ತಾಯಿ ಸೋನಿಯಾ ಗಾಂಧಿ ಜೊತೆ ಮತ ಚಲಾಯಿಸಿ ರಾಹುಲ್ ಗಾಂಧಿ, ಸೆಲ್ಫಿ ವೈರಲ್….!

ಲೋಕಸಭಾ ಚುನವಾಣೆ 2024ರ ಆರನೇ ಹಂತದ ಮತದಾನ ಮೇ.25 ರಂದು ನಡೆಯುತ್ತಿದ್ದು, ಬೆಳಗಿನಿಂದಲೇ ಮತದಾನ ನಡೆಯಿತ್ತಿದೆ. ತಮ್ಮ ಮತ ಚಲಾಯಿಸಲು ಕಾಂಗ್ರೇಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿ ಮತ ಚಲಾಯಿಸಿದ್ದಾರೆ. ಅವರೊಂದಿಗೆ ಪ್ರಿಯಾಂಕಾ ಗಾಂಧಿ ಸಹ ಮತದಾನ ಮಾಡಲು ಬಂದಿದ್ದಾರೆ. ಮತ ಚಲಾಯಿಸಿದ ಬಳಿಕ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ರವರು ಸೆಲ್ಫಿ ತೆಗೆದುಕೊಂಡಿದ್ದು, ಪೊಟೋ ವೈರಲ್ ಆಗಿದೆ.

Gandhi Family cast their vote 1

ಕಾಂಗ್ರೇಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತದಾನ ಮಾಡಿದ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿಯೇ ಇಲ್ಲ. ಅಂದರೇ ಐಎನ್‌ಡಿಐಎ ಮೈತ್ರಿಯ ಭಾಗವಾಗಿ ಕಾಂಗ್ರೆಸ್ ತನ್ನ ದೆಹಲಿ ಕ್ಷೇತ್ರವನ್ನು ಮಿತ್ರ ಪಕ್ಷದ ಎಎಪಿಗೆ ಬಿಟ್ಟುಕೊಟ್ಟಿದೆ. ನವದೆಹಲಿಯ ಜನಪತ್ ರಸ್ತೆಯ ನಿರ್ಮಾಣ್ ಭವನದ ಮತಗಟ್ಟೆಯಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಅದೇ ರೀತಿ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಅವರ ಪತಿ ರಾಬರ್ಟ್ ವಾದ್ರಾ ಮಗ ಮಗಳೊಂದಿಗೆ ದೆಹಲಿಯಲ್ಲಿ ಮತ ಚಲಾಯಿಸಿದ್ದಾರೆ.

ಪೋಸ್ಟ್ ನೋಡಲು ಈ ಲಿಂಕ್ ಒಪೆನ್ ಮಾಡಿ : https://x.com/RahulGandhi/status/1794226691692503399

ಇನ್ನೂ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಮತ ಚಲಾಯಿಸಿದ ಬಳಿಕ ಸೆಲ್ಫಿಯೊಂದನ್ನು ತೆಗೆದುಕೊಂಡಿದ್ದಾರೆ. ಈ ಪೊಟೋ ತಮ್ಮ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಹಂಚಿಕೊಂಡು 30 ಲಕ್ಷ ಖಾಲಿ ಇರುವ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ. ಯುವಕರಿಗೆ ವರ್ಷಕ್ಕೆ 1 ಲಕ್ಷ ರೂ.ಗಳ ಮೊದಲ ಉದ್ಯೋಗ ಖಾತರಿ ಯೋಜನೆ ಪ್ರಾರಂಭಿಸಬೇಕು. ಬಡ ಕುಟುಂಬದ ಮಹಿಳೆಯರ ಖಾತೆಗೆ ತಿಂಗಳಿಗೆ 8,500 ರೂಪಾಯಿ ಸಿಗಬೇಕು.  ರೈತರು ಸಾಲದಿಂದ ಋಣಮುಕ್ತರಾಗಿ ತಮ್ಮ ಬೆಳೆಗಳಿಗೆ ಸರಿಯಾದ MSP ಅನ್ನು ಪಡೆಯಬೇಕು. ಕೂಲಿಕಾರರಿಗೆ ದಿನಗೂಲಿ 400 ರೂಪಾಯಿ ನೀಡಲಾಗುವುದು ಎಂದು ತಮ್ಮ ಪ್ರಣಾಳಿಕೆಯ ಅಂಶಗಳನ್ನು ಬರೆದುಕೊಂಡಿದ್ದಾರೆ. ಮತ ನಿಮ್ಮ ಜೀವನವನ್ನು ಸುಧಾರಿಸುವುದಲ್ಲದೆ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುತ್ತದೆ. ಪ್ರಜಾಪ್ರಭುತ್ವದ ಈ ಮಹಾನ್ ಹಬ್ಬಕ್ಕೆ ನಾನು ಮತ್ತು ತಾಯಿ ಮತದಾನದ ಮೂಲಕ ಕೊಡುಗೆ ನೀಡಿದ್ದೇವೆ. ನೀವೆಲ್ಲರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಮನೆಗಳಿಂದ ಹೊರಬನ್ನಿ, ನಿಮ್ಮ ಹಕ್ಕುಗಳಿಗಾಗಿ ಮತ್ತು ನಿಮ್ಮ ಕುಟುಂಬದ ಭವಿಷ್ಯಕ್ಕಾಗಿ ಮತ ಚಲಾಯಿಸಬೇಕು ಎಂದು ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

Next Post

ಉಡುಪಿಯ ನಡು ರಸ್ತೆಯಲ್ಲಿ ನಡೆದ ಗ್ಯಾಂಗ್ ವಾರ್, ವಿಡಿಯೋ ನೋಡಿದ್ರೆ ನೀವು ಬೆಚ್ಚಿ ಬೀಳ್ತೀರಾ….!

Sat May 25 , 2024
ಶಿಕ್ಷಣ ನಗರಿ ಎಂದೇ ಕರೆಯಲಾಗುವ ಉಡುಪಿಯ ನಡು ರಸ್ತೆಯಲ್ಲೇ ಗ್ಯಾಂಗ್ ವಾರ್‍ ನಡೆದಿದೆ. ಈ ಗ್ಯಾಂಗ್ ವಾರ್‍ ನ ದೃಶ್ಯಗಳ ವಿಡಿಯೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಸಿನೆಮಾ ಮಾದರಿಯಲ್ಲಿ  ಈ ಗ್ಯಾಂಗ್ ವಾರ್‍ ನಡೆದಿದೆ. ನೆಮ್ಮದಿಯಿಂದ ಇದ್ದ ಉಡುಪಿಯ ಜನತೆ ಈ ವಿಡಿಯೋ ನೋಡಿ ಭಯಪಡುವಂತಾಗಿದೆ. ಉಡುಪಿಯನ್ನು ಶಿಕ್ಷಣ ನಗರಿ ಎಂತಲೂ ಕರೆಯಲಾಗುತ್ತಿದೆ. ಶಾಂತವಾಗಿರುವ ಈ ಪ್ರದೇಶದಲ್ಲಿ ಇದಿಗ ಕೆಲ ಪುಂಡ ಪೋಕರಿಗಳು ಬಾಲ ಬಿಚ್ಚುತ್ತಿದ್ದಾರೆ. ಉಡುಪಿ ನಗರದಲ್ಲಿ […]
Udupi Gangwar 1
error: Content is protected !!