CPIM Protest: ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನ ಬಿಡುಗಡೆಗೊಳಿಸುವಂತೆ ಸಿಪಿಎಂ ಪ್ರತಿಭಟನೆ

ಬಾಗೇಪಲ್ಲಿ:  ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಪ್ರೋತ್ಸಾಹ ಧನ 10 ರೂ.ಗಳಿಗೆ ಏರಿಕೆ ಮಾಡುವಂತೆ ಡಾ.ಎಂ.ಎಸ್ ಸ್ವಾಮಿನಾಥನ್ ಆಯೋಗದ ಸಿಫಾರಸಿನಂತೆ  ಲೀಟರ್ ಹಾಲಿಗೆ 50 ರೂ.ಗಳನ್ನು ನಿಗಧಿಗೊಳಿಸುವುದು ಸೇರಿದಂತ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಪಿಐ(ಎಂ) ಕಾರ್ಯಕರ್ತರು ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಬಳಿ ಇರುವ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಪುತ್ಥಳಿ ಮುಂಭಾಗದಲ್ಲಿ ಪ್ರತಿಭಟನೆ (CPIM Protest) ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ಮುಖಂಡರು ಕಳೆದ 7 ತಿಂಗಳಿಂದ ರೈತರಿಗೆ ನೀಡಬೇಕಾಗಿರುವ ಪ್ರೋತ್ಸಾಹ ಧನವನ್ನು ತಡೆಹಿಡಿದಿರುವ ಪರಿಣಾಮ ಹೈನುಗಾರಿಕೆಯನ್ನೇ ನಂಭಿ ಜೀವನ ನಡೆಸುತ್ತಿರುವ ರೈತ ಕುಟುಂಬಗಳು  ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಹಕಾರಿ ತತ್ವದಲ್ಲಿ ಬಲಗೊಂಡಿರುವ  ನಂದಿನಿ ಸಂಸ್ಥೆಯ ಮಾರುಕಟ್ಟೆಯನ್ನು ವಿಸ್ತರಿಸಿ ಹಾಲು ಉತ್ಪಾಧಕರನ್ನು ಸಂರಕ್ಷಿಸಿ ಹೈನುಗಾರಿಕೆಯನ್ನು ಉಳಿಸಿಬೇಕಾಗಿದ್ದ  ಸರ್ಕಾರವೇ ಈ ಕ್ಷೇತ್ರದಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಮತ್ತು ಖಾಸಗಿ  ಕಂಪನಿಗಳಿಗೆ ಅವಕಾಶವನ್ನು ಕೊಟ್ಟಂತಾಗುತ್ತದೆ ಎಂದು ಆರೋಪಿಸಿದರು.

CPIM protest for milk producers

ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ಧನ ಬಿಡುಗಡೆಗೊಳಿಸುವಂತೆ, ಪ್ರತಿ ಜಿಲ್ಲೆಗೊಂದು ಕೆ.ಎಂ.ಎಫ್ ನಿಂದ  ಹಾಲು ಉತ್ಪಾಧಕರ ಮಕ್ಕಳಿಗೆ ವಸತಿ  ವಿದ್ಯಾರ್ಥಿನಿಲಯ ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಈ ವೇಳೆ  (CPIM Protest) ಸಿಪಿಐ(ಎಂ) ಪಕ್ಷದ ಮುಖಂಡರಾದ ಚೆನ್ನರಾಯಪ್ಪ, ಅಶ್ವಥಪ್ಪ, ನರಸಿಂಹರೆಡ್ಡಿ, ರಘುನಾಥರೆಡ್ಡಿ, ಮುನಿವೆಂಕಟಪ್ಪ, ಜಿ.ಕೃಷ್ಣಪ್ಪ, ಅಂಜಿನಪ್ಪ, ರಾಮಾಂಜಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

Next Post

Viral Flood Video: ಪ್ರವಾಹದಲ್ಲಿ ಸಿಲುಕಿದ ಶಿವಾಜಿ ಕೋಟೆಗೆ ತೆರಳಿದ ಪ್ರವಾಸಿಗರು, ವೈರಲ್ ಆದ ವಿಡಿಯೋ….!

Tue Jul 9 , 2024
ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕೆಲವೊಂದು ರಾಜ್ಯಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರವಾಸಿ ತಾಣಗಳ ಭೇಟಿಗೆ ನಿರ್ಬಂಧ ಸಹ ವಿಧಿಸಲಾಗಿದೆ. ಆದರೂ ಸಹ ಕೆಲವು ಪ್ರಯಾಣಿಕರು ಅಪಾಯಕಾರಿ ತಾಣಗಳಿಗೆ ಪ್ರವಾಸ ಕೈಗೊಂಡು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದೀಗ ಮಹಾರಾಷ್ಟ್ರದ ಖ್ಯಾತ ಪ್ರವಾಸಿ ತಾಣ ಛತ್ರಪತಿ ಶಿವಾಜಿ ಕೋಟೆಗೆ ಟ್ರೆಕ್ಕಿಂಗ್ ಗೆ ಹೋಗಿದ್ದ ಪ್ರವಾಸಿಗರು ಪ್ರವಾಹಕ್ಕೆ ಸಿಲುಕಿ ಸಂಕಷ್ಟ (Viral Flood Video) ಎದುರಿಸುತ್ತಿದ್ದಾರೆ. ಅವರನ್ನು ಕಾಪಾಡಲು […]
flood in maharashtra raigad fort
error: Content is protected !!