Cricket Commentary : ಈ ರೀತಿಯ ಕ್ರಿಕೆಟ್ ಕಾಮೆಂಟ್ರಿ ನೀವು ಕೇಳಿರೋಕೆ ಸಾಧ್ಯವೇ ಇಲ್ಲ, ಸಂಸ್ಕೃತದ ಕಾಮೆಂಟ್ರಿ ವಿಡಿಯೋ ವೈರಲ್…!

ಅನೇಕ ಕ್ರೀಡಾಭಿಮಾನಿಗಳಿಗೆ ಕ್ರಿಕೆಟ್ ಎಂದರೇ ತುಂಬಾನೆ ಅಚ್ಚುಮೆಚ್ಚು ಎನ್ನಲಾಗುತ್ತದೆ. (Cricket Commentary)  ಮುದುಕರಿಂದ ಹಿಡಿದು ಪುಟ್ಟ ಬಾಲಕರಿಗೂ ಕ್ರಿಕೆಟ್ ಮೇಲೆ ತುಂಬಾನೆ ಇಷ್ಟ (Cricket Commentary) ಎಂದು ಹೇಳಬಹುದು. ಇನ್ನೂ ಈ ಕ್ರಿಕೆಟ್ ಕಾಮೆಂಟ್ರಿಯನ್ನು ಇಂಗ್ಲೀಷ್, ಹಿಂದಿ, ಕನ್ನಡ ತೆಲುಗು ಮೊದಲಾದ ಭಾಷೆಗಳಲ್ಲಿ ಕೇಳಿರುತ್ತೇವೆ. ಆದರೆ ಈ ಕ್ರಿಕೆಟ್ ಕಾಮೆಂಟ್ರಿಯನ್ನು ನೀವು ಕೇಳಿರೋಕೆ ಸಾಧ್ಯವೇ ಇಲ್ಲ. ಗಲ್ಲಿ ಕ್ರಿಕೆಟ್ ವೇಳೆ ಯುವಕನೋರ್ವ ಸಂಸ್ಕೃತದಲ್ಲಿ (Cricket Commentary) ಕಾಮೆಂಟ್ರಿ ಮಾಡಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

sanskrit cricket commentary
sanskrit cricket commentary

ಬಹುತೇಕರು ಕ್ರಿಕೆಟ್ ನೋಡಲು ದೇಶ ವಿದೇಶಗಳಿಗೂ ಹೋಗುತ್ತಾರೆ. ಕ್ರಿಕೆಟ್ ಅಂದರೇ ಅಷ್ಟೊಂದು ಹುಚ್ಚು ಎಂದೇ ಹೇಳಬಹುದು. ಕ್ರೀಡಾಂಗಣದಲ್ಲಿ ಹೋಗಲು ಆಗದೇ ಇರುವವರು ಟಿವಿ, ಮೊಬೈಲ್ ಗಳಲ್ಲಿ ಲೈವ್ ನೋಡುತ್ತಾರೆ. ಕೆಲವರಿಗೆ ಕ್ರಿಕೆಟ್ (Cricket Commentary) ಕಾಮೆಂಟ್ರಿ ಕೇಳುವುದು ಸಹ ತುಂಬಾನೆ ಇಷ್ಟ ಎಂದು ಹೇಳಬಹುದು. ಇದೀಗ ಗಲ್ಲಿ ಕ್ರಿಕೆಟ್ ಆಡುತ್ತಿರುವಾಗ ಯುವಕನೋರ್ವ (Cricket Commentary) ಸಂಸ್ಕೃತದಲ್ಲಿ ಕಾಮೆಂಟ್ರಿ ಹೇಳಿದ್ದಾನೆ. ಈ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗುತ್ತಿದೆ. ಸಮಷ್ಟಿ ಗುಬ್ಬಿ ಎಂಬ ಖಾತೆಯಿಂದ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸಣ್ಣ ವಿಡಿಯೋ (Cricket Commentary) ಕ್ಲಿಪ್ ಈಗಾಗಲೇ 2 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: https://www.instagram.com/p/C–KOoNS_SK/

ಈ ಕಾಮೆಂಟ್ರಿ ಎಲ್ಲರನ್ನೂ ಮೋಡಿ (Cricket Commentary)ಮಾಡಿದೆ ಎಂದೇ ಹೇಳಬಹುದು. ಬೆಂಗಳೂರಿನ ಯುವಕ ತುಂಬಾ ಉತ್ಸಾಹದಿಂದ ಸಂಸ್ಕೃತದಲ್ಲಿ ಕ್ರಿಕೆಟ್ ಮ್ಯಾಚ್ ಕಾಮೆಂಟ್ರಿ  ಮಾಡಿದ್ದಾನೆ. ಬ್ಯಾಟ್ಸ್ ಮೆನ್ ಬಾಲ್ ಹೊಡೆಯುತ್ತಿದ್ದಂತೆ ಅವರ ಧ್ವನಿಯೂ ಸಹ ಆ ಕ್ಷಣದ ಉತ್ಸಾಹ ಎತ್ತಿ ತೋರಿಸುತ್ತಿದೆ. ಪಂದ್ಯ ವೀಕ್ಷಣೆ ಮಾಡುತ್ತಿದ್ದ ಎಲ್ಲರೂ ಯುವಕನ ಕಾಮೆಂಟ್ರಿ (Cricket Commentary) ಶೈಲಿಯಗೆ ಫಿದಾ ಆಗಿ ಆತನನ್ನು ಮತಷ್ಟು ಹುರಿದುಂಬಿಸಿ, ಶ್ಲಾಘನೆ ಮಾಡಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿದೆ. ಅನೇಕರು ಕಾಮೆಂಟ್ರಿ ಮಾಡಿದ ಯುವಕನನ್ನು ಮನಸಾರೆ (Cricket Commentary)ಹೊಗಳಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

Leave a Reply

Your email address will not be published. Required fields are marked *

Next Post

Shocking News : ಮಲಗಿದ್ದ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ನಾ ಪಾಪಿ ತಂದೆ?

Wed Sep 4 , 2024
ಪ್ರತಿನಿತ್ಯ ಒಂದಲ್ಲ ಒಂದು ಕಡೆ ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ಸುದ್ದಿಗಳು ಕೇಳಿಬರುತ್ತಲೇ ಇದೆ. (Shocking News) ಇದೀಗ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಆಘಾತಕಾರಿ  ಘಟನೆಯೊಂದು ಬೆಳಕಿಗೆ ಬಂದಿದ್ದು, ತಂದೆಯೊಬ್ಬ ತನ್ನ ಸ್ವಂತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬ ಗಂಭೀರ ಆರೋಪ (Shocking News) ಕೇಳಿಬಂದಿದೆ. ಅಪ್ರಾಪ್ತ ಮಗಳ ಮೇಲೆ ಕುಡಿದ ಅಮಲಿನಲ್ಲಿ ತಂದೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಬಾಲಕಿ ದೂರಿದ್ದಾಳೆ. ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ […]
Father Assault on Minor Daughter
error: Content is protected !!