದಲ್ಲಿರುವ ಮದರಸಾವೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಉತ್ತರ ಪ್ರದೇಶದ ಫತೇಪುರ್‍ ಜಿಲ್ಲೆಯ ಸೌರಾ ಎಂಬ ಗ್ರಾಮದಲ್ಲಿರುವ ಮದರಸಾದ ಮಕ್ಕಳು ಆಟವಾಡಲು ಹೊರಗೆ ಹೋಗಿದ್ದರು. ಈ ವೇಳೆ ಓರ್ವ ಬಾಲಕ (9) ಮಾತ್ರ ಮೆಟ್ಟಿಲುಗಳ ಮೂಲಕ ಬೇರೆ ರೂಂಗೆ ಹೋಗಿದ್ದನ್ನು ಮದರಸಾ ಶಿಕ್ಷಕ ಹಫೀಜ್ ದಿಲ್ನವಾಜ್ ನೋಡಿದ್ದಾನೆ. ಬಳಿಕ ಆ ಬಾಲಕನನ್ನು ಎಳೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ, ಬಳಿಕ ಬಾಲಕನನ್ನು ಕೊಲೆ ಸಹ ಮಾಡಿದ್ದಾನೆ. ಇನ್ನೂ ಬಾಲಕನಿಗೆ ಶಿಕ್ಷಕ ಸೊಡೊಮೈಸ್ ಮಾಡಿದ್ದಾನೆ ಎಂಬ ಆರೋಪ ಸಹ ಕೇಳಿಬಂದಿದೆ. ಆತನ ಮೇಲೆ ಅತ್ಯಾಚಾರ ಮಾಡಿದ್ದಾನೆ, ಬಾಲಕ ಕಿರುವುದನ್ನು ತಡೆಯಲು ಬಾಯಿ ಮುಚ್ಚಿದ್ದಾನೆ, ಉಸಿರುಗಟ್ಟಿಸಿ ಬಾಲಕನನ್ನು ಕೊಲೆ (Crime News) ಮಾಡಿದ್ದಾನೆ ಎನ್ನಲಾಗಿದೆ.

madarasa teacher killed student 1

ಆರೋಪಿ ಹಫೀಜ್ ದಿಲ್ನವಾಜ್ ಬಾಲಕನ ಮೇಲೆ ಅತ್ಯಾಚಾರವೆಸಗಿ ಅವನ ಕೈಗಳನ್ನು ಒಟ್ಟಿಗೆ ಕಟ್ಟಿಹಾಕಿ, ಬಳಿಕ ಅವನ ಪಾದಗಳನ್ನು ಕಟ್ಟಿಹಾಕಿದ್ದಾನೆ. ನಂತರ ಬಾರಿಗೆ ಟೇಪ್ ಹಾಕಿದ್ದಾನೆ. ಇದರಿಂದಾಗಿ ಹುಡುಗ ಕಿರುಚಾಡಲು ಸಾಧ್ಯವಾಗಲಿಲ್ಲ. ಜೊತೆಗೆ ಉಸಿರಾಡಲು ಸಾಧ್ಯವಾಗದೇ ಬಾಲಕ ಮೃತಪಟ್ಟಿದ್ದಾನೆ (Crime News). ಈ ವಿಚಾರವನ್ನು ಹಫೀಜ್ ತನ್ನ ಸೋದರ ಮಾವ ಮೌಲ್ವಿ ರಖಿಯುದ್ದೀನ್ ಎಂಬಾತನಿಗೆ ತಿಳಿಸಿದ್ದಾನೆ. ಬಳಿಕ ಇಬ್ಬರೂ ಒಟ್ಟಾಗಿ ಬಾಲಕನ ಶವವನ್ನು ಬಾವಿಗೆ ಹಾಕಿದ್ದಾರೆ. ಬಾಲಕನನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾಗಿ ಹಫೀಜ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top