Siddaramaiah – ನಮ್ಮ ಜನಪರ ಕೆಲಸಗಳನ್ನು ಸಹಿಸಲು ಆಗದಂತಹ ಬಿಜೆಪಿಯವರು ನಮ್ಮ ಸರ್ಕಾರ ಬೀಳಿಸಲು ನಮ್ಮ 50 ಶಾಸಕರಿಗೆ ತಲಾ 50 ಕೋಟಿ ಆಫರ್ ನೀಡಿದ್ದಾರೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಬಾಂಬ್ ಸಿಡಿಸಿದ್ದಾರೆ. ಸಿದ್ದರಾಮಯ್ಯನವರ (Siddaramaiah) ರಾಜೀನಾಮೆಗೆ ಒತ್ತಾಯಿಸುತ್ತಿದ್ದ ಸಮಯದಲ್ಲೇ ಸಿಎಂ ಈ ರೀತಿಯ ಹೇಳಿಕೆ ನೀಡುವ ಮೂಲಕ ಬಿಜೆಪಿ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದ ವಿರುದ್ದವೂ ಗಂಭೀರ ಆರೋಪ ಮಾಡಿದ್ದಾರೆ. ಕೇಂದ್ರ ಸರ್ಕಾರ ಇಡಿ, ಐಟಿ, ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳ ನಾಯಕರ ಸಿಎಂಗಳನ್ನು ಹೆದರಿಸುವಂತಹ ಕೆಲಸ ಮಾಡುತ್ತಿದೆ ಎಂದು ಸಿಎಂ (Siddaramaiah) ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮೈಸೂರಿನ ತಿ. ನರಸೀಪುರ ತಾಲ್ಲೂಕಿನ (T Narasipura) ಹೊರಳಹಳ್ಳಿ ಬಳಿ ನಡೆದ 470 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು (Inauguration) ಸಿಎಂ ಸಿದ್ದರಾಮಯ್ಯ ಅವರು ನೆರವೇರಿಸಿದರು. ಈ ವೇಳೆ ಮಾತನಾಡಿದ (Siddaramaiah)ಅವರು, ನಾನು 40 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ನಮ್ಮ ಮೇಲೆ ಇರುವ ಕೇಸುಗಳು ಸುಳ್ಳು. ನಾನು ಮುಖ್ಯಮಂತ್ರಿಯಾಗಿ, ಉಪ ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯಗೆ 14 ಸೈಟ್ ಗಳಿಗೆ ರಾಜಕೀಯ ಮಾಡಬೇಕಿತ್ತಾ? ಜನರು ಮೂರ್ಖರು ಎಂದು ಬಿಜೆಪಿ ಪಕ್ಷ ಭಾವಿಸಿದೆ. ಜನರ ಬೆಂಬಲವಿರುವವರೆಗೂ ನಾನು ಈ ರೀತಿಯ ಸುಳ್ಳು (Siddaramaiah)ಕೇಸ್ ಗಳಿಗೆ ಜಗ್ಗಲ್ಲ-ಬಗ್ಗಲ್ಲ. ಜಾರ್ಖಂಡ್‌ಬಲ್ಲಿ ಹೇಮಂತ್ ಸೊರೇನ್, ದೆಹಲಿಯಲ್ಲಿ ಕೇಜ್ರಿವಾಲ್ ಆಯ್ತು ಈಗ ನನ್ನ ಮೇಲೆ ಕೇಸ್ ಹಾಕಿಸುವುದು ಶುರುವಾಗಿದೆ. ನಮ್ಮ ಸರ್ಕಾರ ಬೀಳಿಸಲು ಬಿಜೆಪಿ ನಮ್ಮ 50 ಶಾಸಕರಿಗೆ ಒಬ್ಬೊಬ್ಬರಿಗೆ 50 ಕೋಟಿ ರೂ. ಅನ್ನು ಆಫರ್ ಮಾಡಿದ್ದರು. (Siddaramaiah)ಇದು ಫಲಪ್ರಧವಾಗಿಲ್ಲ. ಇಷ್ಟೊಂದು ಹಣ ಬಿಜೆಪಿಗೆ ಎಲ್ಲಿಂದ ಬಂತು, ಯಡಿಯೂರಪಪ್, ಬೊಮ್ಮಾಯಿ, ವಿಜಯೇಂದ್ರ ಅಶೋಕ್ ಏನಾದರೂ ಹಣ ಪ್ರಿಂಟ್ ಮಾಡುತ್ತಾರೆಯೇ, ಇದೆಲ್ಲಾ ಭ್ರಷ್ಟಾಚಾರದ ಹಣವಲ್ಲವೇ ಎಂದು ಆಕ್ರೋಷ ಹೊರಹಾಕಿದರು.
