ವಿದ್ಯಾರ್ಥಿಗಳು ರಾಮಾಯಣ ನಾಟಕ ಪ್ರದರ್ಶನ: 1.02 ಲಕ್ಷ ದಂಡ ವಿಧಿಸಿದ ಬಾಂಬೆ ಐಐಟಿ

ಇನ್ಸ್ಟಿಟ್ಯೂಟ್ ಪರ್ಫಾಮಿಂಗ್ ಆರ್ಟ್ಸ್ ಫೆಸ್ಟಿವಲ್ ನಲ್ಲಿ ರಾಹೋವನ ಎಂಬ ನಾಟಕವನ್ನು ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶನ ಮಾಡಿದ್ದರು. ಈ ನಾಟಕವು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದ್ದು, ನಾಟಕ ಪ್ರದರ್ಶನ ಮಾಡಿದ ವಿದ್ಯಾರ್ಥಿಗಳಿಗೆ ಬಾಂಬೆ ಐಐಟಿ (IIT Bombay)  1.02 ಲಕ್ಷ ದಂಡ ವಿಧಿಸಿದೆ ಎಂದು ತಿಳಿದುಬಂದಿದೆ.

ಕಳೆದ ಮಾ.31 ರಂದು ಇನ್ಸ್ಟಿಟ್ಯೂಟ್ ಪರ್ಫಾಮಿಂಗ್ ಆರ್ಟ್ಸ್ ಫೆಸ್ಟಿವಲ್ ನಲ್ಲಿ ವಿದ್ಯಾರ್ಥಿಗಳು ರಾಹೋವನ ಎಂಬ ನಾಟಕವನ್ನು ಪ್ರದರ್ಶನ ಮಾಡಿದ್ದರು. ಈ ನಾಟಕದಲ್ಲಿ ಎಂಟು ಮಂದಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಭಾಗಿಯಾಗಿದ್ದ ಎಂಟು ವಿದ್ಯಾರ್ಥಿಗಳ ಮೇಲೆ ಬಾಂಬೆ ಐಐಟಿ ದಂಡ ವಿಧಿಸಿದೆ. ಮೇ.8 ರಂದು ಈ ಸಂಬಂಧ ಶಿಸ್ತು ಕ್ರಮ ಸಮಿತಿ ಸಭೆ ನಡೆಸಿತ್ತು. ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಕ್ರಮ ಕೈಗೊಂಡಿದೆ. ಜೂ.4 ರಂದು ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಎಲ್ಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದೆ. ಸಂಸ್ಥೆಯು ನಾಲ್ಕು ವಿದ್ಯಾರ್ಥಿಗಳಿಗೆ 1.20 ಲಕ್ಷ ರೂ ದಂಡ ವಿಧಿಸಿದೆ. ಪದವಿ ಪೂರ್ವ ವಿದ್ಯಾರ್ಥಿಗಳಾದ ಇತರೆ ನಾಲ್ಕು ಮಂದಿಗೆ 40 ಸಾವಿರ ದಂಡ ಪಾವತಿಸುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ.

ramayana drama play 1.02 fine 0

ಅಷ್ಟೇ ಅ‌ಲ್ಲದೇ ಹಾಸ್ಟಲ್ ವಸತಿಗಳನ್ನು ಖಾಲಿ ಮಾಡುವಂತೆ ಸಹ ಆದೇಶ ನೀಡಿದೆ. ಇನ್ನೂ ಸಂಸ್ಥೆಯ ಐಐಟಿ ವಿದ್ಯಾರ್ಥಿಗಳ ಗುಂಪೊಂದು ಔಪಚಾರಿಕ ದೂರು ದಾಖಲಿಸಿದೆ. ಈ ನಾಟಕ ಹಿಂದೂಗಳ ನಂಬಿಕೆಗಳ ಅವಹೇಳನಕಾರಿ ಉಲ್ಲೇಖಗಳನ್ನು ಒಳಗೊಂಡಿದೆ. ರಾಮನನ್ನು ದೆವ್ವ ಎಂದು ಬಿಂಬಿಸಲಾಗಿದೆ ಅಷ್ಟೇ ಅಲ್ಲದೇ ರಾಮ, ಸೀತಾ, ಲಕ್ಷಣ ಪಾತ್ರಗಳಲ್ಲಿ ಅನುಚಿತ ಭಾಷೆ ಸಹ ಬಳಸಲಾಗಿದೆ, ಅನುಚಿತ ಸನ್ನೆಗಳನ್ನು ಬಳಸಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿದೆ.

Leave a Comment

Your email address will not be published. Required fields are marked *

Scroll to Top