ಆಗಾಗ ಕೆಲವೊಂದು ಕಡೆ ಪವಾಡಗಳು ನಡೆಯುತ್ತಿರುತ್ತಿರುತ್ತವೆ. ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯಲ್ಲಿ ಪವಾಡವೊಂದು ನಡೆದಿದ್ದು, ಅದು ದೇವರ ಲೀಲೆ ಎಂದು ಭಕ್ತರು ಹೇಳುತ್ತಿದ್ದಾರೆ. ತಿರುಪ್ಪೂರ್ ಜಿಲ್ಲೆಯ ಅರುಲ್ಮೀಗು ಸುಬ್ರಮಣ್ಯ ಸ್ವಾಮಿ ದೇವಲಾಯದಲ್ಲಿ ಅದ್ಬುತವದ ಘಟನೆಯೊಂದು ನಡೆದಿದೆ. ದೇವಾಲಯದ ಗರ್ಭಗುಡಿಯಲ್ಲಿ ನವಿಲು ಕಾಣಿಸಿಕೊಂಡಿದ್ದು, ಅದನ್ನು ನೋಡಿದ ಭಕ್ತರು ಹಾಗೂ ಜನರು ಆಶ್ಚರ್ಯಪಡುತ್ತಿದ್ದಾರೆ.
ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಅರುಲ್ಮೀಗು ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ಕಳೆದ ವಾರ ಪವಾಡ ಸದೃಶ್ಯ ಎಂಬಂತೆ ಘಟನೆಯೊಂದು ನಡೆದಿದೆ. ನೂರಾರು ಮಂದಿ ಸಮ್ಮುಖದಲ್ಲಿ ಸುಬ್ರಮಣ್ಯ ಸ್ವಾಮಿಗೆ ಹಾರತಿ ಮಾಡುವ ಸಮಯದಲ್ಲಿ ನವಿಲು ಒಂದು ಗರ್ಭಗುಡಿಯ ಬಳಿ ಬಂದಿದೆ. ಸುಬ್ರಮಣ್ಯ ಸ್ವಾಮಿಗೆ ಹಾರತಿ ಕೊಟ್ಟ ಬಳಿಕ ಪುರೋಹಿತರು ನವಿಲುಗೂ ಸಹ ಹಾರತಿ ನೀಡಿದ್ದಾರೆ. ದೇವಾಲಯದಲ್ಲಿ ಅಷ್ಟೊಂದು ಭಕ್ತರು ಇದ್ದರೂ ಸಹ ನವಿಲು ಅಲ್ಲಿಂದ ಕದಲದೇ ಇರುವುದು ಎಲ್ಲರನ್ನೂ ಆಶ್ಚರ್ಯಪಡುವಂತೆ ಮಾಡಿದೆ. ಇದನ್ನು ನೋಡಿದ ಭಕ್ತರು ಇದೆಲ್ಲಾ ದೇವರ ಲೀಲೆ ಎಂದು ಹೇಳುತ್ತಿದ್ದಾರೆ.
ಹಿಂದೂ ಧರ್ಮದ ಪ್ರಕಾರ ನವಿಲು ಕುಮಾರಸ್ವಾಮಿಯ ವಾಹನ ಎಂದೇ ಹೇಳಲಾಗುತ್ತದೆ. ಜೊತೆಗೆ ನವಿಲು ಕಣ್ಣುಗಳು ಜ್ಞಾನಕ್ಕೆ, ಅವಗಾಹನೆಗೆ ಹಾಗೂ ವಿವೇಕಕ್ಕೆ ಪ್ರತೀಕ ಎಂದೇ ಹೇಳಲಾಗುತ್ತಿರುತ್ತದೆ. ಇದೀಗ ನವಿಲು ಸುಬ್ರಮಣ್ಯಸ್ವಾಮಿ ದೇವಾಲಯಕ್ಕೆ ಬಂದಿದ್ದು, ಈ ಅದ್ಬುತ ದೃಶ್ಯವನ್ನು ಅಲ್ಲಿದ್ದ ಭಕ್ತರು ತಮ್ಮ ಮೊಬೈಲ್ ಗಳಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ಕುರಿತು ದೇವಾಲಯದ ನಿರ್ವಾಹಕರು ಪ್ರತಿಕ್ರಿಯೆ ನೀಡಿದ್ದು, ಈ ದೇವಾಲಯಕ್ಕೆ ಆಗಾಗ ನವಿಲುಗಳು ಬರುತ್ತಿರುತ್ತದೆ. ಆದರೆ ಈ ಬಾರಿ ಗರ್ಭಗುಡಿಯೊಳಗೆ ಹೋಗಿ ಸುಬ್ರಮಣ್ಯನನ್ನು ಪೂಜೆ ಮಾಡಿದ್ದು ಎಲ್ಲರನ್ನೂ ಆಶ್ಚರ್ಯಪಡುವಂತೆ ಮಾಡಿದೆ. ಇದು ದೇವರಿದ್ದಾನೆ ಎಂಬುದಕ್ಕೆ ನಿರ್ದಶನ ಎನ್ನಬಹುದು. ಜೊತೆಗೆ ದೇವರ ಮೇಲೆ ಜನರಿಗೆ ನಂಬಿಕೆ ಹೆಚ್ಚಾಗಲು ಕಾರಣ ಎಂದು ಸಹ ಹೇಳಬಹುದು ಎಂದು, ಇದೊಂದು ಅದ್ಬುತವಾದ ಹಾಗೂ ಮರೆಯಲಾಗದ ಅನುಭೂತಿ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ..