Snake Video : ತನ್ನನ್ನೇ ತಾನು ನುಂಗಲು ಹೋದ ಹಾವು! ಮನುಷ್ಯನಿಂದ ಬಚಾವ್.. ಇಲ್ಲಿದೆ ವಿಚಿತ್ರ ವಿಡಿಯೋ ವೈರಲ್…!

ಸಾಮಾನ್ಯವಾಗಿ ಮನುಷ್ಯರು ಮಾನಸಿಕ ಒತ್ತಡಕ್ಕೋ ಅಥವಾ ಬೇರೆ ಕಾರಣಕ್ಕೋ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವುದನ್ನು ಕೇಳಿದ್ದೇವೆ. ಆದರೆ, ಹಾವೊಂದು ತನ್ನ ಪ್ರಾಣವನ್ನೇ ತಾನು ತೆಗೆದುಕೊಳ್ಳಲು ಮುಂದಾದ ವಿಚಿತ್ರ ಘಟನೆ ಬಗ್ಗೆ ಎಂದಾದರೂ ಕೇಳಿದ್ದೀರಾ? ಹೌದು, ಅಚ್ಚರಿಯಾದರೂ ಇದು ಸತ್ಯ. ಸಾಮಾಜಿಕ ಜಾಲತಾಣದಲ್ಲಿ ಈಗ ಅಂತಹದ್ದೇ ಒಂದು (Snake Video) ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Speckled king snake attempting to swallow itself while a man rescues it in a viral video

Snake Video – ಏನಿದು ಘಟನೆ?

ವೈರಲ್ ಆಗಿರುವ ಈ ವಿಡಿಯೋದಲ್ಲಿ ಹಾವೊಂದು ವಿಚಿತ್ರವಾಗಿ ವರ್ತಿಸಿದೆ. ಅದು ತನ್ನ ಬಾಲದ ಕಡೆಯಿಂದ ತನ್ನ ದೇಹವನ್ನೇ ತಾನು ನುಂಗಲು ಶುರು ಮಾಡಿದೆ. ಈಗಾಗಲೇ ಅರ್ಧದಷ್ಟು ದೇಹವನ್ನು ನುಂಗಿದ್ದ ಹಾವನ್ನು ಕಂಡ ವ್ಯಕ್ತಿಯೊಬ್ಬರು ತಕ್ಷಣವೇ ಅದನ್ನು ರಕ್ಷಿಸಲು ಮುಂದಾಗಿದ್ದಾರೆ. ಅವರು ಹಾವಿನ ಬಾಯಿಂದ ಅದರ ಬಾಲವನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದು, (Snake Video) ಹಾವಿನ ಪ್ರಾಣ ಉಳಿಸಿದ್ದಾರೆ.

ಯಾವ ತಳಿಯ ಹಾವು ಇದು?

ಈ ಹಾವನ್ನು ‘ಸ್ಪೆಕ್ಲ್ಡ್ ಕಿಂಗ್ ಸ್ನೇಕ್’ (Speckled King Snake) ಎಂದು ಗುರುತಿಸಲಾಗಿದೆ. ಅಂದಹಾಗೆ, ಈ ಹಾವುಗಳು ಮನುಷ್ಯರಿಗೆ ಅಷ್ಟೊಂದು ಅಪಾಯಕಾರಿಯಲ್ಲ. ಇವುಗಳಲ್ಲಿ ವಿಷದ ಅಂಶ ಇರುವುದಿಲ್ಲ. ಇವು ಹೆಚ್ಚಾಗಿ ಇಲಿಗಳು, ಹಲ್ಲಿಗಳು ಮತ್ತು ಕೆಲವೊಮ್ಮೆ ಬೇರೆ ಜಾತಿಯ ಹಾವುಗಳನ್ನೇ ಆಹಾರವಾಗಿ ಸೇವಿಸುತ್ತವೆ. ಆದರೆ, ತನ್ನನ್ನೇ ತಾನು ನುಂಗಲು ಹೋಗಿದ್ದು ಮಾತ್ರ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. Read this also : ವಿಷ ಸರ್ಪ ಕಚ್ಚಿದರೂ, ಭಯಪಡದೇ ಅದನ್ನೇ ಹಿಡಿದು ಹೋಗಿ ಪ್ರಾಣ ಉಳಿಸಿಕೊಂಡ ಭೂಪ…!

ನೆಟ್ಟಿಗರ ಕಾಮೆಂಟ್ಸ್ ಹೇಗಿದೆ?

‘ಕ್ರೇಜಿ ಕ್ಲಿಪ್ಸ್’ ಎಂಬ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಕೇವಲ 39 ಸೆಕೆಂಡ್‌ಗಳ ಈ ದೃಶ್ಯವನ್ನು ಈಗಾಗಲೇ 26,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ನೂರಾರು ಜನರು ಲೈಕ್ ಮತ್ತು ಶೇರ್ ಮಾಡುತ್ತಿದ್ದಾರೆ.

Speckled king snake attempting to swallow itself while a man rescues it in a viral video

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ನೆಟ್ಟಿಗರು ಈ ವಿಡಿಯೋ ನೋಡಿ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ:
  • ಕೆಲವರು ಇದನ್ನು ಔರೋಬೋರಸ್’ (Ouroboros) ಎಂಬ ಪ್ರಾಚೀನ ಚಿಹ್ನೆಗೆ ಹೋಲಿಸಿದ್ದಾರೆ. ಈ ಚಿಹ್ನೆಯಲ್ಲಿ ಹಾವು ತನ್ನ ಬಾಲವನ್ನು ತಾನೇ ತಿನ್ನುವಂತೆ ಇರುತ್ತದೆ, ಇದು ಜೀವನದ ಚಕ್ರವನ್ನು ಪ್ರತಿನಿಧಿಸುತ್ತದೆ ಎನ್ನಲಾಗುತ್ತದೆ.
  • ಇನ್ನೂ ಕೆಲವರು “ಪ್ರಾಣಿಗಳನ್ನು ಉಳಿಸಿ, ಪ್ರಕೃತಿಯನ್ನು ಕಾಪಾಡಿ” ಎಂದು ಆ ವ್ಯಕ್ತಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top