ಉಡುಪಿಯ ನಡು ರಸ್ತೆಯಲ್ಲಿ ನಡೆದ ಗ್ಯಾಂಗ್ ವಾರ್, ವಿಡಿಯೋ ನೋಡಿದ್ರೆ ನೀವು ಬೆಚ್ಚಿ ಬೀಳ್ತೀರಾ….!

ಶಿಕ್ಷಣ ನಗರಿ ಎಂದೇ ಕರೆಯಲಾಗುವ ಉಡುಪಿಯ ನಡು ರಸ್ತೆಯಲ್ಲೇ ಗ್ಯಾಂಗ್ ವಾರ್‍ ನಡೆದಿದೆ. ಈ ಗ್ಯಾಂಗ್ ವಾರ್‍ ನ ದೃಶ್ಯಗಳ ವಿಡಿಯೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಸಿನೆಮಾ ಮಾದರಿಯಲ್ಲಿ  ಈ ಗ್ಯಾಂಗ್ ವಾರ್‍ ನಡೆದಿದೆ. ನೆಮ್ಮದಿಯಿಂದ ಇದ್ದ ಉಡುಪಿಯ ಜನತೆ ಈ ವಿಡಿಯೋ ನೋಡಿ ಭಯಪಡುವಂತಾಗಿದೆ.

Udupi Gangwar 2

ಉಡುಪಿಯನ್ನು ಶಿಕ್ಷಣ ನಗರಿ ಎಂತಲೂ ಕರೆಯಲಾಗುತ್ತಿದೆ. ಶಾಂತವಾಗಿರುವ ಈ ಪ್ರದೇಶದಲ್ಲಿ ಇದಿಗ ಕೆಲ ಪುಂಡ ಪೋಕರಿಗಳು ಬಾಲ ಬಿಚ್ಚುತ್ತಿದ್ದಾರೆ. ಉಡುಪಿ ನಗರದಲ್ಲಿ ಎರಡು ತಂಡಗಳ ನಡುವೆ ಗ್ಯಾಂಗ್ ವಾರ್‍ ನಡೆದಿದೆ. ನಗರದ ಕುಂಜಿಬೆಟ್ಟು ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ಎರಡು ಗ್ಯಾಂಗ್ ಗಳು ಹೊಡೆದಾಡಿಕೊಂಡಿವೆ. ಮೂಲಗಳ ಪ್ರಕಾರ ಈ ಘಟನೆ ಕಳೆದ ಮೇ.18 ರಂದು ನಡೆದಿದೆ ಎನ್ನಲಾಗಿದೆ. ಎರಡೂ ತಂಡಗಳು ಹೊಡೆದಾಡಿಕೊಳ್ಳುವ ವಿಡಿಯೋವನ್ನು ಯಾರೋ ರೆಕಾರ್ಡ್ ಮಾಡಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ವಿಡಿಯೋ ನೋಡಲು ಈ ಲಿಂಕ್ ಒಪೆನ್ ಮಾಡಿ: https://fb.watch/shxqRe-9Gp/

ವಿಡಿಯೋದಲ್ಲಿ ಕಾಣುವಂತೆ ಎರಡು ತಂಡಗಳು ಹೊಡೆದಾಡಿಕೊಂಡಿದೆ. ಬಿಳಿ ಹಾಗೂ ಕಪ್ಪು ಬಣ್ಣದ ಕಾರ್‍ ಗಳಲ್ಲಿ ಇರುವಂತಹ ಎರಡು ತಂಡಗಳು ರಸ್ತೆ ಮಧ್ಯೆಯೇ ಜಗಳ ಮಾಡಿಕೊಂಡಿದ್ದಾರೆ. ಈ ಜಗಳ ತಾರಕಕ್ಕೇರಿದೆ. ಕಾರಿನಿಂದ ಇನ್ನೋಂದು ಕಾರ್‍ ಗೆ ಗುದ್ದಿದೆ. ಆಗ ವಿರೋಧಿ ಗ್ಯಾಂಗ್ ನಲ್ಲಿದ್ದ ಓರ್ವ ಮತ್ತೊಂದು ತಂಡದ ಮೇಲೆ ಲಾಂಗ್ ಬೀಸಿದ್ದಾನೆ. ಆತ ಬೀಸಿದ ಲಾಂಗ್ ಏಟು ಬಿದ್ದು ಕಾರ್‍ ಗಾಜು ಪುಡಿ ಪುಡಿಯಾಗಿದೆ. ಬಳಿಕ ಮತ್ತೋಂದು ಗ್ಯಾಂಗ್ ಕಾರ್‍ ಅನ್ನು ಮುಂದಕ್ಕೆ ಚಲಾಯಿಸಿ ವಾಪಸ್ಸು ಬಂದು ವಿರೋಧಿ ಗ್ಯಾಂಗ್ ನ ಕಾರ್‍ ಗೆ ಗುದಿದ್ದೆ. ಅಷ್ಟೇಅಲ್ಲದೇ  ವೇಗವಾಗಿ  ತನ್ನ ಕಾರ್‍ ಚಲಾಯಿಸಿಕೊಂಡು ಬಂದು ವಿರೋಧಿ ಗ್ಯಾಂಗ್ ನ ಸದಸ್ಯನೊಬ್ಬನ ಮೇಲೆ ಕಾರ್‍ ಹರಿಸಿದ್ದಾರೆ. ಈ ವೇಳೆ ಆ ವ್ಯಕ್ತಿ ಅಲ್ಲೇ ಪ್ರಜ್ಞೆ ತಪ್ಪಿಬಿದಿದ್ದಾನೆ. ಈ ಭೀಕರ ಗ್ಯಾಂಗ್ ವಾರ್‍ ನ ವಿಡಿಯೋ ವೈರಲ್ ಆಗುತ್ತಿದೆ.

Udupi Gangwar

ಇನ್ನೂ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ದೂರು ಸಹ ದಾಖಲಾಗಿದ್ದು, ಎರಡೂ ತಂಡಗಳ ಸದಸ್ಯರನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ. ಸದ್ಯ ಕೇಳಿಬರುತ್ತಿರುವ ಮಾಹಿತಿಯಂತೆ ಕಾರು ಮಾರಾಟಕ್ಕೆ ಸಂಬಂಧಿಸಿದಂತೆ ಈ ಗ್ಯಾಂಗ್ ವಾರ್‍ ನಡೆದಿದೆಯಂತೆ. ಗರುಡ ಎಂಬ ಹೆಸರಿನ ಮುಸ್ಲೀಂ ಸಮುದಾಯಕ್ಕೆ ಸೇರಿದ ಎರಡು ಗ್ಯಾಂಗ್ ನಡುವೆ ಈ ಗಲಾಟೆ ನಡೆದಿದೆ ಎನ್ನಲಾಗಿದೆ. ಇನ್ನೂ ಈ ವಿಡಿಯೋ ಕುರಿತು ಬಿಜೆಪಿ ಪಕ್ಷ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ರಾಜ್ಯ ಸರ್ಕಾರದ ವಿರುದ್ದ ಆಕ್ರೋಷ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *

Next Post

ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದ ಸಿಎಂ, ಡಿಸಿಎಂ, ಧರ್ಮಯುದ್ದ ಆರಂಭಿಸುವ ಮುನ್ನ ಮಂಜುನಾಥನ ದರ್ಶನ ಪಡೆದಿದ್ದೇನೆ ಎಂದ ಡಿಕೆಶಿ…..!

Sat May 25 , 2024
ರಾಜ್ಯ ಕಾಂಗ್ರೇಸ್ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು, ಮಂಜುನಾಥನ ದರ್ಶನ ಪಡೆದಿದ್ದಾರೆ.  ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಾಥ್ ನೀಡಿದರು. ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ನಾಯಕರು ಬಳಿಕ ರಸ್ತೆ ಮಾರ್ಗದ ಮೂಲಕ ಮಂಜುನಾಥನ ಸನ್ನಿಧಿಗೆ ಆಗಮಿಸಿದ್ದಾರೆ. ಧರ್ಮಸ್ಥಳದ ಪ್ರವೇಶ ದ್ವಾರದಲ್ಲಿ […]
CM Siddaramaiah and DCM DKS visited dharmastala
error: Content is protected !!