Union Budget 2024: ಸ್ವಂತ ಉದ್ಯಮ ಆರಂಭಿಸುವವರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ, ಮುದ್ರಾ ಯೋಜನೆಯಡಿ ಸಿಗಲಿದೆ 20 ಲಕ್ಷ ಸಾಲ….!

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್  (Union Budget 2024) ಮಂಡಿಸಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹಣಕಾಸಿನ ಸಹಾಯದ (Loan) ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಮುದ್ರಾ ಯೋಜನೆಯಡಿ ಈ ಹಿಂದೆ ನೀಡಲಾಗುತ್ತಿದ್ದ ಮೊತ್ತವನ್ನು 10 ಲಕ್ಷದಿಂದ 20 ಲಕ್ಷಗಳಿಗೆ ಏರಿಕೆ ಮಾಡಿದ್ದಾರೆ. ಸ್ವಂತ ಉದ್ಯೋಗ ಅಥವಾ ವ್ಯವಹಾರ ಆರಂಭಿಸುವವರಿಗೆ ಮೋದಿ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ.

Budget 2024 updates 1

ಕೇಂದ್ರ ಸರ್ಕಾರ 2015 ರಲ್ಲಿ ಮುದ್ರಾ ಯೋಜನೆಯನ್ನು ಜಾರಿಗೆ ತಂದಿದ್ದು, ಕಳೆದ 9 ವರ್ಷಗಳಲ್ಲಿ 40 ಕೋಟಿಗೂ ಅಧಿಕ ಜನರು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.  2015 ವರ್ಷದಲ್ಲಿ ಆರಂಭವಾದ ಈ ಯೋಜನೆಯಡಿ ಹೊಸ ಉದ್ಯಮ ಅಥವಾ ವ್ಯವಹಾರ ವಿಸ್ತರಣೆ ಮಾಡಲು 50 ಸಾವಿರದಿಂದ 10 ಲಕ್ಷದ ವರೆಗೆ ಸಾಲ ನೀಡಲಾಗುತ್ತಿತ್ತು. ಈ ಸಾಲದ ಮೊತ್ತವನ್ನು ಇದೀಗ 20 ಲಕ್ಷದವರೆಗೆ ಏರಿಕೆ ಮಾಡಿದೆ (Union Budget 2024). ಈ ಮುದ್ರಾ ಯೋಜನೆಯಡಿ ಬೀದಿ ಬದಿ ವ್ಯಾಪಾರಿಯಿಂದ ಹಿಡಿದು ಸಣ್ಣ ವ್ಯಾಪಾರಸ್ಥರು ವ್ಯವಹಾರ ಆರಂಭ ಹಾಗೂ ವಿಸ್ತರಣೆಗಾಗಿ ಯಾವುದೇ ಗ್ಯಾರಂಟಿಯಿಲ್ಲದೇ ಸಾಲದ ನೆರವು ಪಡೆಯಬಹುದಾಗಿತ್ತು. ಈ ಸಾಲವನ್ನು ಯಾವುದೇ ಬ್ಯಾಂಕ್ ಅಥವಾ ಮೈಕ್ರೋ ಫೈನಾನ್ಸ್ ಕಂಪನಿ, ಎನ್.ಬಿ.ಎಫ್.ಸಿ ಮುಖಾಂತರ ಪಡೆಯಬಹುದಾಗಿದೆ.

ಇನ್ನೂ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಸಾಲವನ್ನು ಮೂರು ಶ್ರೇಣಿಗಳಲ್ಲಿ ಒದಗಿಸಲಾಗುತ್ತದೆ. ಶಿಶು ಸಾಲ ಎಂದು ಮೊದಲ ಶ್ರೇಣಿಯನ್ನು ಕರೆಯಲಾಗುತ್ತದೆ. ಈ ಶ್ರೇಣಿಯಲ್ಲಿ ಗ್ಯಾರಂಟಿಯಿಲ್ಲದೇ 50 ಸಾವಿರ ಸಾಲ, ಎರಡನೇ ಶ್ರೇಣಿ ಕಿಶೋರ ದಲ್ಲಿ 50 ಸಾವಿರದಿಂದ 5 ಲಕ್ಷದ ವರೆಗೆ ಸಾಲ ನೀಡಲಾಗುತ್ತದೆ. ತರುಣ ಶ್ರೇಣಿಯಲ್ಲಿ 5 ಲಕ್ಷದಿಂದ 10 ಲಕ್ಷದವರೆಗೆ ಸಾಲ ನೀಡಲಾಗುತ್ತಿದ್ದು, ಇದೀಗ ಈ ಸಾಲದ ಮೊತ್ತವನ್ನು 20 ಲಕ್ಷಕ್ಕೆ ಏರಿಕೆ (Union Budget 2024) ಮಾಡಲಾಗಿದೆ.

Budget 2024 updates 2

ಇನ್ನೂ (Union Budget 2024) ಕೇಂದ್ರ ಬಜೆಟ್ 2024 ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರ 7 ನೇ ಬಜೆಟ್ ಆಗಿದೆ. ಕೆಲವು ನೀತಿಗಳ ಬದಲಾವಣೆ, ಆಮದು ಸುಂಕ, ತೆರಿಗೆ ನೀತಿಗಳ ಬದಲಾವಣೆಯ ಕಾರಣದಿಂದ ಕೆಲವೊಂದು ವಸ್ತುಗಳ ಬೆಲೆ ಇಳಿಕೆಯಾದರೇ, ಕೆಲವೊಂದು ವಸ್ತುಗಳ ಬೆಲೆ ಏರಿಕೆ ಯಾಗಿದೆ.

