SmartPhone – ಇಂಟರ್ನೆಟ್ ಯುಗದಲ್ಲಿ ಸ್ಮಾರ್ಟ್‌ಫೋನ್ (Smartphone) ನಮ್ಮ ಜೀವನದ ಅವಿಭಾಜ್ಯ ಭಾಗವಾಗಿದ್ದು, ಹಲವರು ಮೊಬೈಲ್‌ಗಾಗಿ ದಾಸರಾಗಿರುವುದು ಹೊಸದೇನೂ ಅಲ್ಲ. ಆದರೆ, ಕೆಲವೊಮ್ಮೆ ಈ ಮೊಬೈಲ್‌ನ ಅತಿಯಾದ ಬಳಕೆ ನಿರ್ಲಕ್ಷ್ಯಕ್ಕೆ ಕಾರಣವಾಗಬಹುದು. ಇದಕ್ಕೊಂದು ತಾಜಾ ಉದಾಹರಣೆ ಈ ಘಟನೆ ಎಂದು ಹೇಳಬಹುದಾಗಿದೆ. ಈ ಸಂಬಂಧ ವಿಡಿಯೋ ಸಹ ವೈರಲ್ ಆಗುತ್ತಿದ್ದು, ಇದು ಸ್ಕ್ರಿಪ್ಟೆಡ್ ವಿಡಿಯೋನಾ ಎಂಬ ಅನುಮಾನವನ್ನು ಸಹ ಅನೇಕರು ವ್ಯಕ್ತಪಡಿಸುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿರುವ ಒಂದು ವಿಡಿಯೋದಲ್ಲಿ ತಾಯಿಯೊಬ್ಬರು ಫೋನಿನಲ್ಲಿ ಮಾತನಾಡುತ್ತಾ ತಮ್ಮ ಮಗುವನ್ನು (Baby) ಪಾರ್ಕ್ ನಲ್ಲಿಯೇ ಮರೆತು ಬಿಟ್ಟು ಹೋಗಿರುವ ದೃಶ್ಯ ಎಲ್ಲರನ್ನು ಅಚ್ಚರಿಗೆ ಒಳಪಡಿಸಿದೆ. ಬಳಿಕ, ಓರ್ವ ವ್ಯಕ್ತಿ ಮಗುವನ್ನು ತಾಯಿ ಕೈಗೆ ಒಪ್ಪಿಸುತ್ತಾರೆ. ಈ ದೃಶ್ಯವನ್ನು ನೋಡಿದ ಜನರು ತಾಯಿ ನಿರ್ಲಕ್ಷ್ಯವನ್ನು ಟೀಕಿಸುತ್ತಿದ್ದು, “ಮೊಬೈಲ್ ಮಾದಕದ್ರವ್ಯವೋ?” ಎಂಬಂತೆ ಪ್ರಶ್ನಿಸುತ್ತಿದ್ದಾರೆ.
SmartPhone – ಇದು ನಿಜವಾ? ಸ್ಕ್ರಿಪ್ಟೆಡ್ ವಿಡಿಯೋನಾ?
ಈ ವಿಡಿಯೋ gharkekalesh ಎಂಬ ಎಕ್ಸ್ (X) ಖಾತೆಯಿಂದ ಶೇರ್ ಮಾಡಲಾಗಿದ್ದು, “ತಾಯಿ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ಮಗುವನ್ನು ಪಾರ್ಕ್ನಲ್ಲಿಯೇ ಮರೆತು ಬಿಟ್ಟು ಹೋಗಿದಳು!” ಎಂಬ ಶೀರ್ಷಿಕೆ ನೀಡಲಾಗಿದೆ. ಇದನ್ನು ನೋಡಿದ ಹಲವರು ಇದು ನಿಜವಾದ ಘಟನೆ ಎಂದು ನಂಬಿದ್ದರೂ, ಕೆಲವರು ಇದು ಕೇವಲ ಸ್ಕ್ರಿಪ್ಟೆಡ್ ವಿಡಿಯೋ ಅಥವಾ ಸೀರಿಯಲ್ ಶೂಟಿಂಗ್ ದೃಶ್ಯ ಎಂದು ಹೇಳುತ್ತಿದ್ದಾರೆ.
boAt New Launch Nirvana X TWS,Knowles Dual Drivers,Hi-Res Audio LDAC,App Support,4Mic ENx,Dual Pair,Spatial Audio,Fast Charge, Bluetooth Earbuds, TWS Ear Buds Wireless Earphones with mic (Upto 69% Off Buy Now)
SmartPhone – ವೈರಲ್ ವಿಡಿಯೋ ಇಲ್ಲಿದೆ: Click Here
ಈ ಘಟನೆಯ ನಿಜಾಂಶ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಈ ವಿಡಿಯೋ ಸ್ಮಾರ್ಟ್ ಫೋನ್ ಬಳಕೆ ಮತ್ತು ನಿರ್ಲಕ್ಷ್ಯದ ಪರಿಣಾಮಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಇಂತಹ ಸಂದರ್ಭಗಳಲ್ಲಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸುತ್ತದೆ.