ಬಾಗೇಪಲ್ಲಿ: (Bagepalli News) ಸರ್ಕಾರದ ವಿವಿಧ ಯೋಜನೆಯಡಿಯಲ್ಲಿ ವಿವಿಧ ಇಲಾಖೆಗಳಿಗೆ ವಿತರಣೆಯಾಗುವ ಅಕ್ಕಿ, ಗೋಧಿ ಇತ್ಯಾಧಿ ಆಹಾರ ಪದಾರ್ಥಗಳನ್ನು ಖರೀಧಿಸಿರುವ ಯಾವುದೇ ದಾಖಲೆಗಳು ಇಲ್ಲದೆ ತಾಲೂಕಿನ ಪೂಲವಾರಪಲ್ಲಿ ಗ್ರಾಮದಲ್ಲಿ ದಾಸ್ತಾನು ಮಾಡಿದ್ದ ಗೋದಾಮಿನ ಮೇಲೆ ಜಿ.ಪಂ ಸಿಇಓ, ತಹಸೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ತಂಡ ಶುಕ್ರವಾರ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದಿದ್ದು, ಈ ಸಂಬಂಧ ಆಹಾರ ನಿರೀಕ್ಷಕಿ ಪುಷ್ಪ ರವರು ನೀಡಿದ ದೂರಿನ ಮೇರೆಗೆ (Bagepalli News) ಬಾಗೇಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಸರ್ಕಾರದ ವಿವಿಧ (Bagepalli News) ಯೋಜನೆಯಡಿಯಲ್ಲಿ ಬಿಸಿಯೂಟ, ಅಕ್ಷರದಾಸೋಹ, ಅಂಗನವಾಡಿ ಇತ್ಯಾಧಿ ಇಲಾಖೆಗಳಿಗೆ ವಿತರಣೆಯಾಗುವ ಸರ್ಕಾರಿ ಪಡಿತರ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ತಹಸೀಲ್ದಾರ್ ಮನಿಷ್.ಎನ್., ತಾ.ಪಂ ಕಾರ್ಯರ್ನಿವಹಣಾಧಿಕಾರಿ ರಮೇಶ್ ಕುಮಾರ್, ಶಿಶು ಅಭಿವೃದ್ದಿ ಯೋಜನಾಧಿಕಾರಿ ರಾಮಚಂದ್ರ, ರಾಜಸ್ವ ನಿರೀಕ್ಷಕ ವೇಣುಗೋಪಾಲ್, ಆಹಾರ ನಿರೀಕ್ಷಕ ಕೆ.ವಿ.ಪ್ರಭಾಕರ್ ಸೇರಿದಂತೆ ಸಂಬಂಧಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ (Bagepalli News) ಶುಕ್ರವಾರ ತಾಲೂಕಿನ ಕಸಬಾ ಹೋಬಳಿ ಪರಗೋಡು ಗ್ರಾ.ಪಂ ವ್ಯಾಪ್ತಿಯ ಪೂಲವಾರಿಪಲ್ಲಿ ಗ್ರಾಮದ ನಾಗರಾಜ್ ರವರಿಗೆ ಸೇರಿದ್ದು ಎನ್ನಲಾಗಿರುವ ಮನೆಯ ಗೋದಾಮಿಗೆ ದಾಳಿ ನಡೆಸಿದ ಸಂದರ್ಭದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ವಿತರಣೆಯಾಗುವ 50 ಕೆ.ಜಿ. ತೂಕದ ಗೋಣಿ ಚೀಲದ 50 ಅಕ್ಕಿ, 50 ಕೆ.ಜಿ ತೂಕದ ಪ್ಲಾಸ್ಟಿಕ್ ಚೀಲ 49 ಅಕ್ಕಿಮೂಟೆ ಒಟ್ಟು 109 ಅಕ್ಕಿ ಮೂಟೆಗಳು, 50 ಕೆ.ಜಿ ತೂಕದ ಪ್ಲಾಸ್ಟಿಕ್ ಚೀಲದ 1 ರಾಗಿ ಮೂಟೆ, 50 ಕೆ.ಜಿ ತೂಕದ 442 ಹುರುಳಿ ಮೂಟೆಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಿಂದ ಅಂಗನವಾಡಿಗಳಿಗೆ ನೀಡಿರುವ 2 ಕೆ.ಜಿ 600 ಗ್ರಾಂ ತೂಕದ 4 ಪುಷ್ಠಿ ಪಾಕೇಟ್, ಅನ್ನ ಕಿಚಿಡಿ ಪಾಕೇಟ್‍ಗಳು, 500 ಗ್ರಾಂ ದ 6 ಮಸಾಲ ಪಾಕೇಟ್‍ಗಳು, 500 ಗ್ರಾಂದ ಉಪ್ಪಿನ ಪಾಕೇಟ್‍ಗಳು, 133 ಖಾಲಿ ಗೋಣಿಚೀಲಗಳು, 200 ಪ್ಲಾಸ್ಟಿಕ್ ಖಾಲಿ ಚೀಲಗಳು ಇತ್ಯಾಧಿಗಳನ್ನು ವಶಕ್ಕೆ ಪಡೆದು ಆಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಗೋದಾಮಿಗೆ ಬೀಗಮುಂದ್ರೆ ಹಾಕಲಾಗಿದೆ.
