ಮಕ್ಕಳಲ್ಲಿನ ಪ್ರತಿಭೆ ಗುರ್ತಿಸಿ, ಪ್ರೋತ್ಸಾಹ ನೀಡಿ: ಪ್ರೊ.ಡಿ.ಶಿವಣ್ಣ

ಬಾಗೇಪಲ್ಲಿ:  ಯಾವುದೇ  ಕ್ಷೇತ್ರದಲ್ಲಿರುವ  ಪ್ರತಿಭೆಗೆ ವಿಷೇಶವಾದಂತಹ ಪ್ರಾಮುಖ್ಯತೆ ನೀಡುವುದು ಪ್ತತಿಯೊಬ್ಬ ಕರ್ತವ್ಯವಾಗಿದೆ. ಪ್ರತಿಭೆಯನ್ನು ಗುರ್ತಿಸಿ, ಪ್ರೋತ್ಸಾಹಿಸಿ ಬೆಳೆಸಿದಾಗ ಮಾತ್ರ  ಯಾವುದೇ ದೇಶ ಅಭಿವೃದ್ದಿ ಹೊಂದಲು  ಸಾಧ್ಯವಾಗುತ್ತೆ ಎಂದು ಯಂಗ್ ಇಂಡಿಯಾ ಶಾಲೆಯ ಮುಖ್ಯಸ್ಥರಾದ ಪ್ರೊ.ಡಿ.ಶಿವಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಯಂಗ್ ಇಂಡಿಯಾ ಶಾಲೆಯ ಆವರಣದಲ್ಲಿ ನಡೆದ ಅಭಿನಂಧನೆ ಸಭೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 6 ನೇ ರ್ಯಾಂಕ್ ಪಡೆದ ಲಕ್ಷ್ಮೀಲಿಶಾ ಮತ್ತು 7ನೇ ಪಡೆದ ಮನೋಜ್ ಕುಮಾರ್ ಅತ್ಯುತ್ತಮ ಸಾಧನೆ ಮಾಡಿದ ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂಧಿಸಿ ಮಾತನಾಡಿದ ಅವರು ಪ್ರತಿಭೆಗೆ  ವಿಷೇಶವಾದಂತಹ ಮಹತ್ವವನ್ನು ನೀಡುವುದು ಪ್ರತಿಯೊಬ್ಬ ಕರ್ತವ್ಯವಾಗಿದೆ. ಪ್ರತಿಭೆಯನ್ನು ಗುರ್ತಿಸಿ,ಪ್ರೋತ್ಸಹಿಸಿ ಬೆಳೆಸಿದ ಯಾವುದೇ ಒಂದು ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಅಭಿವೃದ್ದಿಯಲ್ಲಿ ಮುಂಜೂಣಿಯಲ್ಲಿರುತ್ತೆ ಎಂದರು.

honors to students in bagepalli

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ತಮ್ಮದೇ ಆದ ವಿಷೇಶ ಜ್ಞಾನ ಇರುತ್ತೆ ಆದರೆ ಸಾಧಿಸಬೇಕು ಎನ್ನುವ ಛಲ, ಶ್ರಮವಹಿಸಿದಾಗ ಮಾತ್ರ ಶಿಕ್ಷಣ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾದ್ಯವಾಗುತ್ತೆ ಎಲ್ಲದೆ ಸಾಧನೆಗೆ ಜಾತಿ, ಧರ್ಮ,ಬಡತನ ಇತ್ಯಾಧಿ ಅಡ್ಡಿಯಲ್ಲ ಎಂದ ಅವರು ಕಷ್ಟಪಟ್ಟು ಓದುವ ಬದಲಿಗೆ ಇಷ್ಟಪಟ್ಟು ಓದುವುದನ್ನು ಬಾಲ್ಯದಿಂದಲ್ಲೇ ರೂಢಿಸಿಕೊಳ್ಳುವಂತೆ  ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಲಕ್ಷ್ಮೀಲಿಶಾ ಮತ್ತು ಮನೋಜ್ ಕುಮಾರ್ 10ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಸತತ 6 ಮತ್ತು 7ನೇ ರ್ಯಾಂಕ್ ಪಡೆಯುವ ಮೂಲಕ  ಬೆಂಗಳುರು ಸೇರಿದಂತೆ ವಿವಿಧ ನಗರ ಪ್ರದೇಶಗಳ ವಿದ್ಯಾರ್ಥಿಗಳಗಿಂತ ಬಾಗೇಪಲ್ಲಿಯಂತಹ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ಕಮ್ಮಿ ಇಲ್ಲ ಎಂಬುದನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳು ಮಾಡಿ ತೋರಿಸಿದ್ದಾರೆ ಎಂದರು.

ಯಂಗ್ ಇಂಡಿಯಾ ಶಾಲೆಯ  ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆಯಲ್ಲಿ ಸತತವಾಗಿ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ ಬೋರ್ಡ್‍ವತಿಯಿಂದ   ನಮ್ಮ ಶಾಲೆಗೆ ‘ಎ’ ಗ್ರೇಡ್  ಬಂದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಅವರು ನಮ್ಮ ಶಾಲೆಯ ಈ ಸಾಧನೆಗೆ ಶಾಲೆಯ ವಿದ್ಯಾರ್ಥಿಗಳ, ಶಿಕ್ಷಕರ ಹಾಗೂ ಪೋಷಕರ ಶ್ರಮದಿಂದ ಸಾಧ್ಯವಾಗಿದೆ ಎಂದ ಅವರು ವಿದ್ಯಾರ್ಥಿಗಳಲ್ಲಿರುವ ಶಕ್ತಿಯನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಭವಿಷ್ಯತ್ತು ರೂಪಿಸಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಯಂಗ್ ಇಂಡಿಯಾ ಶಾಲೆಯ ಮುಖ್ಯ ಶಿಕ್ಷಕಿ ಕಲ್ಪನಾ ಹಾಗೂ 10ನೇ ತರಗತಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಶಾಲೆಯ ವಿದ್ಯಾರ್ಥಿಗಳಾದ ಲಕ್ಷ್ಮೀಲಿಶಾ ಮತ್ತು ಮನೋಜ್ ಕುಮಾರ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

Next Post

ಶಾಸಕರ ಸ್ವ ಗ್ರಾಮ ಪೆರೇಸಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಹೆರಿಗೆಗೆ ಬಂದ ಗರ್ಭಿಣಿ ಹೊಟ್ಟೆಯಲ್ಲಿ ಮಗು ಸಾವು!

Sat May 25 , 2024
ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಯೊಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಕ್ಷೇತ್ರ ಶಾಸಕ ಪ್ರದೀಪ್ ಈಶ್ವರ್ ಹಾಗೂ ಮಾಜಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ರವರ ಸ್ವ ಗ್ರಾಮದಲ್ಲಿ ನಡೆದಿದೆ. ಪೆರೇಸಂದ್ರ ಗ್ರಾಮದ ಗರ್ಭಿಣಿ ಮಹಿಳೆ ಹೆರಿಗೆಗೆ ಎಂದು ಪೆರೇಸಂದ್ರ 24×7 ಸರ್ಕಾರಿ ಆಸ್ಪತ್ರೆಗೆ ಬುಧವಾರ ಬೆಳಿಗ್ಗೆ 7 ಗಂಟೆಗೆ ದಾಖಲಾಗಿದ್ದಾರೆ. ಇಲ್ಲಿನ ಆಸ್ಪತ್ರೆಯ ಸಿಬ್ಬಂದಿ ನಾರ್ಮಲ್ ಆಗುತ್ತದೆ ಎಂದು ಮಧ್ಯಾಹ್ನ 12 ರ ವರೆಗೆ ಆಸ್ಪತ್ರೆಯಲ್ಲಿ […]
new born baby dead in peresandra
error: Content is protected !!