ಐತಿಹಾಸಿಕ ಹಿನ್ನೆಲೆಯ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಎಲ್ಲೋಡು ಶ್ರೀ ಲಕ್ಷ್ಮೀಆದಿನಾರಾಯಣಸ್ವಾಮಿ ಕ್ಷೇತ್ರದಲ್ಲಿ ಶಿವಲಿಂಗ ಪ್ರತಿಷ್ಠಾಪನಾ (Devotional Program) ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತ ಡಿ.ವೈ.ಎಸ್.ಪಿ ರಾಜೇಂದ್ರ ಕುಮಾರ್, ಬೆಂಗಳೂರು ನಗರ ಜಿಲ್ಲಾ ಲೋಕಾಯುಕ್ತ ಡಿ.ವೈ.ಎಸ್.ಪಿ ಗಿರೀಶ್ ರಾವ್ ರವರುಗಳು ಭಾಗಿಯಾಗಿದ್ದರು.
ಈ ವೇಳೆ ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತ ಡಿ.ವೈ.ಎಸ್.ಪಿ ರಾಜೇಂದ್ರ ಕುಮಾರ್ ಹಾಗೂ ಬೆಂಗಳೂರು ನಗರ ಜಿಲ್ಲಾ ಲೋಕಾಯುಕ್ತ ಡಿ.ವೈ.ಎಸ್.ಪಿ ಗಿರೀಶ್ ರಾವ್ ಮಾತನಾಡಿದರು. (Devotional Program) ಮಾನವನು ಭಕ್ತಿ ಮಾರ್ಗದಲ್ಲಿ ನಡೆದಾಗ ತನ್ನ ಅಭ್ಯುದಯದ ಜೊತೆಗೆ ಸುಂದರ ಸಮಾಜವನ್ನು ನಿರ್ಮಾಣ ಮಾಡಬಹುದು. ಕರ್ನಾಟಕದ ಪಂಚನಾರಾಯಣ ಕ್ಷೇತ್ರಗಳಲ್ಲಿ ಪ್ರಾರಂಭದ ಈ ಕ್ಷೇತ್ರವು ಸುಂದರ ರಮಣೀಯ ಪ್ರಾಕೃತಿಕ ಸಂಪತ್ತನ್ನು ಹೊಂದಿದ್ದು ದರ್ಶನಕ್ಕೆ (Devotional Program) ಬರುವ ಭಕ್ತಾದಿಗಳಿಗೆ ನವೋಲ್ಲಾಸದ ಜೊತೆಗೆ ಹಿಂಸಾ ಪ್ರರ್ವೃತ್ತಿಗಳನ್ನು ಬಿಟ್ಟು ಸನ್ಮಾರ್ಗದ ಚಿಂತನೆಯ ಕಡೆಗೆ ಭಕ್ತಿ ಪರವಶರಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮಕ್ಕೆ ಈ ಇಬ್ಬರು (Devotional Program) ಅಧಿಕಾರಿಗಳನ್ನು ಪೂರ್ಣ ಕುಂಭದೊಂದಿಗೆ ದೇವಸ್ಥಾನದ ಅರ್ಚಕರಾದ ವೇದ ಬ್ರಹ್ಮಶ್ರೀ ಮಂಕಾಲ ಜ್ವಾಲಾ ಪ್ರಸಾದ್ ಶರ್ಮಾ ರವರು ಬರಮಾಡಿಕೊಂಡು ಪ್ರತಿಷ್ಠಾ ಕಾರ್ಯಕ್ರಮವನ್ನು ನೆರವೇರಿಸಿ ಕ್ಷೇತ್ರದ ಮಹಿಮೆಯನ್ನು ಅವರಿಗೆ ತಿಳಿಸಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಅಧಿಕಾರಿಗಳನ್ನು ಸನ್ಮಾನಿಸಿ ಸತ್ಕರಿಸಿದರು.
ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪೌರೋಹಿತರಾದ (Devotional Program) ಆದಿನಾರಾಯಣ ಸ್ವಾಮಿ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಸಿ.ಪಿ. ಸೂರ್ಯಪ್ರಕಾಶ್, ಗುಡಿಬಂಡೆ ಮಂಜುನಾಥ್ ಶರ್ಮಾ, ನಾಗಸಾಯಿ, ತೇಜೇಶ್ವರರಾವ್, ಸತೀಶ್ ಶರ್ಮಾ, ಮಿಥುನ್ ಭಾರದ್ವಾಜ್ ರವರುಗಳ ಸಾರಥ್ಯದಲ್ಲಿ ನಡೆಯಿತು. ಅನಂತಪುರದ ನಿವಾಸಿಗಳಾದ ಮುಡಿಯಂ ಸುಬ್ರಹ್ಮಣ್ಯಂ ಹಾಗು ಶ್ರೀದೇವಿ ದಂಪತಿಗಳು ಪ್ರತಿಷ್ಠಾ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು.