Shocking – ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ” ಎಂಬ ಮಾತಿದೆ. ಆದರೆ, ವಾಸ್ತವದಲ್ಲಿ ಅನೇಕ ಮದುವೆಗಳು ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತವೆ. ಕೆಲವೊಮ್ಮೆ ಊಟದ ವಿಚಾರಕ್ಕೆ, ಇನ್ನು ಕೆಲವೊಮ್ಮೆ ವಧು ಅಥವಾ ವರ ಮಂಟಪದಿಂದ ಪರಾರಿಯಾಗುವುದು ಸಾಮಾನ್ಯ.
ಆದರೆ, ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದ ಈ ಘಟನೆ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ. ಇಲ್ಲಿ, ಅದ್ದೂರಿಯಾಗಿ ಮದುವೆ ನಡೆದ ನಂತರ, ಗಂಡನ ಮನೆಗೆ ಹೊರಟಿದ್ದ ವಧು, ದಾರಿ ಮಧ್ಯದಲ್ಲಿ ವರನಿಗೆ ಶಾಕ್ ನೀಡಿದ್ದಾಳೆ. “ನಾವಿಬ್ಬರೂ ಮದುವೆಯಾಗಿದ್ದರೂ, ಅಣ್ಣ-ತಂಗಿಯಂತೆ ಇರೋಣ” ಎಂದು ಆಕೆ ಹೇಳಿದ್ದಾಳೆ! ಇದನ್ನು ಕೇಳಿದ ವರ ಒಮ್ಮೆಲ್ಲೆ ಶಾಕ್ ಆಗಿದ್ದಾನೆ.
Shocking – ಮದುವೆಯಾದ ಕೆಲವೇ ಗಂಟೆಗಳಲ್ಲಿ ಮುರಿದುಬಿದ್ದ ಸಂಬಂಧ
ಬೋಪಾಲ್ ರಸ್ತೆಯ ರೆಸಾರ್ಟ್ ಒಂದರಲ್ಲಿ ಸಾಗರ ಜಿಲ್ಲೆಯ ಯುವಕ ಮತ್ತು ಲಲಿತಾಪುರದ ಯುವತಿಯ ಮದುವೆ ಅದ್ಧೂರಿಯಾಗಿ ನೆರವೇರಿತು. ಸಂಭ್ರಮದಿಂದ ಮದುವೆ ಮುಗಿದ ನಂತರ, ವಧು ತನ್ನ ಗಂಡನ ಮನೆಗೆ ತೆರಳಲು ಕಾರು ಹತ್ತಿದಳು. ಸ್ವಲ್ಪ ದೂರ ಕ್ರಮಿಸಿದ ನಂತರ, ವಧು ತನ್ನ ಮನಸ್ಸಿನಲ್ಲಿದ್ದ ನಿಜವಾದ ವಿಷಯವನ್ನು ಹೊರಹಾಕಿದಳು. ಆಕೆ ಹೇಳಿದ್ದು ಹೀಗೆ: “ನನಗೆ ಈ ಮದುವೆ ಇಷ್ಟವಿಲ್ಲ. ನಾನು ಬೇರೆಯೊಬ್ಬರನ್ನು ಪ್ರೀತಿಸುತ್ತಿದ್ದೇನೆ. ನಿಮ್ಮನ್ನು ಮದುವೆಯಾಗಿದ್ದೇನೋ ನಿಜ, ಆದರೆ ಪತ್ನಿಯಾಗಿ ಸಂಸಾರ ಮಾಡಲು ನನಗೆ ಸಾಧ್ಯವಿಲ್ಲ. ಹಾಗಾಗಿ, ನಾವಿಬ್ಬರೂ ಅಣ್ಣ-ತಂಗಿಯಂತೆ ಇದ್ದುಬಿಡೋಣ ಎಂದು ಹೇಳಿದ್ದಾಳೆ.
Read this also : 21 ವಯಸ್ಸಿಗೆ 12 ಮಂದಿಯೊಂದಿಗೆ ಮದುವೆ, ಮದುವೆ ಹೆಸರಲ್ಲಿ 12 ಮಂದಿ ಮಕ್ಮಲ್ ಟೋಪಿ ಹಾಕಿದ ಖತರ್ನಾಕ್ ಲೇಡಿ…!
Shocking – ಆಘಾತಕ್ಕೊಳಗಾದ ವರನ ದಿಢೀರ್ ನಿರ್ಧಾರ
ಈ ಅನಿರೀಕ್ಷಿತ ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ವರನು ತಕ್ಷಣವೇ ತನ್ನ ನಿರ್ಧಾರವನ್ನು ಬದಲಾಯಿಸಿದನು. ತಕ್ಷಣವೇ ಈ ವಿಷಯವನ್ನು ತನ್ನ ಕುಟುಂಬಕ್ಕೆ ತಿಳಿಸಿದನು. ನಂತರ, ಮದುವೆ ಮಂಟಪಕ್ಕೆ ಹಿಂತಿರುಗಿ, ಅಲ್ಲಿ ನೆರೆದಿದ್ದ ವಧುವಿನ ಕಡೆಯವರಿಗೆ ವಿಷಯವನ್ನು ತಿಳಿಸಿದನು. ಯಾವುದೇ ಹೆಚ್ಚಿನ ಮಾತುಕತೆ ನಡೆಸದೆ, ವರನು ವಧುವನ್ನು ಅಲ್ಲೇ ಬಿಟ್ಟು ಹೊರಟುಹೋದನು.
Shocking – ವಧುವಿನಿಂದ ಮುಚ್ಚಿಟ್ಟ ಸತ್ಯ, ಮುರಿದುಬಿದ್ದ ಕನಸುಗಳು
ಮದುವೆಯಾಗುವವರೆಗೂ ತನ್ನ ಪ್ರೀತಿಯ ವಿಷಯವನ್ನು ಮುಚ್ಚಿಟ್ಟಿದ್ದ ವಧುವಿನಿಂದಾಗಿ, ವರನ ಎಲ್ಲಾ ಆಸೆಗಳು ಮತ್ತು ಕನಸುಗಳು ನುಚ್ಚುನೂರಾಗಿವೆ. ಈ ಘಟನೆ ನಿಜಕ್ಕೂ ವಿಪರ್ಯಾಸದಿಂದ ಕೂಡಿದೆ. ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದ ಈ ವಿಚಿತ್ರ ಘಟನೆ ಇದೀಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಮದುವೆ ಮುರಿದುಬಿದ್ದ ಈ ಕಥೆ ಅಚ್ಚರಿಯನ್ನುಂಟು ಮಾಡಿದೆ.