Transgender – ಒಂದು ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ಬೆಳಕಿಗೆ ಬಂದಿದೆ. ನವವಿವಾಹಿತ ಯುವಕನೊಬ್ಬನ ಖಾಸಗಿ ಅಂಗವನ್ನು ಲೈಂಗಿಕ ಅಲ್ಪಸಂಖ್ಯಾತರು ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಭೀಕರ ಕೃತ್ಯದಿಂದ ಇಡೀ ಪ್ರದೇಶದಲ್ಲಿ ಆತಂಕ ಮನೆ ಮಾಡಿದ್ದು, ಸಂತ್ರಸ್ತನ ಕುಟುಂಬ ನ್ಯಾಯಕ್ಕಾಗಿ ಆಗ್ರಹಿಸಿದೆ.
Transgender – ಡ್ಯಾನ್ಸರ್‌ಗೆ ಪರಿಚಿತರಿಂದಲೇ ಕೃತ್ಯ?
ಪೊಲೀಸರು ತನಿಖೆ ನಡೆಸುತ್ತಿದ್ದು, ಲಭ್ಯವಿರುವ ಮಾಹಿತಿ ಪ್ರಕಾರ, ರಾಂಪುರದ ಪಟ್ವಾಯಿ ಪ್ರದೇಶದ ನಿವಾಸಿಯಾಗಿರುವ ಈ ಯುವಕ ಸ್ಥಳೀಯ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಪ್ರದರ್ಶನ ನೀಡುತ್ತಿದ್ದನು. ಇದೇ ಆತನ ಜೀವನೋಪಾಯವಾಗಿತ್ತು. ಡ್ಯಾನ್ಸರ್‌ಗೆ ಪರಿಚಿತರಾಗಿದ್ದ ಐವರು ಲೈಂಗಿಕ ಅಲ್ಪಸಂಖ್ಯಾತರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
Transgender – ಡ್ಯಾನ್ಸ್ ಪ್ರದರ್ಶನದ ನಡುವೆಯೇ ದುರಂತ?
ಪ್ರಾಥಮಿಕ ವರದಿಗಳ ಪ್ರಕಾರ, ಈ ಯುವಕ ಬದಾಯೂಂನ ಬಿಸೌಲಿಗೆ ಒಂದು ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಶಹಾಬಾದ್‌ನಲ್ಲಿ ಇಬ್ಬರು ಲೈಂಗಿಕ ಅಲ್ಪಸಂಖ್ಯಾತರು ಇವರನ್ನು ಭೇಟಿಯಾಗಿದ್ದಾರೆ. ಅವರ ಜೊತೆಗೆ ಇನ್ನಿಬ್ಬರು ಇದ್ದರು ಎಂದು ಹೇಳಲಾಗಿದೆ. ಇವರೆಲ್ಲರೂ ಸಂತ್ರಸ್ತನಿಗೆ ಪರಿಚಿತರಾಗಿದ್ದರು. ಯಾವುದೇ ಕಾರಣವಿಲ್ಲದೆ ಜಗಳ ಪ್ರಾರಂಭಿಸಿ, ಬಲವಂತವಾಗಿ ಶಹಾಬಾದ್ ಪ್ರದೇಶದ ಒಂದು ಹಳ್ಳಿಗೆ ಕರೆದೊಯ್ದಿದ್ದಾರೆ.
Transgender – ಮಾದಕ ಪಾನೀಯ ಕುಡಿಸಿ ಕೃತ್ಯ
ಅಲ್ಲಿ ಐವರು ಸೇರಿಕೊಂಡು ಯುವಕನಿಗೆ ಕೋಲ್ಡ್ ಡ್ರಿಂಕ್ ಕುಡಿಸಿದ್ದಾರೆ. ಕೋಲ್ಡ್ ಡ್ರಿಂಕ್ ಕುಡಿದ ನಂತರ ಆತನ ಕಣ್ಣು ಮಂಜು ಮಂಜಾಗಿ ಪ್ರಜ್ಞೆ ತಪ್ಪಿ ಹೋಗಿದೆ. ಎಚ್ಚರವಾದಾಗ ಆತನಿಗೆ ಖಾಸಗಿ ಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಂಡಿದೆ. ಆಗ ನೋಡಿದಾಗ ತನ್ನ ಖಾಸಗಿ ಅಂಗವನ್ನೇ ಕತ್ತರಿಸಲಾಗಿತ್ತು ಎಂದು ಸಂತ್ರಸ್ತ ಆರೋಪಿಸಿದ್ದಾನೆ.
Transgender – ಆಸ್ಪತ್ರೆಗೆ ದಾಖಲು, ಕುಟುಂಬಸ್ಥರ ಆಕ್ರಂದನ
ಘಟನೆ ನಡೆದ ತಕ್ಷಣ ರಸ್ತೆಯಲ್ಲಿ ತೀವ್ರ ನರಳಾಡುತ್ತಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಘಟನೆಯ ಕುರಿತು ಆತನ ಕುಟುಂಬಸ್ಥರಿಗೆ ತಿಳಿಸಲಾಗಿದೆ. ಮಾಹಿತಿ ತಿಳಿದ ಕೂಡಲೇ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿ, ಯುವಕನನ್ನು ದಾಖಲಿಸಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆ ಸಂತ್ರಸ್ತ ಯುವಕನ ಕುಟುಂಬಕ್ಕೆ ದೊಡ್ಡ ಆಘಾತ ನೀಡಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ.
Read this also : ಪ್ರೇಮಿಗಳ ದಾರುಣ ಅಂತ್ಯ: ಆಟೋದಲ್ಲೇ ನೇಣಿಗೆ ಶರಣಾದ ಜೋಡಿ…!
Transgender – ಪೊಲೀಸ್ ತನಿಖೆ ಪ್ರಗತಿಯಲ್ಲಿ
ಈ ಪ್ರಕರಣ ಪೊಲೀಸರ ಗಮನಕ್ಕೆ ಬಂದಿದ್ದು, ತನಿಖೆ ನಡೆಸುತ್ತಿದ್ದಾರೆ. ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳ ಪ್ರಕಾರ, ಯುವಕನಿಂದ ಇನ್ನೂ ಯಾವುದೇ ಲಿಖಿತ ದೂರು ಬಂದಿಲ್ಲ. ಆದರೆ, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.