Video: ದೇಶದ ರಕ್ಷಣೆಗಾಗಿ ತಮ್ಮ ಸರ್ವಸ್ವವನ್ನೂ ಮುಡಿಪಾಗಿಡುವ ಯೋಧರ ಬದ್ಧತೆಗೆ ಸಾಕ್ಷಿಯಾದ ಒಂದು ಹೃದಯಸ್ಪರ್ಶಿ ಘಟನೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಬೋರ್ಗಾಂವ್ ಪೇಠ್ ನಿವಾಸಿಯಾದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧೆ ರೇಷ್ಮಾ ಇಂಗಳೆ ಅವರು, ತಮ್ಮ ಕೇವಲ ಒಂದು ವರ್ಷದ ಮಗುವನ್ನು ತೊರೆದು ಗಡಿ ಕರ್ತವ್ಯಕ್ಕೆ ಮರಳಲು ತಕ್ಷಣವೇ ಹೊರಟಿದ್ದಾರೆ. ಈ ಭಾವನಾತ್ಮಕ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Video – ತಾಯಿಯ ಮಡಿಲಲ್ಲಿ ಮಗು, ಗಡಿಯಿಂದ ಬಂದ ಕರೆ!
ರೇಷ್ಮಾ ಅವರು ತಮ್ಮ ಮಗುವನ್ನು ಮಡಿಲಲ್ಲಿ ಆಡಿಸುತ್ತಿದ್ದಾಗ, ಅಮೃತಸರ ಗಡಿಯಿಂದ ಕರ್ತವ್ಯಕ್ಕೆ ಹಾಜರಾಗುವಂತೆ ತುರ್ತು ಕರೆ ಬಂದಿದೆ. ದೇಶ ಕರೆಯುತ್ತಿದ್ದಾಗ, ತಾಯಿಯ ಹೃದಯ ಚೂರುಚೂರಾದರೂ, ಕರ್ತವ್ಯವೇ ಮೊದಲು ಎಂದು ನಿರ್ಧರಿಸಿದ ರೇಷ್ಮಾ ಅವರು ಕಠಿಣ ನಿರ್ಧಾರ ಕೈಗೊಂಡರು. Read this also : ಪಾಕ್ ಪ್ರಚೋದಿತ ಗುಂಡಿನ ದಾಳಿಗೆ ಬಾಗೇಪಲ್ಲಿ ಗಡಿಯ ಯೋಧ ಹುತಾತ್ಮ; ಕಂಬನಿ ಮಿಡಿದ ಕರುನಾಡು, ಮುರಳಿ ನಾಯಕ್ ಅಮರ್ ರಹೇ…!
Video – ಕೂಸು ಅಳುತ್ತಿದ್ದರು, ಕಣ್ಣೀರ ಮಡುವಿನಲ್ಲೇ ಕರ್ತವ್ಯಕ್ಕೆ ಹೊರಟ ತಾಯಿ!
ರೇಷ್ಮಾ ಅವರು ತಮ್ಮ ಮಗುವನ್ನು ಮಡಿಲಿನಿಂದ ಇಳಿಸಿ, ಸಮವಸ್ತ್ರ ಧರಿಸಿ ಹೊರಡಲು ಸಿದ್ಧರಾದರು. ಈ ವೇಳೆ ಅಮ್ಮನ ಅಗಲಿಕೆಯನ್ನು ಅರಿಯದ ಆ ಮುದ್ದು ಕಂದಮ್ಮ ಜೋರಾಗಿ ಅಳಲು ಪ್ರಾರಂಭಿಸಿತು. ಆ ಮಗುವಿನ ಆರ್ತನಾದವು ಅಲ್ಲಿದ್ದವರ ಕಣ್ಣಂಚುಗಳನ್ನು ಒದ್ದೆ ಮಾಡಿತು. ಆದರೆ, ರೇಷ್ಮಾ ಅವರು ತಮ್ಮ ಕಣ್ಣೀರನ್ನು ನಿಯಂತ್ರಿಸಿಕೊಂಡು ಗಟ್ಟಿಯಾಗಿ ನುಡಿದರು, “ದೇಶದ ಭದ್ರತೆ ಮೊದಲು, ಆಮೇಲೆ ಕುಟುಂಬ. ನನ್ನ ಮಗ ದೊಡ್ಡವನಾದಾಗ, ಮಾತೃಭೂಮಿಗಾಗಿ ತನ್ನ ತಾಯ್ತನವನ್ನೇ ತ್ಯಾಗ ಮಾಡಿದ ನನ್ನ ಬಗ್ಗೆ ಹೆಮ್ಮೆಪಡುತ್ತಾನೆ” ಎಂದು ಭಾವುಕರಾಗಿ ಹೇಳಿದರು.
ವಿಡಿಯೋ ವೀಕ್ಷಿಸಿ: Click Here
Video – ವೈರಲ್ ಆದ ವಿಡಿಯೋ, ಸ್ಫೂರ್ತಿಯಾದ ಯೋಧೆ!
ರೇಷ್ಮಾ ಅವರ ಈ ಧೈರ್ಯ ಮತ್ತು ಕರ್ತವ್ಯ ಪ್ರಜ್ಞೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದೆ. ಅನೇಕರು ಅವರ ಬದ್ಧತೆ ಮತ್ತು ದೇಶಪ್ರೇಮವನ್ನು ಕೊಂಡಾಡುತ್ತಿದ್ದಾರೆ. ರೇಷ್ಮಾ ಅವರ ಈ ನಿರ್ಧಾರವು ಮನೆ, ಕುಟುಂಬ ಮತ್ತು ರಾಷ್ಟ್ರದ ಮೇಲಿನ ಕರ್ತವ್ಯವನ್ನು ಸಮಾನವಾಗಿ ನಿಭಾಯಿಸುವ ಪ್ರತಿಯೊಬ್ಬ ಮಹಿಳೆಗೂ ಸ್ಫೂರ್ತಿಯಾಗಿದೆ. ಇದು ಅವರ ಕುಟುಂಬಕ್ಕೆ ಒಂದು ಭಾವನಾತ್ಮಕ ಕ್ಷಣವಾಗಿದ್ದರೂ, ಅವರ ದೇಶಪ್ರೇಮ ಮತ್ತು ಕರ್ತವ್ಯ ನಿಷ್ಠೆಗೆ ಇಡೀ ಕುಟುಂಬ ಹೆಮ್ಮೆಪಡುತ್ತಿದೆ. ರೇಷ್ಮಾ ಅವರ ಈ ಕಥೆ ನಿಜಕ್ಕೂ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುವಂತಹದ್ದು.