ಮೂರ್ಛೆ ಬಂದವಳಂತೆ ವಿಮಾನ ನಿಲ್ದಾಣದಲ್ಲಿ ಹೊರಳಾಡಿದ ಯುವತಿ, ಶಾಕ್ ಆದ ಜನರು, ಆಕೆ ಮಾಡಿದ್ದು ರೀಲ್ಸ್ ಗಾಗಿ ಅಂತೆ….!

ಸೋಷಿಯಲ್ ಮಿಡಿಯಾದಲ್ಲಿ ಪಾಪ್ಯುಲರ್‍ ಆಗಲು ಅನೇಕರು ನಾನಾ ಸಂಕಷ್ಟಗಳನ್ನು ಪಡುತ್ತಿರುತ್ತಾರೆ. ರೀಲ್ಸ್ ಮಾಡುವ ಹುಚ್ಚು ಕೆಲವರಿಗೆ, ಮತ್ತೆ ಕೆಲವರಿಗೆ ಸಂಪಾದನೆಯ ದೃಷ್ಟಿ ಈ ಕಾರಣಗಳಿಂದ ತಾವು ಸೋಷಿಯಲ್ ಮಿಡಿಯಾದಲ್ಲಿ ಸಕ್ರೀಯರಾಗಿ ವಿವಿಧ ರೀತಿಯ ವಿಚಿತ್ರ ಪೋಸ್ಟ್ ಗಳನ್ನು ಸಹ ಹರಿಬಿಡುತ್ತಿರುತ್ತಾರೆ. ಇದೀಗ ಯುವತಿಯೊಬ್ಬಳು ವಿಮಾನ ನಿಲ್ದಾಣದಲ್ಲಿ ಏಕಾಏಕಿ ಬಂದು ಮೂರ್ಛೆ ಬಂದವಳಂತೆ ಹೊರಳಾಡಿದ್ದಾಳೆ. ಇದನ್ನು ಕಂಡು ಕ್ಷಣ ಅಲ್ಲಿದ್ದ ಜನರು ಶಾಕ್ ಆಗಿದ್ದಾರೆ. ಕೊನೆಗೆ ಅದು ರೀಲ್ಸ್ ಮಾಡಲು ಆ ಯುವತಿ ಡ್ಯಾನ್ಸ್ ಮಾಡಿದ್ದು ಎಂದು ಗೊತ್ತಾದ ಬಳಿಕ ಆಕಯ ನಡೆಯ ಬಗ್ಗೆ ಆಕ್ರೋಷ ಹೊರಹಾಕಿದ್ದಾರೆ.

girl reels on mumbai airport

ಇತ್ತೀಚಿಗೆ ಸಾರ್ವಜನಿಕ ಪ್ರದೇಶಗಳಲ್ಲಿ ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಬಸ್ ನಿಲ್ದಾಣಗಳು, ಮೆಟ್ರೋ ರೈಲ್ ಗಳು, ರೈಲ್ವೆ ಫ್ಲಾಟ್ ಫಾರ್ಮ್‌ಗಳು ಸೇರಿದಂತೆ ರೀಲ್ಸ್ ಮಾಡಲು ನೃತ್ಯ ಮಾಡುವಂತಹ ಅಭ್ಯಾಸಗಳು ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ಮುಂಬೈ ಲೋಕಲ್ ಟ್ರೈನ್ ನಲ್ಲಿ ಯುವತಿಯೊಬ್ಬಳು ಅಶ್ಲೀಲ ನೃತ್ಯ ಮಾಡಿ ಎಲ್ಲರ ಆಕ್ರೋಷಕ್ಕೆ ಗುರಿಯಾಗಿದ್ದರು. ಇದೀಗ ಮುಂಬೈ ವಿಮಾನ ನಿಲ್ದಾಣದಲ್ಲಿ ಯುವತಿಯೊಬ್ಬಳು ವಿಚಿತ್ರ ಡ್ಯಾನ್ಸ್ ಮಾಡುವ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

