...
HomeStateProtest News: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತ ಮಾರ್ಕ್ಸ್ವಾದಿ ಲೆನಿನ್ (ರೆಡ್ ಪ್ಲ್ಯಾಗ್) ಪಕ್ಷದ...

Protest News: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತ ಮಾರ್ಕ್ಸ್ವಾದಿ ಲೆನಿನ್ (ರೆಡ್ ಪ್ಲ್ಯಾಗ್) ಪಕ್ಷದ ಪ್ರತಿಭಟನೆ

ಬಾಗೇಪಲ್ಲಿ:  ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತ ಮಾರ್ಕ್ಸ್‌ವಾದಿ ಲೆನಿನ್ (ರೆಡ್ ಪ್ಲ್ಯಾಗ್) ಪಕ್ಷದ ತಾಲೂಕು ಸಮಿತಿಯ ಕಾರ್ಯಕರ್ತರು  ತಾಲೂಕು ಕಚೇರಿ ಮುಂದೆ ಪ್ರತಿಭಟನೆ (Protest News) ನಡೆಸಿದರು. ನಾನಾ ಬೇಡಿಕೆಗಳ ಈಡೇರಿಕೆಗಾಗಿ ಡಾ.ಎಚ್.ಎನ್.ವೃತ್ತದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಬಂದ  ಪ್ರತಿಭಟನಕಾರರು ನಂತರ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು (Protest News) ಉದ್ದೇಶಿಸಿ ಮಾತನಾಡಿದ  ಭಾರತ ಮಾರ್ಕ್ಸ್‌ವಾದಿ ಲೆನಿನ್ ಪಕ್ಷದ ರಾಜ್ಯ ಕಾರ್ಯದರ್ಶಿ ರಾಯಚೂರು ಬಸವಲಿಂಗಪ್ಪ, ಪಟ್ಟಣದಲ್ಲಿ ವಾಸಿಸುತ್ತಿರುವ  ಕೃಷಿ, ಕೂಲಿ ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತ ಬಡವರು ಬಾಡಿಗೆ  ಮನೆಗಳಲ್ಲಿ ವಾಸವಿರುವ ನಿವೇಶನ ರಹಿತರಿಗೆ ಪಟ್ಟಣಕ್ಕೆ ಸಮೀಪದಲ್ಲಿರುವ ಪಾತಬಾಗೇಪಲ್ಲಿ ಸರ್ವೆ ನಂ. 102 ರಲ್ಲಿ ಉಳಿದಿರುವ  72 ಎಕರೆ  ಸರ್ಕಾರಿ ಭೂಮಿಯಲ್ಲಿ  ನಿವೇಶನಗಳನ್ನು ಮಂಜೂರು ಮಾಡುವಂತೆ ಒತ್ತಾಯಿಸಿದರು.

ತಾಲೂಕಿನ ಕೃಷಿ ಕಾರ್ಮಿಕರಿಗೆ  ಭೂರಹಿತ ಬಡವರಿಗೆ 50,53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿದ ಸರ್ಕಾರಿ ಭೂಮಿ ಸಾಗುವಳಿದಾರರಿಗೆ ಸಾಗುವಳಿ ಚೀಟಿ ಮತ್ತು ಪಟ್ಟಾ ನೀಡಬೇಕೆಂದ ಅವರು ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಗಳನ್ನು ರೂಪಿಸಬೇಕಾದ ಅಗತ್ಯವಿದೆ, ಶಾಸಕರು ಇದರ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕೆಂದರು. ರೈತರ ಸಂಪೂರ್ಣ ಸಾಲ ನೀಡಬೇಕು,  ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಬೇಕು, ಈ ಭಾಗಕ್ಕೆ ಕೃಷ್ಣ ನದಿ ನೀರಿನ ಪಾಲು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ (Protest News) ಒತ್ತಾಯಿಸಿದರು.

ಈ ಸಂದರ್ಭದಲ್ಲಿ (Protest News) ಭಾರತ ಮಾರ್ಕ್ಸ್‌ವಾದಿ ಲೆನಿನ್‍ ವಾದಿ ಪಕ್ಷದ  ಜಿಲ್ಲಾ ಕಾರ್ಯದರ್ಶಿ ಕೆ.ವಿ.ರಾಮಚಂದ್ರ, ತಾಲೂಕು ಕಾರ್ಯದರ್ಶಿ ಆರ್.ಎಂ.ಚಲಪತಿ, ಸದಸ್ಯರಾದ ಆದಿಶೇಷು, ರಘುನಾಥರೆಡ್ಡಿ, ಬಾಷಾ, ಮಧುಸೂಧನ್‍ರೆಡ್ಡಿ ಮತ್ತಿತರರು ಇದ್ದರು.

by Admin
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

Most Popular

Seraphinite AcceleratorOptimized by Seraphinite Accelerator
Turns on site high speed to be attractive for people and search engines.