ಯಾವುದು ಅಗ್ಗ: ಕ್ಯಾನ್ಸರ್ ಔಷಧಿ, ಮೊಬೈಲ್, ಬೆಳ್ಳಿ-ಬಂಗಾರ, ಪ್ಲಾಟಿನಂ, ಮೀನು ಸೇರಿದಂತೆ ಸಮುದ್ರ ಆಹಾರ, ಸೋಲಾರ್ ಶಕ್ತಿ ಬಿಡಿ ಭಾಗ, ಚಪ್ಪಲಿ ಸೇರಿದಂತೆ ಪಾದರಕ್ಷೆ, ಕ್ಯಾಮೆರಾ ಲೆನ್ಸ್, ಎಲೆಕ್ಟ್ರಿಕ್ ವಾಹನ, ಕಂಪ್ರೆಸ್ಡ್ ಗ್ಯಾಸ್ ಮೊದಲಾದ ವಸ್ತುಗಳ ದರ ಇಳಿಕೆಯಾಗಿದೆ.

ಯಾವುದು ದುಬಾರಿ: ಪ್ಲಾಸ್ಟಿಕ್ – ಫ್ಲೆಕ್‌ ತೆರಿಗೆ ಹೆಚ್ಚಳ, ಪರಿಸರದ ಹಿತದೃಷ್ಟಿಗೆ ಮಾರಕ, ಅಮುದು ಬಟ್ಟೆ ಸೇರಿದಂತೆ ಕೆಲವೊಂದು ವಸ್ತುಗಳ ಬೆಲೆ ಏರಿಕೆಯಾಗಿದೆ.

Budget 2024 updates 0

ಇನ್ನೂ ಈ ಬಾರಿಯ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ರವರು ಕೆಲವೊಂದು ಮಹತ್ತರ ಘೊಷಣೆಗಳನ್ನು ಮಾಡಿದ್ದಾರೆ. ಕೃಷ್ಟಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವ ಜೊತೆಗೆ, ಉದ್ಯೋಗ ಸೃಷ್ಟಿಗೂ ಒತ್ತು ನೀಡಲಾಗಿದೆ. ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವಂತಹವರಿಗೆ ಸರ್ಕಾರ ಪ್ರೋತ್ಸಾಹ  ಧನ ನೀಡಲಾಗುತ್ತದೆ.  ಇನ್ನು ಬಿಹಾರ ಹಾಗೂ ಆಂಧ್ರ ಪ್ರದೇಶಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ. ಎನ್‌ಡಿಎ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದ ಈ ಎರಡು ರಾಜ್ಯಗಳಿಗೆ ಸಾವಿರಾರು ಕೋಟಿ ರೂಪಾಯಿ ವಿಶೇಷ ಅನುದಾನ ನೀಡಲಾಗಿದೆ.  ಜೊತೆಗೆ  ಒಂದು ಕೋಟಿ ಯುವ ಸಮೂಹಕ್ಕೆ ಇಂಟರ್ನ್‌ಶಿಪ್‌ ಯೋಜನೆ, ಬಡವರಿಗೆ ಒಂದು ಕೋಟಿ ಮನೆ ನಿರ್ಮಾಣ, ಪ್ರವಾಸೋದ್ಯಮಗಳ ಮೂಲಕ ಆದಾಯ ವೃದ್ಧಿಗೆ ಕ್ರಮ, ಮೂಲಭೂತ ಸೌಕರ್ಯ ಅಭಿವೃದ್ಧಿಗೂ ಈ ಬಾರಿಯ ಬಜೆಟ್‌ ಒತ್ತು ನೀಡಿದೆ.

Leave a Reply

Your email address will not be published. Required fields are marked *

Next Post

Traffic Rules: ವಾಹನ ಚಾಲಕರಿಗೆ ಎಚ್ಚರಿಕೆ, ಆಗಸ್ಟ್ ನಿಂದ ಈ ನಿಯಮ ಉಲ್ಲಂಘಿಸಿದರೇ ಭಾರಿ ದಂಡವಂತೆ?

Tue Jul 23 , 2024
ರಾಜ್ಯದಲ್ಲಿ ಆಗಸ್ಟ್ ಮಾಹೆಯಿಂದ ಕಠಿಣ ಸಂಚಾರಿ ನಿಯಮಗಳನ್ನು (Traffic Rules) ಅನುಸರಿಸಲಿದೆ ಎಂದು ಹೇಳಲಾಗಿದೆ. ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವಂತಹವ ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸಲು ಪೊಲೀಸರು (Traffic Rules) ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಆಗಸ್ಟ್ ಮಾಹೆಯಿಂದ ಕಠಿಣ ನಿಯಮಗಳನ್ನು (Traffic Rules) ಅನುಸರಿಸಲಿದೆ. ಹೈಬೀಮ್ ಲೈಟ್ ಹಾಗೂ ಕಣ್ಣು ಕುಕ್ಕುವಂತಹ ಎಲ್.ಇ.ಡಿ ಲೈಟ್ ಅಳವಡಿಸಿರುವ ವಾಹನಗಳ ವಿರುದ್ದ ಪ್ರಕರಣ ದಾಖಲಿಸುವುದು, ಒನ್ ವೇ, […]
New traffic rules from august
error: Content is protected !!