ಈ ಸಂಬಂಧ ಮನೆ ಮಾಲೀಕ ಪೂಲವಾರಪಲ್ಲಿ ಗ್ರಾಮದ (Bagepalli News) ನಾಗರಾಜ್ ರವರನ್ನು ವಿಚಾರಣೆ ಮಾಡಿದಾಗ ಇದೇ ಗ್ರಾಮದ ವೆಂಕಟೇಶ್ ಎಂಬುವವರು ಗೋದಾಮನ್ನ 7 ತಿಂಗಳ ಹಿಂದೆ ಬಾಡಿಗೆಗೆ ಪಡೆದುಕೊಂಡಿದ್ದು ಇಲ್ಲಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಿದ್ದರು ಎಂಬುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ವಿತರಿಸಲಾಗುವ ಆಹಾರ ಧನ್ಯಗಳನ್ನ ಶಿಶು ಅಭಿವೃದ್ದಿ ಇಲಾಖೆಗೆ ಸಂಬಂಧಿಸಿದ ಆಹಾರ ಪದಾರ್ಥಗಳ ಕಿಟ್‍ಗಳನ್ನು ಹಾಗೂ ಹುರುಳಿ ಕಾಳುನ್ನು ಆಕ್ರಮವಾಗಿ ಸಂಗ್ರಹಿಸಿರುವವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸುವಂತೆ (Bagepalli News) ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಈ ದೂರಿನ ಅನ್ವಯ ಬಾಗೇಪಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.
ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಕಣ್ಣು ತಪ್ಪಿಸಿ ಇಷ್ಟು ದೊಡ್ಡ ಮಟ್ಟದಲ್ಲಿ ಲೂಟಿ ಮಾಡಲು ಸಾದ್ಯವಾಗಲ್ಲ ಇದರ ಹಿಂದೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರು ಶಾಮೀಲಾಗಿರಬಹುದು ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಮಕ್ಕಳಿಗೆ ಹಾಗೂ ಬಡವರಿಗೆ ಸಿಗಬೇಕಾದ ಪಡಿತರ ಆಹಾರ ಪದಾರ್ಥಗಳನ್ನು ದಂಧೆಕೋರರು ಕಾಳಸಂತೆಯಲ್ಲಿ ಮಾರಾಟ ಮಾಡಲು ಆಕ್ರಮವಾಗಿ ಗೋದಾಮುಗಳಿಗೆ ಸಾಗಾಣಿಕೆ ಮಾಡುತ್ತಿದ್ದರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಬಡವರ ಅನ್ನಕ್ಕೆ ಕನ್ನ ಹಾಕುವ ಇಂತಹ ದಂಧೆಕೋರರ ವಿರುದ್ದ ಕಾನೂನು ರೀತ್ಯ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಬೇಕು (Bagepalli News) ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ (Bagepalli News) ಸಂದರ್ಭದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ನಿಟ್ಟಾಳಿ, ತಹಸೀಲ್ದಾರ್ ಮನಿಷಾ .ಎನ್, ಸಿಡಿಪಿಓ ರಾಮಚಂದ್ರ, ಆಹಾರ ನಿರೀಕ್ಷಕಿ ಪುಷ್ಪ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ನರಸಿಂಹರೆಡ್ಡಿ, ಪರಗೋಡು ಪಿಡಿಓ ನಾಗಮಣಿ ಮತ್ತಿತರರು ಇದ್ದರು.