Snake Viral Video: ಶೂ ಒಳಗೆ ಸೇರಿಕೊಂಡ ಬುಸ್ ಬುಸ್ ನಾಗಪ್ಪ, ಮಲಗಿದ್ದ ಹಾವು ಕಂಡು ಶಾಕ್ ಆದ ಯುವತಿ….!

ಮಳೆಗಾಲ ಆರಂಭವಾದರೇ ಸಾಕು ಹಾವುಗಳು ಎಲ್ಲಂದರೇ ಅಲ್ಲಿ ಸೇರಿಕೊಳ್ಳುತ್ತಿರುತ್ತವೆ. ಬೈಕ್ ಗಳು, ಕಾರುಗಳು ಸೇರಿದಂತೆ ವಿವಿಧ ಕಡೆ ನಮಗೆ ತಿಳಿಯದೇ ಸೇರಿಕೊಂಡಿರುತ್ತದೆ. ಅಂತಹ ಅನೇಕ ಘಟನೆಗಳ ಬಗ್ಗೆ ಕೇಳಿದ್ದೇವೆ. ಇದೀಗ ಶೂ ಒಳಗೆ ನಾಗರ ಹಾವೊಂದು ಸೇರಿಕೊಂಡಿದ್ದು, ಮಲಗಿದ್ದ ಹಾವನ್ನು ಕಂಡು ಯುವತಿ ಶಾಕ್ ಆಗಿದ್ದಾಳೆ. ಸದ್ಯ ಈ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

Snake in shoe 1

ಸಾಮಾನ್ಯವಾಗಿ ನಮಗೆ ಅರಿವು ಇಲ್ಲದೆಯೇ ಹಾವುಗಳು ಮನೆಯೊಳಗೆ ಸೇರಿಕೊಂಡಿರುತ್ತದೆ. ಇದೀಗ ಶೂ ನಲ್ಲಿ ನಾಗರಹಾವು ಸೇರಿಕೊಂಡಿದೆ. ಬೆಚ್ಚಗೆ ಮಲಗಿಕೊಂಡಿದೆ. ಆದರೆ ಶೂ ಧರಿಸಲು ಬಂದ ಯುವತಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಶೂ ಒಂದರಲ್ಲಿ ನಾಗರಹಾವು ಅಡಗಿರುವುದನ್ನು ಕಾಣಬಹುದಾಗಿದೆ. ಶೂ ಧರಿಸಲು ಯುವತಿ ಬಂದಿದ್ದಾಳೆ. ಈ ಸಮಯದಲ್ಲಿ ಶೂ ನಲ್ಲಿ ಹಾವು ಕಂಡು ತಕ್ಷಣ ಶಾಕ್ ಆಗಿದ್ದಾಳೆ. ಬಳಿಕ ಗಾಬರಿಗೊಂಡ ಯುವತಿ ಜೋರಾಗಿ ಕಿರುಚಾಡಿದ್ದಾಳೆ. ಕೂಡಲೇ ಸ್ಥಳಕ್ಕೆ ಪೋಷಕರು ಬಂದು ಉರಗ ತಜ್ಞರಿಗೆ ಕರೆ ಮಾಡಿದ್ದಾರೆ. ಬಳಿಕ ಉರಗ ತಜ್ಞರು ಬಂದು ಹಾವನ್ನು ಸುರಕ್ಷಿತವಾಗಿ ಹೊರಗೆ ತಂದು ಸುರಕ್ಷಿತ ಪ್ರದೇಶದಲ್ಲಿ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.

ವಿಡಿಯೋ ನೋಡಲು ಕ್ಲಿಕ್ ಮಾಡಿ: https://x.com/MindhackD/status/1808478844749554130

ಇನ್ನೂ ಈ ವಿಡಿಯೋ ವನ್ನು @MindhackD ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್​ ಆಗಿದೆ. ಜುಲೈ 3ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ ಭಾರಿ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಪ್ರತಿಭಾರಿ ಶೂ ಧರಿಸುವಂತವರು ಕೊಂಚ ಎಚ್ಚರಿಕೆಯಿಂದ ಇದ್ದರೇ ಒಳಿತು. ಆತುರವಾಗಿ ಅಥವಾ ಅಜಾಗರೂಕತೆಯಿಂದ ಶೂ ಹಾಕಿಕೊಳ್ಳಲು ಹೋಗಬೇಡಿ. ಶೂ ಗಳಲ್ಲಿ ಹಾವುಗಳು ಸೇರಿದಂತೆ ವಿಷಯುಕ್ತ ಕೀಟಗಳೂ ಸಹ ಸೇರಿಕೊಂಡಿರಬಹುದು. ಆದ್ದರಿಂದ ಶೂ ಧರಿಸುವಾಗ ಎಚ್ಚರಿಕೆ ವಹಿಸುವುದು ಸೂಕ್ತ.

Leave a Comment

Your email address will not be published. Required fields are marked *

Scroll to Top