ಇನ್ನೂ ನನ್ನ ಕಂಡರೇ ಬಿಜೆಪಿಯವರಿಗೆ (Siddaramaiah) ಹೊಟ್ಟೆಯುರಿ. ನಾನು ಬಡವರ ಪರ ಕೆಲಸ ಮಾಡುತ್ತಿದ್ದೇನೆ ಅಂತಾ ನನ್ನನ್ನು ಸಿಎಂ ಸ್ಥಾನದಿಂದ ಇಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಉಳಿಯಬೇಕು, ಅವರ ಸರ್ಕಾರ ಮುಂದುವರೆಯಬೇಕು ಎಂದು ಜನರೇ ಬಿಜೆಪಿ ಮುಟ್ಟುವಂತೆ ಹೇಳಬೇಕು. ಲೂಟಿಹೊಡೆಯೋದು, (Siddaramaiah) ಜಾತಿ ಮಾಡುವುದೇ ರಾಜಕಾರಣ ಎಂದು ಬಿಜೆಪಿ ತಿಳಿದಿದೆ. ಅವರು ರಾಜ್ಯದಲ್ಲಿ ಏನು ಅಭಿವೃದ್ದಿ ಮಾಡಿದ್ದಾರೆ ಎಂಬುದನ್ನು ಹೇಳಲಿ ನೋಡೋಣ. ಬಿಜೆಪಿಯವರು ನಮ್ಮ ಜೊತೆ ಚರ್ಚೆಗೆ ಬರಲಿ, ನಮ್ಮ ತಪ್ಪು ಏನೆಂದು ತೋರಿಸಲಿ, ನೀವೆಲ್ಲರೂ ನನ್ನ ಜೊತೆ ನಿಲ್ಲಬೇಕು. ನೂರಕ್ಕೆ ನೂರರಷ್ಟು ನಿಲ್ಲಬೇಕು, ಜಾತಿ ಧರ್ಮ ಬಿಟ್ಟು ಅಭಿವೃದ್ಧಿ ಮಾಡುವವರ ಜೊತೆ ನೀವು ಇರಬೇಕು, (Siddaramaiah) ನಿಮ್ಮ ಪ್ರತಿನಿಧಿಯಾಗಿ ನಾವು ಕೆಲಸ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅಬ್ಬರಿಸಿದರು.
ನಮ್ಮ ಸರ್ಕಾರದಲ್ಲಿ (Siddaramaiah) ಅಭಿವೃದ್ಧಿಗೆ ದುಡ್ಡಿಲ್ಲ ಅಂತ ಅಪಪ್ರಚಾರ ಮಾಡ್ತಿದ್ದಾರೆ, ಈ ಪ್ರಚಾರ ಶುದ್ಧ ಸುಳ್ಳು ಎಂದು ಹೇಳೋದಕ್ಕೆ ಈ ಕಾರ್ಯಕ್ರಮಗಳೇ ಸಾಕ್ಷಿ. ಒಂದು ಕ್ಷೇತ್ರಕ್ಕೆ 500 ಕೋಟಿ ಅಭಿವೃದ್ಧಿಗೆ ಕೊಡ್ತಿದ್ದೇವೇ, (Siddaramaiah) ಕರ್ನಾಟಕದ ಬಜೆಟ್ 3 ಲಕ್ಷದ 71 ಸಾವಿರ ಕೋಟಿ. ಅದರಲ್ಲಿ 1ಲಕ್ಷದ 20 ಸಾವಿರ ಕೋಟಿ ಅಭಿವೃದ್ದಿ ಕೆಲಸಗಳಿಗೆ ಇಟ್ಟಿದ್ದೇವೆ. 56 ಸಾವಿರ ಕೋಟಿ ಮಾತ್ರ ಗ್ಯಾರೆಂಟಿಗಳಿಗೆ ಕೊಡ್ತಿದ್ದೇವೆ. ಇನ್ನುಳಿದ 64 ಸಾವಿರ ಕೋಟಿ ಬೇರೆ ಬೇರೆ ಇಲಾಖೆ (Siddaramaiah) ಅಭಿವೃದ್ಧಿಗೆ ಖರ್ಚು ಮಾಡುತ್ತಿದ್ದೇವೆ. ಇದನ್ನೆಲ್ಲಾ ಸಹಿಸದ ಬಿಜೆಪಿ ಮೈತ್ರಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.