Close Menu
ISM Kannada News
    IPL 2025 Live Score
    What's Hot

    Chikkaballapur : ಗಾಳಿ-ಮಳೆಗೆ ಚೆಂಡು ಹೂ ಬೆಳೆ ನಾಶ – ಸಂಕಷ್ಟದಲ್ಲಿ ರೈತ, ಪರಿಹಾರಕ್ಕೆ ಮೊರೆ…!

    May 19, 2025

    Soldier : ಬಾಗೇಪಲ್ಲಿಯಲ್ಲಿ ಹುತಾತ್ಮ ಯೋಧ ಮುರಳಿ ನಾಯಕ್ ಸ್ಮರಣೆ: ದೇಶಕ್ಕಾಗಿ ಬಲಿದಾನಗೈದ ವೀರನಿಗೆ ನಮನ…!

    May 19, 2025

    Teacher : ಶಿಕ್ಷಕಿಯ ಸಾಧನೆ: ರಾಷ್ಟ್ರ ಮಟ್ಟದ 100 ಮೀಟರ್ ಓಟದ ಸ್ಪರ್ಧೆಗೆ ಆಯ್ಕೆ…..!

    May 19, 2025
    Facebook X (Twitter) Instagram
    Facebook X (Twitter) Instagram WhatsApp
    ISM Kannada NewsISM Kannada News
    Subscribe
    • Home
    • All News
      • State
      • National
      • International
    • Special
    • Entertainment
    • Technology
    • Web Stories
    • Foodies
    ISM Kannada News
    Home»Special»New Year : 2025ರ ಸ್ಪೋಟಕ ಭವಿಷ್ಯ, ಬಾಬಾ ವಂಗಾ, ನಾಸ್ಟ್ರಡಾಮಸ್ ನುಡಿದ ಭವಿಷ್ಯವೇನು ಗೊತ್ತಾ?
    Special

    New Year : 2025ರ ಸ್ಪೋಟಕ ಭವಿಷ್ಯ, ಬಾಬಾ ವಂಗಾ, ನಾಸ್ಟ್ರಡಾಮಸ್ ನುಡಿದ ಭವಿಷ್ಯವೇನು ಗೊತ್ತಾ?

    By by AdminJanuary 1, 2025No Comments2 Mins Read
    Facebook Twitter Pinterest WhatsApp
    Baba Vanga and Nostradamous predictions

    New Year – ಬಾಬಾ ವಂಗಾ ಹಾಗೂ ನಾಸ್ಟ್ರಡಾಮಸ್ ರವರು 2025 ರಲ್ಲಿ ನಡೆಯಬಹುದಾದಂತಹ ಪ್ರಮುಖ ಘಟನೆಗಳ ಭವಿಷ್ಯ ನುಡಿದಿದ್ದು, ಅವರ ಭವಿಷ್ಯ ಜಗತ್ತನ್ನು ಬೆಚ್ಚಿಬೀಳುಸುವಂತಿದೆ. ಇಲ್ಲಿ ಮತ್ತೊಂದು ವಿಶೇಷ ಇದೆ, ಅದು ಏನೆಂದರೇ ಈ ಇಬ್ಬರೂ ಭವಿಷ್ಯಕಾರರು ನುಡಿದ ಭವಿಷ್ಯ ಒಂದೇ ಮಾದರಿಯಲ್ಲಿದೆ. ಈ ಇಬ್ಬರೂ ಭವಿಷ್ಯಕಾರರು ನೀಡಿರುವ ಭವಿಷ್ಯವಾಣಿಯ ಪ್ರಕಾರ ಹೊಸ ವರ್ಷ ಅಂದರೇ 2025ನೇ ವರ್ಷದಲ್ಲಿ ದೊಡ್ಡ ಮಟ್ಟದ ಆಪತ್ತುಗಳು ಬರಲಿದೆಯಾ ಎಂಬ ಆತಂಕ ಸೃಷ್ಟಿಸಿದೆ ಎನ್ನಲಾಗಿದೆ.

