Friday, June 13, 2025
HomeStatePrimary Teachers: ಬೇಡಿಕೆ ಈಡೇರುವವರೆಗೂ ನಮ್ಮ ಪ್ರತಿಭಟನೆ ನಿಲ್ಲೊಲ್ಲ: ಬಾಲಾಜಿ

Primary Teachers: ಬೇಡಿಕೆ ಈಡೇರುವವರೆಗೂ ನಮ್ಮ ಪ್ರತಿಭಟನೆ ನಿಲ್ಲೊಲ್ಲ: ಬಾಲಾಜಿ

Primary Teachers – ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ವತಿಯಿಂದ ಹಮ್ಮಿಕೊಂಡಿದ್ದ ಬೆಂಗಳೂರು ಚಲೋ ಹೋರಾಟ ಮೊದಲ ಹಂತವಾಗಿದ್ದು, ನಮ್ಮ ಬೇಡಿಕೆಗಳು ಈಡೇರುವವರೆಗೂ ನಮ್ಮ ಪ್ರತಿಭಟನೆ ನಿಲ್ಲೊಲ್ಲ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಾಲಾಜಿ ತಿಳಿಸಿದರು.

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ (Primary Teachers) ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಬೆಂಗಳೂರು ಚಲೋ ಪ್ರತಿಭಟನೆಗೆ ಗುಡಿಬಂಡೆಯಿಂದಲೂ ಶಿಕ್ಷಕರು ಭಾಗಿಯಾಗಿದ್ದರು. ಈ ಸಮಯದಲ್ಲಿ ಮಾತನಾಡಿದ ಬಾಲಾಜಿ, ಬಡ್ತಿ, ವರ್ಗಾವಣೆಗೆ ಅಡ್ಡಿಯಾಗಿರುವಂತಹ ವೃಂದ ಹಾಗೂ ನೇಮಕಾತಿ ನಿಯಮ 2017ಕ್ಕೆ ತಿದ್ದುಪಡಿ ತಂದು ಶಿಕ್ಷಕರಿಗೆ (Primary Teachers) ನ್ಯಾಯ ಒದಗಿಸಿಕೊಡಬೇಕು. ಸುಮಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಬಡ್ತಿ ಸಿಗುತ್ತಿಲ್ಲ. ವಿದ್ಯಾರ್ಹತೆ ಹಾಗೂ ಸೇವಾವಧಿ ಪರಿಗಣಿಸಿ ಶಿಕ್ಷಕರಿಗೆ ಬಡ್ತಿ ನೀಡಬೇಕು. ಗ್ರಾಮೀಣ-ನಗರ ವರ್ಗಾವಣೆಗೆ ರೋಸ್ಟರ್‍ ಪಾಲಿಸದಿದ್ದರೇ, ಕಾನೂನು ಹೋರಾಟ ಮಾಡಬೇಕಾಗುತ್ತದೆ. ಇದೀಗ ಬೆಂಗಳೂರು ಚಲೋ ಕೇವಲ ಮೊದಲ ಹಂತದ ಹೋರಾಟವಾಗಿದೆ. ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದೇ ಇದ್ದರೇ ನಮ್ಮ ಹೋರಾಟ(Primary Teachers) ಮುಂದುವರೆಯುತ್ತದೆ ಎಂದರು.

ಬಳಿಕ (Primary Teachers)  ಸಂಘದ ಕಾರ್ಯದರ್ಶಿ ಶ್ರೀರಾಮಪ್ಪ ಮಾತನಾಡಿ, 2016ಕ್ಕಿಂತ ಮುಂಚೆ ನೇಮಕವಾದ ಶಿಕ್ಷಕರಿಗೆ ವೃಂದ ಹಾಗೂ ನೇಮಕಾತಿ ನಿಯಮ 2017 ಅನ್ವಯಿಸಬಾರದು.  1 ರಿಂದ 8ನೇ ತರಗತಿಯ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು 1 -5 ತರಗತಿಗಳಿಗೆ ಮಾತ್ರ ಸೀಮಿತ ಮಾಡಿರುವುದು ಸರಿಯಲ್ಲ, ಈ ಆದೇಶ ಹಿಂಪಡೆಯಬೇಕು. ಮುಖ್ಯ(Primary Teachers) ಶಿಕ್ಷಕರ ಹುದ್ದೆಗೆ ಸೇವಾ ಹಿರಿತನ ಪರಿಗಣಿಸಿ ಬಡ್ತಿ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾವು ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂಧಿಸಿ ಈಡೇರಿಸಬೇಕು ಎಂದರು.

ಈ ವೇಳೆ(Primary Teachers) ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಶ್ರೀರಾಮರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಉಮಾಶಂಕರ್‍,  ಶ್ವೇತಾ, ಸುಮಿತ್ರಾ, ಆದಿನಾರಾಯಣ, ಮುದ್ದುರಾಜು, ಆದಿನಾರಾಯಣಪ್ಪ ಸೇರಿದಂತೆ ಹಲವರು ಇದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular