ಅಮೇಜಾನ್ ನಲ್ಲಿ ಬುಕ್ ಮಾಡಿದ್ದ ಪಾರ್ಸಲ್ ನಲ್ಲಿ ಬಂತು ಬುಸ್ ಬುಸ್ ನಾಗಪ್ಪ, ಹಾವು ಕಂಡು ಬೆಚ್ಚಿ ಬಿದ್ದ ದಂಪತಿ…..!

ಸದ್ಯ ಎಲ್ಲವೂ ಆನ್ ಲೈನ್ ಮಯ ಎಂದು ಹೇಳಬಹುದು. ಅಮೇಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಅನೇಕ ದೈತ್ಯ ಆನ್ ಲೈನ್ ತಾಣಗಳ ಮೂಲಕ ಜನರು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿ ಮಾಡುತ್ತಿರುತ್ತಾರೆ. ಆದರೆ ಕೆಲವೊಂದು ಘಟನೆಗಳಲ್ಲಿ ವಸ್ತುಗಳ ಬದಲಿಗೆ ಸೋಪ್ ಗಳು ಸೇರಿದಂತೆ ಬೇರೆ ಬೇರೆ ವಸ್ತುಗಳು ಬಂದಿರುವುದು ನೋಡಿದ್ದೇವೆ. ಆದರೆ ಇದೀಗ ಅಮೇಜಾನ್ ನಲ್ಲಿ ಪಾರ್ಸೆಲ್ ಬುಕ್ ಮಾಡಿದ ದಂಪತಿ ಶಾಕ್ ಆಗಿದ್ದಾರೆ. ಬಂದ ಪಾರ್ಸಲ್ ತೆಗೆದ ಕೂಡಲೇ ಬುಸ್ ಬುಸ್ ಎನ್ನುತ್ತಾ ಹಾವೊಂದು ಹೊರಬಂದಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಅಮೇಜಾನ್ ನಲ್ಲಿ ಎಕ್ಸ್ ಬಾಕ್ಸ್ ಕಂಟ್ರೋಲರ್‍ ಅನ್ನು ಬೆಂಗಳೂರಿನ ಸರ್ಜಾಪುರದ ದಂಪತಿ ಬುಕ್ ಮಾಡಿದ್ದಾರೆ. ತಾವು ಬುಕ್ ಮಾಡಿದ ಪಾರ್ಸೆಲ್ ತೆರೆಯುತ್ತಿದ್ದಂತೆ ಬುಸುಗುಟ್ಟುತಾ ಹಾವೊಂದು ಹೊರಬಂದಿದೆ. ಎಕ್ಸ್ ಬಾಕ್ಸ್ ಕಂಟ್ರೋಲರ್‍ ಬದಲಾಗಿ ನಾಗರಹಾವೊಂದು ಹೆಡೆ ಎತ್ತಿ ನಿಂತಿದೆ. ನೋಡಿದ ಕೂಡಲೇ ಭಯಭೀತರಾದ ದಂಪತಿ ಬಾಕ್ಸ್ ಮುಚ್ಚಿದ್ದಾರೆ. ಬಳಿಕ ತಮಗಾದ ಕರಾಳ ಅನುಭವವನ್ನು ವಿಡಿಯೋ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಾಗರಗಾವು ಪ್ಯಾಕೇಜಿಂಗ್ ಟೇಪ್ ನಲ್ಲಿ ಸಿಲುಕೊಂಡಿದ್ದು, ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಸಹ ಕಾಣಬಹುದಾಗಿದೆ.

ವಿಡಿಯೋ ನೋಡಲು ಈ ಲಿಂಕ್ ಒಪೆನ್ ಮಾಡಿ:  https://x.com/Prakash20202021/status/1803230562087297166

ಸಾಫ್ಟವೇರ್‍ ಉದ್ಯೋಗದಲ್ಲಿರುವ ದಂಪತಿ ಕಳೆದ ವಾರ ಅಮೇಜಾನ್ ನಲ್ಲಿ ಎಕ್ಸ್ ಬಾಕ್ಸ್ ಕಂಟ್ರೋಲರ್‍ ಆರ್ಡರ್‍ ಮಾಡಿದ್ದರು. ಎಕ್ಸ್ ಬಾಕ್ಸ್ ಕಂಟ್ರೋಲರ್‍ ಬದಲಿಗೆ ನಾಗರಹಾವು ಪಾರ್ಸಲ್ ನಲ್ಲಿ ಬಂದಿದೆ. ಈ ಘಟನೆ ಅಮೇಜಾನ್ ವರೆಗೂ ತಲುಪಿದ್ದು, ಎಕ್ಸ್ ಬಾಕ್ಸ್ ಕಂಟ್ರೋಲರ್‍ ಗೆ ನೀಡಿದ್ದ ಹಣವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಿದೆ. ಆದರೆ ಈ ವಿಷಪೂರಿತ ಹಾವಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಬುಕ್ ಮಾಡಿದ ಪಾರ್ಸಲ್ ಬದಲಿಗೆ ಬೇರೆ ಬಂದಿರುವುದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿಕೊಂಡಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದ್ದು, ಪಾರ್ಸಲ್ ಒಳಗೆ ಜೀವಂತ ಹಾವು ಹೇಗೆ ಬಂತು ಎಂಬುದೇ ದೊಡ್ಡ ಯಕ್ಷ ಪ್ರಶ್ನೆಯಾಗಿದೆ.

Leave a Comment

Your email address will not be published. Required fields are marked *

Scroll to Top