ಕನ್ನಡಿಗರ ಮಾತೃ ಸಂಸ್ಥೆ ಎಂದೇ ಕರೆಯಲಾಗುವ ಕನ್ನಡ ಸಾಹಿತ್ಯ ಪರಿಷತ್ (Bangalore Kannada Sahitya Parishad) ನಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಜುಲೈ 31 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ ಮಾಡಬೇಕು, ಯಾವೆಲ್ಲಾ ಹುದ್ದೆಗಳಿವೆ ಎಂದು ತಿಳಿಯಲು ಈ ಸುದ್ದಿ ಓದಿ.
ರಾಜರ ಕಾಲದಿಂದಲೂ ಇಂದಿನ ವರೆಗೂ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭಾಷೆ, ಕನ್ನಡಿಗರು ಹಾಗೂ ಕರ್ನಾಟಕದ ಹಿತವನ್ನು ಕಾಪಾಡುತ್ತಾ ಬಂದಂತಹ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅನೇಕ ಕನ್ನಡ ಸಾಹಿತ್ಯ ಸಮ್ಮೇಳನಗಳು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಮೂಲಕ ಕನ್ನಡ ಸಂಸ್ಕೃತಿಯ ಹಿರಿಮೆಯನ್ನು ಸಾರುತ್ತಾ ಬಂದಿದೆ. ಸದ್ಯ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಖಾಲಿಯಿರುವಂತಹ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಗಣಕ ಸಹಾಯಕರು, ಕಚೇರಿ ಸಹಾಯಕರು, ಲೆಕ್ಕಪತ್ರ ಸಹಾಯಕರು ಹಾಗೂ ತಾಂತ್ರಿಕ ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳು:
- ಗಣಕ ಸಹಾಯಕರು – ಕಂಪ್ಯೂಟರಿನ ಪ್ರಾಥಮಿಕ ತಿಳಿವಳಿಕೆ ಹೊಂದಿರ ಬೇಕು, ಕನ್ನಡವನ್ನು ತಪ್ಪಿಲ್ಲದೆ ಬೆರಳಚ್ಚು ಮಾಡಲು ಬರಬೇಕು. ಪುಟ ವಿನ್ಯಾಸ – ಕಛೇರಿ ಪತ್ರ ವ್ಯವಹಾರದ ತಿಳಿವಳಿಕೆ ಅಪೇಕ್ಷಣೀಯ
- ಲೆಕ್ಕ ಪತ್ರ ಸಹಾಯಕರು – ಕಂಪ್ಯೂಟರ್ ಜ್ಞಾನದ ಜೊತೆಗೆ ಟ್ಯಾಲಿ ಗೊತ್ತಿರ ಬೇಕು, ಲೆಕ್ಕ ಪತ್ರ ನಿರ್ವಹಿಸಿರುವ ಅನುಭವ ಇರಬೇಕು
- ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣಗಳಿಗೆ ತಾಂತ್ರಿಕ ನಿರ್ವಾಹಕರು – ಸಭಾಂಗಣಗಳ ಧ್ವನಿ ಮತ್ತು ಬೆಳಕಿನ ನಿರ್ವಹಣೆಯಲ್ಲಿ ಪರಿಣಿತಿಯನ್ನು ಪಡೆದಿರಬೇಕು.
- ಕಛೇರಿ ಸಹಾಯಕರು – ಕಂಪ್ಯೂಟರಿನ ಪ್ರಾಥಮಿಕ ತಿಳಿವಳಿಕೆ, ಕನ್ನಡದಲ್ಲಿ ಸಂವಹನ ನಡೆಸುವ ಕೌಶಲ್ಯ, ಕಛೇರಿ ಕಾರ್ಯ ನಿರ್ವಹಣೆ ಕುರಿತ ತಿಳುವಳಿಕೆ ಅಪೇಕ್ಷಣೀಯ
ಇನ್ನೂ ಈ ಮೇಲ್ಕಂಡ ಹುದ್ದೆಗಳು ತಾತ್ಕಲಿಕ ಹುದ್ದೆಗಳಾಗಿರುತ್ತದೆ. ಕನ್ನಡವನ್ನು ಓದಲು ಹಾಗೂ ಬರೆಯಲು ಮತ್ತು ಸಂವಹನ ನಡೆಸಲು ಬರುವಂತಹವರಿಗೆ ಮಾತ್ರ ಅವಕಾಶವಿದೆ. ಕನ್ನಡದ ಮೇಲಿನ ಗೌರವ ಹಾಗೂ ಪ್ರೀತಿಯಿಂದ ಮಾಡುವಂತಹ ಕೆಲಸ ಇದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಗೌರವ ಧನ ನೀಡಲಾಗುತ್ತಿದೆ. ಬೆಂಗಳೂರು ವಾಸಿಯಾಗಿರುವಂತಹ ಅರ್ಹ ಅರ್ಜಿದಾರರು ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಕಚೇರಿಯಿಂದ ಜುಲೈ 15ರೊಳಗೆ ಅರ್ಜಿ ಪಡೆದು, ಜುಲೈ 31 ರೊಳಗೆ ಖುದ್ದಾಗಿ ಅಥವಾ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-18, ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಿದಬಹುದು
ಅರ್ಹ ಅರ್ಜಿದಾರರು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಛೇರಿಯಿಂದ ಅರ್ಜಿಯನ್ನು ಜುಲೈ 15ರೊಳಗೆ ಪಡೆದು ಭರ್ತಿ ಮಾಡಿ, ಜುಲೈ 31ರೊಳಗೆ ಖುದ್ದಾಗಿ ಸಲ್ಲಿಸ ಬಹುದು, ಇಲ್ಲವೆ ‘ಅಧ್ಯರಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು-18’ ಇಲ್ಲಿಗೆ ತಲಪುವಂತೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಮಯದಲ್ಲಿ ಸಂಪರ್ಕ ಮಾಡಬಹುದಾಗಿದೆ.