girl reels on mumbai airport 0

ಜನಜಂಗುಳಿ ಇರುವಂತಹ ಸ್ಥಳದಲ್ಲಿ ಯುವತಿ ಸಲ್ವಾರ್‍ ಕುರ್ತಾ ಧರಿಸಿ ವಿಚಿತ್ರವಾಗಿ ಡ್ಯಾನ್ಸ್ ಮಾಡಿದ್ದಾಳೆ. ದುಪ್ಪಟ್ಟಾ ಎಸೆದು, ನೆಲದಲ್ಲಿ ಮಲಗಿ ಏಳುತ್ತಾ ಡ್ಯಾನಸ್ ಮಾಡಿ ಸುತ್ತಮುತ್ತಲಿನ ಜನರಿಗೆ ಕಿರಿಕಿರಿಯಾಗುವಂತೆ ಮಾಡಿದ್ದಾಳೆ. ಅಲ್ಲಿದ್ದ ಅನೇಕರು ಆಕೆಯನ್ನು ಕುತೂಹಲದಿಂದ ಆಕೆಗೆ ಏನಾಗಿದೆ ಎಂಬಂತೆ ನೋಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಅನೇಕರು ಆಕೆಯ ಈ ವರ್ತನೆಗೆ ಕಿಡಿ ಕಾರಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಯುವತಿ ಈ ರೀತಿ ಮಾಡಿದ್ದು ಸರಿಯಲ್ಲ. ಕೂಡಲೇ ಅವಳ ವಿರುದ್ದ ವಿಮಾನ ನಿಲ್ದಾಣದ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಅನೇಕರು ಒತ್ತಾಯಿಸಿದ್ದಾರೆ.

https://x.com/desimojito/status/1795773861340070011

ಅಷ್ಟೇ ಅಲ್ಲದೇ ಅನೇಕರು ಈ ರೀಲ್ಸ್ ಹುಚ್ಚಿನಿಂದಾಗಿ ಪ್ರಯಾಣಿಕರು ಸಮಾಧಾನದಿಂದ ಓಡಾಟ ನಡೆಸುವುದು ಕಷ್ಟಕರವಾಗಿದೆ. ವೈರಸ್ ವಿಮಾನ ನಿಲ್ದಾಣಗಳನ್ನು ತಲುಪಿದೆ ಎಂತಲೂ, ಕಾಮನ್ ಸೆನ್ಸ್ ಅನ್ನೋದು ಇತ್ತೀಚಿಗೆ ಮಾಯವಾಗುತ್ತಿದೆ ಎಂದು, ಸಾರ್ವಜನಿಕರಿಗೆ ತೊಂದರೆ ಮಾಡುವಂತಹವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂತಲೂ, ವಿಮಾನ ನಿಲ್ದಾಣಗಳು ಇತ್ತೀಚಿಗೆ ಟೈಂ ಪಾಸ್ ಹಾಗೂ ಮನರಂಜನೆಗಾಗಿ ಬದಲಾಗುತ್ತಿರುವುದು ವಿಪರ್ಯಾಸವೇ ಸರಿ ಎಂತಲೂ ಕಾಮೆಂಟ್ ಗಳ ಮೂಲಕ ತಮ್ಮ ಆಕ್ರೋಷ ಹೊರಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *

Next Post

ರಾಜ್ಯ ಕಾಂಗ್ರೇಸ್ ಸರ್ಕಾರದ ಮೊದಲ ವಿಕೆಟ್ ಪತನ? ನಾಗೇಂದ್ರ ರಾಜಿನಾಮೆಗೆ ಸಿದ್ದರಾಮಯ್ಯ ಸೂಚನೆ…!

Fri May 31 , 2024
ರಾಜ್ಯದಲ್ಲಿ ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣ ವಿರೋಧ ಪಕ್ಷಗಳಿಗೆ ಬಲವಾದ ಅಸ್ತ್ರವಾಗಿದೆ. ಈ ಪ್ರಕರಣದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ರವರ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಅವರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದು ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರದ ಮೊದಲ ವಿಕೆಟ್ ಪತನ ಎಂದು ಹೇಳಲಾಗುತ್ತಿದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಸುಮಾರು […]
CM siddu instruct to b nagendra to resign
error: Content is protected !!