    Baba Vanga and Nostradamous predictions 1

    ಫ್ರೆಂಚ್ ಭವಿಷ್ಯಕಾರ ನಾಸ್ಟ್ರಡಾಮಸ್ 16ನೇ ಶತಮಾನದ ಭವಿಷ್ಯಕಾರ. ನಾಸ್ಟ್ರಡಾಮಸ್ ರವರು 2025ನೇ ವರ್ಷದಲ್ಲಿ ನಡೆಯುಬಹುದಾದ ಪ್ರಮುಖ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಈ ಪೈಕಿ ಹವಾಮಾನ ಬದಲಾವಣೆಯಿಂದಾಗುವ ಪ್ರಾಕೃತಿಕ ವಿಕೋಪ, ಯುದ್ದ ಸಂಘರ್ಷ, ಆರ್ಥಿಕ ಸಂಕಷ್ಟ, ಹಣದುಬ್ಬರ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳಲಿವೆಯಂತೆ. ಜಗತ್ತಿನ ಹಲವು ಭಾಗಗಳಲ್ಲಿ ಗೋಧಿ ಬೆಲೆ ಹೆಚ್ಚಾಗಲಿದೆಯಂತೆ. ಕಿತ್ತಾಟ, ಬಡಿದಾಟಗಳು ನಡೆಯಲಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಲಿದೆಯಂತೆ.  ದುಬಾರಿ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಗಳೂ ಸಹ ಎಲ್ಲರ ಮೇಲೆ ಪರಿಣಾಮ ಬೀರಲಿದೆ ಎಂದು ಭವಿಷ್ಯಕಾರ ನಾಸ್ಟ್ರಡಾಮಸ್ ಭವಿಷ್ಯ ನುಡಿದಿದ್ದಾರೆ.

    ಇನ್ನೂ 2025ರಲ್ಲಿ ಹವಾಮಾನ ಬದಲಾವಣೆಯ ಕಾರಣದಿಂದ ಮತ್ತಷ್ಟು ಸಮಸ್ಯೆಗಳು ಉದ್ಬವಿಸಬಹುದಂತೆ. ಪ್ರವಾಹ, ದೈತ್ಯ ಅಲೆಗಳಿಂದ ಕಡಲ ತೀರದಲ್ಲಿನ ನಾಶ, ಅತಿಯಾದ ಮಳೆ, ಅತಿಯಾದ ಬಿಸಿಲುಗಳಂತಹ ಹವಾಮಾನ ವೈಪರೀತ್ಯಗಳು ಸಂಭವಿಸಿ ಮನುಷ್ಯ ಹಾಗೂ ಪ್ರಾಣಿ ಸಂಕುಲದ ಮೇಲೆ ಗಂಭೀರ ಪರಿಣಾಮ ಬೀರಲಿದೆಯಂತೆ. ಅಮೇರಿಕಾ ಹಾಗೂ ಚೀನಾ ನಡುವೆ ದೊಡ್ಡಣ್ಣನ ಸ್ಥಾನಕ್ಕಾಗಿ ಹೊಡೆದಾಟ ನಡೆಯಲಿದೆ. ಹಲವು ದೇಶಗಳ ನಡುವೆ ರಾಜತಾಂತ್ರಿಕ ಸಮಸ್ಯೆಗಳು, ಸಂಘರ್ಷದ ವಾತಾವರಣ ನಿರ್ಮಾಣವಾಗಲಿದೆ ಎಂದು ನಾಸ್ಟ್ರಡಾಮಸ್ 2025 ಭವಿಷ್ಯ ನುಡಿದಿದ್ದಾರೆ.

    Baba Vanga and Nostradamous predictions 0

    ಇನ್ನೂ ಬಲ್ಗೇರಿಯಾದ ಬಾಬಾ ವಂಗಾ 1996 ರಲ್ಲೇ ನಿಧನರಾಗಿದ್ದಾರೆ. ಆದರೆ ಬಾಬಾ ವಂಗಾ ರವರು ನುಡಿದಿರುವಂತಹ ಭವಿಷ್ಯ ಹಾಗೂ ನಿಖರತೆ ಇಡೀ ವಿಶ್ವವನ್ನೇ ಅಚ್ಚರಿಪಡಿಸಿದೆ ಎನ್ನಲಾಗಿದೆ. ಯುರೋಪ್ ನಲ್ಲಿ ಆಂತರಿಕೆ ಯುದ್ದ ಸಂಘರ್ಷಗಳು ಹೆಚ್ಚಾಗಲಿದ್ದು, ಇದು ಜನಸಂಖ್ಯೆ ಮೇಲೂ ಪರಿಣಾಮ ಬೀರಲಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ಆವಿಷ್ಕಾರಗಳು ಈ ಜಗತ್ತಿನ ದಿಕ್ಕನ್ನು ಬದಲಿಸಿದೆ. ಮಾನವೀಯತೆಗಳು ಅಂತ್ಯಗೊಳ್ಳಲಿದೆ. ಪ್ರಾಕೃತಿಕ ವಿಕೋಪಗಳಾದ ಭೂಕಂಪ, ಜ್ವಾಲಾಮುಖಿಗಳಿಂದ ನಾಶ ಸಂಭವಿಸಲಿದೆ. ಜಗತ್ತಿನ ಅಂತ್ಯದ ಆರಂಭವಾಗಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.

