Politics : ನನಗೆ 40 ವರ್ಷಗಳ ರಾಜಕೀಯ ಅನುಭವವಿದ್ದು, ಎಂದೂ ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸವಾಗಲಿ ಅಥವಾ ಪಕ್ಷ ಒಡೆಯುವಂತಹ ಕೆಲಸವಾಗಲಿ ಮಾಡಿಲ್ಲ, ಮಾಜಿ ಯೂತ್ ಕಾಂಗ್ರೇಸ್ ಅಧ್ಯಕ್ಷ ಯರ್ರಲಕ್ಕೇನಹಳ್ಳಿ ಮಂಜುನಾಥ್ ನನ್ನ ವಿರುದ್ದ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಗುಡಿಬಂಡೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಡೇಹಳ್ಳಿ ಆದಿರೆಡ್ಡಿ ತಿಳಿಸಿದರು.

Politics – ಪತ್ರಿಕಾಗೋಷ್ಟಿಯಲ್ಲಿ ಮಂಜುನಾಥ್ ಅವರ ಆರೋಪಗಳ ಖಂಡನೆ
ಈ ಕುರಿತು ಗುಡಿಬಂಡೆ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಶನಿವಾರ ಪಿ.ಎಲ್.ಡಿ ಬ್ಯಾಂಕ್ ನ ಬೀಚಗಾನಹಳ್ಳಿ ಕ್ಷೇತ್ರದ ನಿರ್ದೇಶಕರ ಚುನಾವಣೆಯ ಫಲಿತಾಂಶ ಘೋಷಣೆಯಾಗಿದ್ದು, ಅಂದು ಮಾಜಿ ಯೂತ್ ಕಾಂಗ್ರೇಸ್ ಅಧ್ಯಕ್ಷ ಯರ್ರಲಕ್ಕೇನಹಳ್ಳಿ ಮಂಜುನಾಥ್ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಪಕ್ಷದಲ್ಲಿ ಗುಂಪುಗಾರಿಕೆ ಆಗಲು, ಯುವಕರಿಗೆ ರಾಜಕೀಯದಲ್ಲಿ ಬೆಳೆಯಲು ಅವಕಾಶ ಮಾಡಿಕೊಡದೇ ಇರುವುದು ಸೇರಿದಂತೆ ಹಲವು ಆರೋಪಗಳನ್ನು ನನ್ನ ವಿರುದ್ದ ಮಾಡಿರುತ್ತಾರೆ. ಆದರೆ ನನ್ನ ರಾಜಕೀಯ ಅನುಭವದಲ್ಲಿ ಈ ರೀತಿಯ ತರಲೆ ಕೆಲಸಗಳಿಗೆ ಎಂದೂ ಕೈ ಹಾಕಿದವನಲ್ಲ ಎಂದರು.
Politics – ಬೀಚಗಾನಹಳ್ಳಿ ಕ್ಷೇತ್ರದ ಚುನಾವಣೆ ವಿವಾದ
ಇನ್ನೂ ಬೀಚಗಾನಹಳ್ಳಿ ಕ್ಷೇತ್ರದಿಂದ ಪಿ.ಎಲ್.ಡಿ ಬ್ಯಾಂಕ್ ನ ಬೀಚಗಾನಹಳ್ಳಿ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತ ಇಬ್ಬರು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಇಬ್ಬರನ್ನೂ ಸಂದಾನ ಮಾಡಲು ನಾನು ಪ್ರಯತ್ನ ಮಾಡಿದಾಗ ಬೀಚಗಾನಹಳ್ಳಿ ವ್ಯಾಪ್ತಿಯ ಮುಖಂಡ ಮಹದೇವಪ್ಪ ಎಂಬುವವರು ಮಧ್ಯೆ ಪ್ರವೇಶಿಸಿ ಗೊಂದಲ ಸೃಷ್ಟಿಸಿದರು. ಬಳಿಕ ನಾನು ಯಾರ ಪರವೂ ಬೆಂಬಲ ನೀಡಲ್ಲ ಎಂದು ತಟಸ್ಥನಾಗಿದ್ದೆ. ಯಾರ ಪರವಾಗಿಯೂ ಮತಯಾಚನೆ ಸಹ ಮಾಡಿಲ್ಲ. ಜೊತೆಗೆ ಶಾಸಕರೂ ಸಹ ಇಂತಹ ವ್ಯಕ್ತಿಗೆ ಬೆಂಬಲ ನೀಡಿ ಎಂದು ತಿಳಿಸಿಲ್ಲ. ಆದ್ದರಿಂದ ನಾನು ಯಾರ ಪರವೂ ಕೆಲಸ ಮಾಡಿಲ್ಲ. ಆದರೆ ಯರ್ರಲಕ್ಕೇನಹಳ್ಳಿ ಮಂಜುನಾಥ್ ತನಗೆ ಸಂಬಂಧವಿಲ್ಲದ ವಿಷಯಗಳ ಬಗ್ಗೆ ತಲೆ ತೂರಿಸಿ ನನ್ನ ವಿರುದ್ದ ಆರೋಪ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನನ್ನ ರಾಜಕೀಯ ಏನು ಎಂಬುದನ್ನು ಅವರಿಗೆ ತೋರಿಸುತ್ತೇನೆ ಎಂದು ಆಕ್ರೋಷ ಹೊರಹಾಕಿದರು.

Politics – ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ವಿಚಾರ
ಇನ್ನೂ ಇದೇ ಸಮಯದಲ್ಲಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ವಿಚಾರವಾಗಿಯೂ ಮಾತನಾಡಿದ್ದು, ಪಿ.ಎಲ್.ಡಿ ಬ್ಯಾಂಕ್ ನ ನಿರ್ದೇಶಕರಾಗಿ ಆಯ್ಕೆಯಾದವರು ನನ್ನ ಬಳಿ ಚರ್ಚೆ ಮಾಡಿಲ್ಲ. ಕಾಂಗ್ರೇಸ್ ಪಕ್ಷದ ಬೆಂಬಲಿತರೇ ಅಧ್ಯಕ್ಷರಾಗಲಿದ್ದಾರೆ ಎಂದು ಹೇಳುತ್ತಾರೆ. ಆದರೆ ಇದುವರೆಗೂ ಯಾರೂ ನಾನು ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಎಂದು ಬಹಿರಂಗವಾಗಿ ಹೇಳುತ್ತಿಲ್ಲ. ನಾವು ಕಾಂಗ್ರೇಸ್ ಪಕ್ಷದ ಬೆಂಬಲಿತರು ಎಂದು ನನ್ನನ್ನು ಸಂಪರ್ಕ ಮಾಡಿರೇ ನಮ್ಮ ಪಕ್ಷದ ಬೆಂಬಲಿತರನ್ನೇ ಅಧ್ಯಕ್ಷರನ್ನಾಗಿ ಮಾಡುವ ಕೆಲಸ ಮಾಡುತ್ತೇನೆ ಎಂದರು.
ಈ ಸಮಯದಲ್ಲಿ ರಾಜ್ಯಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಾಲೇನಹಳ್ಳಿ ರಮೇಶ್, ಬೀಚಗಾನಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ವೆಂಕಟನರಸಪ್ಪ, ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್, ಪಿ.ಎಲ್.ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಪ್ರಕಾಶ್, ಮುಖಂಡರಾದ ಬಲರಾಮಪ್ಪ, ರಾಮಾಂಜಿ, ಚಿನ್ನಹಳ್ಳಿ ರಮೇಶ್, ಅಶ್ವತ್ಥಪ್ಪ, ನರಸರೆಡ್ಡಿ, ಗೋಪಾಲಪ್ಪ, ಲಕ್ಷ್ಮಣ, ಸತ್ಯನಾರಾಯಣ ಸೇರಿದಂತೆ ಹಲವರು ಇದ್ದರು.