ಮೂರು ವರ್ಷದ ಬಾಲಕನ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ ಚಿಕ್ಕಪ್ಪ, ಆರೋಪಿಗಾಗಿ ಪೊಲೀಸರ ಹುಡುಕಾಟ…!

ಮೂರು ವರ್ಷದ ಮಗುವಿನ ಕತ್ತು ಸೀಳಿ ಭರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಿಂತಾಮಣಿ ತಾಲೂಕಿನ ಮುರುಗಮಲ್ಲ ಹೋಬಳಿ, ನಂದಿಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿಮ್ಮಕಾಯಲಹಳ್ಳಿ ಗ್ರಾಮದ ನಿವಾಸಿಗಳಾದ ಶಿರಿಷಾ ಮಂಜುನಾಥ ದಂಪತಿ ಮಗು ಕೊಲೆಯಾಗಿದೆ.

ಕೊಲೆಯಾದ ಮೃತ ದುರ್ದುವಿಯನ್ನು ಗೌತಮ್ (3) ಎಂದು ಗುರ್ತಿಸಲಾಗಿದ್ದು, ಈ ಪುಟ್ಟ ಬಾಲಕನನ್ನು ನಿಮ್ಮಕಾಯಲಹಳ್ಳಿ ಗ್ರಾಮದ ನಿವಾಸಿ ಹಾಗೂ ಸ್ವಂತ ಮಗುವಿನ ಚಿಕ್ಕಪ್ಪ ರಂಜಿತ್ (30) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಎಂದಿನಂತೆ ಆರೋಪಿ ರಂಜಿತ್ ತನ್ನ ಅಣ್ಣ ಮಂಜುನಾಥ್ ರವರ ಮನೆಗೆ ನಂದು ಊಟ ಮಾಡಿದ್ದಾನೆ. ಬಳಿಕ ಸಂಜೆ ಐದು ಗಂಟೆ ಸಮಯದಲ್ಲಿ ಗೌತಮ್ ನನ್ನು ಮನೆಯ ಬಳಿಯಿರುವ ಹಳೆಯ ಪಾಳು ಬಿದ್ದ ಮನೆಯೊಳಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಯೇ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಇನ್ನೂ ಮಂಜುನಾಥ್ರವರ ಚಿಕ್ಕಪ್ಪನ ಮಗನಾಗಿರುವ ಆರೋಪಿ ರಂಜಿತ್, ಎಂಜಿನಿಯರಿಂಗ್ ಪದವೀಧರನಾಗಿದ್ದಾನೆ. ಮೂರು ತಿಂಗಳಿಂದ ನಿಮ್ಮಕಾಯಲಹಳ್ಳಿಯಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದ. ಮಂಜುನಾಥ್ ಮನೆಯಲ್ಲಿಯೇ ಆರೋಪಿ ವಾಸವಿದ್ದು, ಅಲ್ಲಿಯೇ ಊಟ, ತಿಂಡಿ ತಿನ್ನುತ್ತಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇನ್ನೂ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಡಿ.ಎಲ್.ನಾಗೇಶ್, ಅಡಿಷನಲ್ ಎಸ್.ಪಿ ಖಾಸಿಂ ಖಾನ್, ಡಿವೈಎಸ್‌ ಪಿ ಮುರಳೀಧರ್‍ ಹಾಗೂ ಬಟ್ಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *

Scroll to Top