    2025 predictions Baba Vanga 2025 Baba Vanga future predictions Baba Vanga predictions explosive future predictions Nostradamus 2025 Nostradamus predictions 2025 Nostradamus prophecies 2025
    Share. Facebook Twitter Pinterest WhatsApp
    by Admin
    • Website
    • Facebook

    Welcome to ISM Kannada News, if you want to contact us, then feel free to say anything about www.ismkannadanews.com

    Related Posts

    ECIL Recruitment 2025: ಪದವೀಧರ ಇಂಜಿನಿಯರ್ ಮತ್ತು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ…!

    May 19, 2025

    Okra Water : ಬೆಂಡೆಕಾಯಿ ನೀರು ಮತ್ತು ಅರಿಶಿನ: ನಿಮ್ಮ ಆರೋಗ್ಯಕ್ಕೆ ಅದ್ಭುತ ಪಾನೀಯ…!

    May 19, 2025

    EPF – ಖಾಸಗಿ ಉದ್ಯೋಗಿಗಳ ಗಮನಕ್ಕೆ! ಕೆಲಸ ಬಿಟ್ಟ ತಕ್ಷಣ ನಿಮ್ಮ ಪಿಎಫ್ ಹಣ ಪಡೆಯುವುದು ಹೇಗೆ? ಇಲ್ಲಿದೆ ಸುಲಭ ವಿಧಾನ..!

    May 19, 2025
    Leave A Reply Cancel Reply

    IPL 2025 Live Score
    Don't Miss

    Chikkaballapur : ಗಾಳಿ-ಮಳೆಗೆ ಚೆಂಡು ಹೂ ಬೆಳೆ ನಾಶ – ಸಂಕಷ್ಟದಲ್ಲಿ ರೈತ, ಪರಿಹಾರಕ್ಕೆ ಮೊರೆ…!

    State May 19, 2025

    Chikkaballapur – ಕಳೆದ ಮೂರು ದಿನಗಳಿಂದ ಸುರಿದ ಭಾರಿ ಗಾಳಿ ಮತ್ತು ಮಳೆಯಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಉಲ್ಲೋಡು…

    Soldier : ಬಾಗೇಪಲ್ಲಿಯಲ್ಲಿ ಹುತಾತ್ಮ ಯೋಧ ಮುರಳಿ ನಾಯಕ್ ಸ್ಮರಣೆ: ದೇಶಕ್ಕಾಗಿ ಬಲಿದಾನಗೈದ ವೀರನಿಗೆ ನಮನ…!

    May 19, 2025

    Teacher : ಶಿಕ್ಷಕಿಯ ಸಾಧನೆ: ರಾಷ್ಟ್ರ ಮಟ್ಟದ 100 ಮೀಟರ್ ಓಟದ ಸ್ಪರ್ಧೆಗೆ ಆಯ್ಕೆ…..!

    May 19, 2025

    ECIL Recruitment 2025: ಪದವೀಧರ ಇಂಜಿನಿಯರ್ ಮತ್ತು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ…!

    May 19, 2025

    Okra Water : ಬೆಂಡೆಕಾಯಿ ನೀರು ಮತ್ತು ಅರಿಶಿನ: ನಿಮ್ಮ ಆರೋಗ್ಯಕ್ಕೆ ಅದ್ಭುತ ಪಾನೀಯ…!

    May 19, 2025

    Shocking : ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧುವಿನಿಂದ ವಿಚಿತ್ರ ಬೇಡಿಕೆ, ನಾವು ಅಣ್ಣ-ತಂಗಿಯಂತೆ ಇರೋಣ ಎಂದ ವಧು…!

    May 19, 2025
    ISM Kannada News
    Facebook X (Twitter) Instagram Pinterest
    • Home
    • About Us
    • Contact Us
    • Privacy Policy
    © 2025 ISM Kannada News. Designed by ISM News.

    Type above and press Enter to search. Press Esc to cancel.