Saturday, August 30, 2025
HomeSpecialರೊಮ್ಯಾಂಟಿಕ್ ಸ್ಟೂಡೆಂಟ್ ಅಂದ್ರೇ ಇವ್ನೇ ಇರಬೇಕು, ಉತ್ತರ ಪತ್ರಿಕೆ ನೋಡಿದ ಟೀಚರ್ ಮೈಂಡ್ ಬ್ಲಾಂಕ್ ಆಯ್ತಂತೆ….!

ರೊಮ್ಯಾಂಟಿಕ್ ಸ್ಟೂಡೆಂಟ್ ಅಂದ್ರೇ ಇವ್ನೇ ಇರಬೇಕು, ಉತ್ತರ ಪತ್ರಿಕೆ ನೋಡಿದ ಟೀಚರ್ ಮೈಂಡ್ ಬ್ಲಾಂಕ್ ಆಯ್ತಂತೆ….!

ಕೆಲವೊಂದು ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ವಿಚಿತ್ರ ಉತ್ತರಗಳನ್ನು ಬರೆದಿರುವ ಬಗ್ಗೆ ಕೇಳಿದ್ದೇವೆ. ನಮ್ಮನ್ನು ಪಾಸ್ ಮಾಡಿ ಎಂದು ಹಣ ಇಟ್ಟಿರುವುದನ್ನು ನೋಡಿರುತ್ತೇವೆ, ಮತ್ತೆ ಕೆಲವರು ಪಾಸ್ ಮಾಡಿ ಎಂದು ದೇವರ ನಾಮ ಬರೆದಿದ್ದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಬರೆದ ಉತ್ತರ ಮಾತ್ರ ಭಾರಿ ಸುದ್ದಿಯಾಗಿದೆ. ಈ ಉತ್ತರ ಪತ್ರಿಕೆಯನ್ನು ನೋಡಿದ ಟೀಚರ್‍ ಶಾಕ್ ಆಗಿದ್ದಾರೆ. ಇದೀಗ ಈ ಉತ್ತರ ಪತ್ರಿಕೆ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದೆ. ಅಷ್ಟಕ್ಕೂ ವಿದ್ಯಾರ್ಥಿ ಉತ್ತರ ಪತ್ರಿಕೆಯಲ್ಲಿ ಬರೆದಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,

boy viral answer 0

ಅನೇಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತಮಗೆ ತಿಳಿಯದಂತಹ ಪ್ರಶ್ನೆಗಳಿಗೆ ಸಿನೆಮಾ ಸ್ಟೋರಿ, ಅಥವಾ ದೇವರ ನಾಮಗಳನ್ನು ಬರೆದಿರುವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಬರೆದ ಉತ್ತರ ಮಾತ್ರ ಶಿಕ್ಷಕನಿಗೆ ಶಾಕ್ ಕೊಡುವಂತಿದೆ. ‘memes-connection’ ಎಂಬ ಇನ್ಸ್ಟಾ ಖಾತೆಯಲ್ಲಿ ಈ ಉತ್ತರ ಪತ್ರಿಕೆಯನ್ನು ಹಂಚಿಕೊಳ್ಳಲಾಗಿದ್ದು, ಸಖತ್ ವೈರಲ್ ಆಗುತ್ತಿದೆ. ಪ್ರಶ್ನೆ ಪತ್ರಿಕೆಯಲ್ಲಿ ಹೃದಯದ ಚಿತ್ರವನ್ನು ಬರೆದು ಭಾಗಗಳನ್ನು ಗುರ್ತಿಸಿ ಎಂದು ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಅದಕ್ಕೆ ಓರ್ವ ವಿದ್ಯಾರ್ಥಿ ವಿಭಿನ್ನ ರೀತಿಯಲ್ಲಿ ಉತ್ತರಿಸಿದ್ದಾನೆ. ಹೃದಯದ ಚಿತ್ರವನ್ನು ಬರೆದ ಆ ವಿದ್ಯಾರ್ಥಿ ಮಾಡಿದಂತಹ ವಿಶ್ಲೇಷಣೆ ಎಲ್ಲರನ್ನೂ ಶಾಕ್ ಮಾಡುವಂತೆ ಮಾಡಿದೆ ಎನ್ನಲಾಗಿದೆ.

ಈ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ: https://www.instagram.com/p/C65afAepWPQ/?utm_source=ig_embed&utm_campaign=embed_video_watch_again

ವಿದ್ಯಾರ್ಥಿ ಹೃದಯದ ಚಿತ್ರವನ್ನು ಬರೆದು ಅದರ ಭಾಗಗಳನ್ನು ಗುರ್ತಿಸುವಾಗ ಪ್ರಿಯಾ, ರೂಪ, ಹಾರಿತ, ಪೂಜಾ, ನಮಿ ಎಂಬ ಯುವತಿಯರಿದ್ದಾರೆ ಎಂದು ವಿವರಣೆ ನೀಡಿದ್ದಾನೆ. ಪ್ರಿಯಾ ಎಂಬ ಹುಡುಗಿ ತನ್ನೊಂದಿಗೆ ಇನ್ಸ್ಟಾಗ್ರಾಂ ನಲ್ಲಿ ಚಾಟಿಂಗ್ ಮಾಡ್ತಾಳೆ. ಆಕೆ ಎಂದರೇ ತುಂಬಾ ಇಷ್ಟವೆಂದು ಬರೆದಿದ್ದಾನೆ. ರೂಪ ಎಂಭ ಯುವತಿ ಸ್ನಾಪ್ ಚಾಟ್ ನಲ್ಲಿ ಮೆಸೇಜ್ ಮಾಡ್ತಾಳೆ, ತುಂಬಾ ಸುಂದರವಾಗಿರುತ್ತಾಳೆ, ನಮಿತಾ ನನ್ನ ಎದುರು ಮನೆಯಲ್ಲಿರುತ್ತಾಳೆ. ಆಕೆಯ ಕೂದಲೂ ತುಂಬಾ ಉದ್ದ ಹಾಗೂ ಕಣ್ಣುಗಳು ದೊಡ್ಡದಾಗಿರುತ್ತದೆ ಎಂತಲೂ, ಇನ್ನೂ ಪೂಜ ತನ್ನ ಮಾಜಿ ಪ್ರೇಯಸಿ ಎಂದು, ಆಕೆಯನ್ನು ಮರೆಯೋಕೆ ಆಗುತ್ತಿಲ್ಲ ಎಂತಲೂ, ಕೊನೆಯದಾಗಿ ಹರಿತ ತನ್ನ ಕ್ಲಾಸ್ ಮೇಟ್ ಎಂದು ಸ್ಪಷ್ಟಪಡಿಸಿದ್ದಾನೆ.

ಇನ್ನೂ ಈ ಉತ್ತರ ಪತ್ರಿಕೆ ನೋಡಿದ ಶಿಕ್ಷಕರ ಪ್ಯೂಜ್ ಗಳು ಪಕ್ಕಾ ಔಟ್ ಆಗಿರುತ್ತದೆ ಎಂದು ಹೇಳಬಹುದಾಗಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಕೊಟಿಗಟ್ಟಲೇ ವ್ಯೂಸ್ ಬರುತ್ತಿವೆ. ಲಕ್ಷಗಟ್ಟಲೇ ಲೈಕ್ ಗಳು ಬರುತ್ತಿವೆ. ಇನ್ನೂ ಈ ವಿಡಿಯೋ ನೋಡಿದ ಎಲ್ಲರೂ ನಗುತ್ತಾ, ಕಾಮೆಂಟ್ಸ್ ಗಳನ್ನು ಹರಿಬಿಡುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular