ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನ, ವಿರೋಧಿಸಿದಕ್ಕೆ ಚಿಕ್ಕಮ್ಮನನ್ನೇ ಕೊಲೆ ಮಾಡಿದ 10ನೇ ತರಗತಿ ಬಾಲಕ…!

ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯಲ್ಲಿ 10ನೇ ತರಗತಿ ಬಾಲಕ ತನ್ನ ಚಿಕ್ಕಮ್ಮನ ಮೇಲೆ ಅತ್ಯಾಚರಕ್ಕೆ ಯತ್ನಿಸಿದ್ದ, ಆಕೆ ವಿರೋಧ ಮಾಡಿದ್ದಕ್ಕೆ ಕೋಪಗೊಂಡು ಆಕೆಯನ್ನು ಕೊಲೆ ಮಾಡಿದ್ದಾನೆ. ಆಸರೆ ಕೊಟ್ಟಂತಹ ಚಿಕ್ಕಮ್ಮನನ್ನೇ ಕೊಲೆ ಮಾಡಿದ್ದು, ಮೃತಳ ಗಂಡ ನೀಡಿದ ದೂರಿನಡಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಯತ್ನ ಮತ್ತು ಕೊಲೆ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ.

ಮೃತ ದುರ್ದೈವಿಯನ್ನು ಹೇಮಾವತಿ (37) ಎಂದು ಗುರ್ತಿಸಲಾಗಿದೆ. ಮೃತ ಹೇಮಾವತಿ ಅಕ್ಕನ ಮಗನೆಂದು ಎಸ್.ಎಸ್.ಎಲ್.ಸಿ ಬಾಲಕನನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾಳೆ. ಬಾಲಕ ಓದುತ್ತಿದ್ದರಿಂದ ಆತ ತನ್ನ ಮೇಲೆ ಕಣ್ಣಾಕಿದ್ದಾನೆ ಎಂಬ ಅರಿವು ಸಹ ಆಕೆಗೆ ಇರಲಿಲ್ಲ ಎನ್ನಲಾಗಿದೆ. ಎಂದಿನಂತೆ ಊಟ ಮುಗಿಸಿದ ಹೇಮಾವತಿ, ಮನೆಯಲ್ಲಿದ್ದ ಪ್ರತ್ಯೇಕ ಕೊಠಡಿಯಲ್ಲಿ ಮಲಗಿದ್ದಾಳೆ. ತಡರಾತ್ರಿಯಾಗುತ್ತಿದ್ದಂತೆ ಬಾಲಕ ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಮಯದಲ್ಲಿ ಆಕೆ ವಿರೋಧ ಮಾಡಿ ಬಾಲಕನ ಕೆನ್ನೆಗೆ ಬಾರಿಸಿದ್ದಾಳೆ. ಅಷ್ಟೇಅಲ್ಲದೇ ಹುಡುಗ ಬುದ್ದಿಯಿಲ್ಲದೇ ಹೀಗೆ ಮಾಡಿದ್ದಾನೆ ಎಂದು ಮನೆಯಲ್ಲಿದ್ದ ಬೇರೆಯವರಿಗೆ ಏನು ಹೇಳದೆ ಸುಮ್ಮನೆ ಮಲಗಿದ್ದಾಳೆ. ಆದರೆ ಬಾಲಕ ಈ ಬಗ್ಗೆ ಎಲ್ಲರ ಮುಂದೆ ಹೇಳಿ ಮರ್ಯಾದೆ ಕಳೆಯುತ್ತಾಳೆ ಎಂದು ಹೆದರಿ ರಾತ್ರಿ ಮಲಗಿದ್ದ ಚಿಕ್ಕಮ್ಮನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

boy killed his aunt

ಇನ್ನೂ ಬೆಳಿಗ್ಗೆ ಎಷ್ಟೆ ಸಮಯದವಾದರೂ ಹೇಮಾವತಿ ಎದ್ದೇಳದ ಕಾರಣ ಮನೆಯವರು ಹೋಗಿ ಎಬ್ಬಿಸಿದ್ದಾರೆ. ಆಗ ಆಕೆ ಹಾಸಿಗೆಯಲ್ಲಿಯೇ ಮೃತಪಟ್ಟಿರುವುದು ಖಚಿತವಾಗಿದೆ. ಆಗ ಬಾಲಕ ಹೇಮಾವತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಮನೆಯವರನ್ನು ನಂಬಿಸಿ ಅಂತ್ಯಕ್ರಿಯೆ ಮಾಡುವಂತೆ ಹೇಳಿದ್ದಾನೆ. ಆದರೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಬಳಿಕ ಮಹಿಳೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮರಣೋತ್ತರ ಪರೀಕ್ಷೆಗೆ ಮೃತ ದೇಹವನ್ನು ಕಳುಹಿಸಿದ್ದಾರೆ. ಈ ವೇಳೆ ಆಕೆ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಬಳಿಕ ಘಟನೆಯ ಬಗ್ಗೆ ತನಿಖೆ ಕೈಗೊಂಡಾಗ ಮನೆಯಲ್ಲಿದ್ದ ಅಕ್ಕನ ಮಗನೇ ಕೊಲೆ ಮಾಡಿರುವುದಾಗಿ ಬೆಳಕಿಗೆ ಬಂದಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

Next Post

ಆಂಧ್ರಪ್ರದೇಶದ ನೂತನ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಪವನ್ ಕಲ್ಯಾಣ್…!

Wed Jun 19 , 2024
ಆಂಧ್ರಪ್ರದೇಶದಲ್ಲಿ ಈ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ವೈ.ಎಸ್.ಆರ್‍ ಕಾಂಗ್ರೇಸ್ ಪಕ್ಷ ಹೀನಾಯ ಸೋಲು ಕಂಡಿದೆ. ಟಿಡಿಪಿ-ಜನಸೇನಾ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಭರ್ಜರಿ ಜಯಗಳಿಸಿದೆ. ನೂತನ ಮುಖ್ಯಮಂತ್ರಿಯಾಗಿ ಟಿಡಿಪಿ ನಾಯಕ ನಾರಾ ಚಂದ್ರಬಾಬು ನಾಯ್ಡು ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ ಜನಸೇನಾ ನಾಯಕ ಪವನ್ ಕಲ್ಯಾಣ್ ರವರು ಆಂಧ್ರಪ್ರದೇಶದ ನೂತನ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆಂಧ್ರಪ್ರದೇಶದ ನೂತನ ಉಪಮುಖ್ಯಮಂತ್ರಿಯಾಗಿ ನಟ ಕಂ ರಾಜಕಾರಣಿ ಪವನ್ ಕಲ್ಯಾಣ್ ರವರು ಬುಧವಾರ (ಜೂನ್ […]
Pawan Kalyan taken charges deputy cm
error: Content is protected !!