ಸಾಮಾನ್ಯವಾಗಿ ಹಾವನ್ನು ಕಂಡರೇ ಒಂದು ಕಿ.ಮೀ ದೂರ ಓಡುವಂತಹವರೇ ಜಾಸ್ತಿ ಎಂದು ಹೇಳಬಹುದು. ಹಾವನ್ನು ಕಂಡು ಧೈರ್ಯದಿಂದ ಇರೋರು ತುಂಬಾನೆ ವಿರಳ. ಅದರಲ್ಲೂ ಹಾವು ಏನಾದರೂ ಕಚ್ಚಿದರೇ ಅರ್ಧ ಭಯದಿಂದಲೇ ಅನೇಕರು ಸಾಯುತ್ತಾರೆ. ಆದರೆ ಇಲ್ಲೋಬ್ಬ ಭೂಪ ಹಾವು ಕಚ್ಚಿದ್ದಕ್ಕೆ (Snake Bite) ಸಿಟ್ಟೆಗೆದ್ದು, ಆ ಹಾವನ್ನೆ ಮೂರು ಬಾರಿ ಕಚ್ಚಿದ್ದಾನೆ. ಇದರಿಂದಾಗಿ ಆ ಹಾವು ಸತ್ತು ಹೋಗಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಂದಹಾಗೆ ಈ ಘಟನೆ ನಡೆದಿರೋದು ಬಿಹಾರದಲ್ಲಿ. ಬಿಹಾರದ ರಾಜೌಲಿಯ ರೈಲ್ವೆ ಮಾರ್ಗ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಂತೋಷ್ ಎಂಬಾತನೆ ಹಾವಿಗೆ ಕಚ್ಚಿದ ವ್ಯಕ್ತಿ. ಕಳೆದ ಮಂಗಳವಾರ ರಾತ್ರಿ ತನ್ನ ಬೇಸ್ ಕ್ಯಾಂಪ್ ನಲ್ಲಿ ಸಂತೋಷ್ ಮಲಗಿದ್ದಾಗ ವಿಷಕಾರಿ ಹಾವು ಆತನಿಗೆ ಕಚ್ಚಿದೆ. ಹಾವು ಕಚ್ಚಿದೆ ಎಂದು ಗಾಬರಿಯಾಗದೇ ಆತ ಕೋಪಗೊಂಡ ಕಬ್ಣಿಣದ ಸಲಾಕೆಯನ್ನು ಬಳಸಿ ಹಾವನ್ನು ಹಿಡಿದುಕೊಂಡಿದ್ದಾನೆ. ಬಳಿಕ ಹಾವನ್ನು ಮೂರು ಬಾರಿ ಕಚ್ಚಿದ್ದಾನೆ. ಸಂತೋಷ್ ಮೂರು ಬಾರಿ ಹಾವನ್ನು ಕಚ್ಚಿದ್ದರಿಂದ ಹಾವು ಸಹ ಅಲ್ಲಿಯೇ ಸತ್ತು ಹೋಗಿದ್ದಾನೆ.
ಇನ್ನೂ ಹಾವನ್ನು ಏಕೆ ಕಚ್ಚಿದ್ದು ಎಂದು ಸಂತೋಷ್ ರವರ ಬಳಿಕ ಕೇಳಿದಾಗ, ಅದಕ್ಕೆ ಸಂತೋಷ್ ನಮ್ಮ ಗ್ರಾಮದಲ್ಲಿ ಒಂದು ನಂಬಿಕೆಯಿದೆ. ಒಮ್ಮೆ ಹಾವು ಕಚ್ಚಿದರೇ ಹಾವಿನ ವಿಷ ನಮ್ಮ ಮೈ ಮೇಲೆ ಏರಬಾರದು ಎಂದು, ಅದೇ ಹಾವಿಗೆ ಎರಡು ಬಾರಿ ಕಚ್ಚಬೇಕು. ಈ ನಂಬಿಕೆ ನಮ್ಮ ಗ್ರಾಮದಲ್ಲಿದೆ. ಆದ್ದರಿಂದ ನಾನು ಹಾವನ್ನು ಕಚ್ಚಿದ್ದೇನೆ ಎಂದು ಸಂತೋಷ್ ಹೇಳಿದ್ದಾನೆ. ಇನ್ನೂ ಹಾವು ಕಚ್ಚಿದ ಸಂತೋಷ್ ನನ್ನು ರೈಲ್ವೇ ಅಧಿಕಾರಿಗಳು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದರು. ಹಾವು ಕಚ್ಚಿದ್ದಕ್ಕೆ ಹಾವನ್ನೇ ಕಚ್ಚಿ ಸಾಯಿಸಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸಂತೋಷ್ ನನ್ನು ನೋಡಲು ಆಸ್ಪತ್ರೆಯ ಬಳಿ ಜನಸಮೂಹ ಸೇರಿತ್ತು. ಇನ್ನೂ ಸಂತೋಷ್ ಗೆ ಚಿಕಿತ್ಸೆ ನೀಡಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.