Moharam Celebration: ಗುಡಿಬಂಡೆಯಲ್ಲಿ ವಿಶೇಷ ಮೊಹರಂ ಆಚರಣೆ: ಅಲ್ಲಿಪುರ, ಪೋತೇನಹಳ್ಳಿ ಹಜರತ್ ತಂಡದಿಂದ ದೇಹದಂಡನೆ, ಮೆರವಣಿಗೆ

ಗುಡಿಬಂಡೆ: ಮೊಹರಂ (Moharam Celebration) ಅಂಗವಾಗಿ ಪಟ್ಟಣದಲ್ಲಿ ಭಾನುವಾರ ಜಾಮಿಯಾ ಮಸೀದಿ ಬಳಿ ಬಾಬಯ್ಯ ಗುಡಿಯಿಂದ ಹಿಂದೂ ಮುಸ್ಲಿಮರು ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿ ದೇಹದಂಡನೆ ಮಾಡಿದರು. ಶೋಕಾಚರಣೆ ಸಂಕೇತವಾಗಿ ನಡೆದ ಮೆರವಣಿಗೆಯಲ್ಲಿ ಕಪ್ಪುಬಟ್ಟೆ ಧರಿಸಿದ್ದ ಸಾವಿರಾರು ಮಂದಿ ಭಾಗವಹಿಸಿದ್ದರು.

Moharam Celebration in Gudibande 0

(Moharam Celebration) ಮೆರವಣಿಗೆ ವೇಳೆ ಮಕ್ಕಳು, ಯುವಕರು ಮತ್ತು ವೃದ್ಧರು ದೇಹದಂಡನೆ ಮಾಡಿಕೊಂಡರು. ಹಸೇನ್ ಹುಸೇನ್ ಎಂದು ಕೂಗುತ್ತಾ ಬ್ಲೇಡ್‌ಗಳಿಂದ ತಮ್ಮ ಎದೆಗೆ ಹಾಗೂ ಬೆನ್ನಿಗೆ ಬಡಿದುಕೊಂಡರು. ಆಗ ಅವರ ದೇಹದಿಂದ ರಕ್ತ ಚಿಮ್ಮುತ್ತಿತ್ತು. ಬಹುತೇಕರು ಎದೆಗೆ ಕೈಗಳಿಂದ ಬಡಿದುಕೊಂಡು ಶೋಕ ಗೀತೆಗಳನ್ನು ಹಾಡಿದರು. ಮೆರವಣಿಗೆಗೆ ಮೊದಲು ವೇದಿಕೆ ಕಾರ್ಯಕ್ರಮದಲ್ಲಿ ಹಸೇನ್ ಹುಸೇನ್ ಬಗ್ಗೆ ಮತ್ತು ಮೊಹರಂ ಆಚರಣೆಗಳ ಬಗ್ಗೆ ವಿವಿಧ ಕಡೆಗಳಿಂದ ಆಗಮಿಸಿದ್ದ ಮೌಲಿಗಳು ತಿಳಿಸಿದರು. ಜಾಮಿಯಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.

Moharam Celebration in Gudibande

ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಭಾವೈಕ್ಯದ ಪ್ರತೀಕವಾಗಿರುವ ಮೊಹರಂ (Moharam Celebration) ಅನ್ನು ಹಿಂದು ಮುಸ್ಲಿಮರು ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಿದರು. ಕೆಲವರು ಅಲ್ಲಾ ದೇವರು ಮತ್ತು ಬೀಬಿ ಫಾತಿಮಾರ ಹೆಸರಿನಲ್ಲಿ ಹಾಡಿದ ಹಾಡುಗಳಿಗೆ ಜನರು ಭಾವುಕರಾಗಿ ಭಕ್ತಿಯ ಮೊರೆ ಹೋದರು. ದೀರ್ಘ ದಂಡ ನಮಸ್ಕಾರ ಹಾಕಿ ಧನ್ಯರಾದರು. ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೇಟಿ ನೀಡಿದ ಬಾಬಯ್ಯನ ಆರ್ಶಿವಾದ ಪಡೆದರು.

(Moharam Celebration) ಪ್ರವಾದಿ ಮಹಮ್ಮದ್‌ ಪೈಗಂಬರ್‌ ಅವರ ಮೊಮ್ಮಕ್ಕಳಾದ ಹಸನ್‌– ಹುಸೇನ್‌ ಧರ್ಮದ ಉಳಿವಿಗಾಗಿ ಹಾಗೂ ನ್ಯಾಯಕ್ಕಾಗಿ ಹೋರಾಡಿ ಯುದ್ಧದಲ್ಲಿ ಮರಣ ಹೊಂದಿದರು. ಅವರ ಸಾವಿನ ಸ್ಮರಣಾರ್ಥ ಈ ಶೋಕಾಚರಣೆ ಆಚರಿಸುತ್ತಿದ್ದೇವೆ ಈ ಆಚರಣೆಗೆ ಗುಡಿಬಂಡೆ ಜನರು ಸಹಕಾರ ನೀಡಿದ್ದಾರೆ. ಗುಡಿಬಂಡೆಯಲ್ಲಿ ಶಾಂತಿ ಸೌಹಾರ್ದತೆ ಇದೆ ಹಿಂದೂ ಮುಸ್ಲಿಂ ಎಂಬ ಭೇದಬಾವವಿಲ್ಲದೆ ಎಲ್ಲರೂ ಒಂದಾಗಿ ಜೀವನ ನಡೆಸುತ್ತಿರುವುದು ಸಂತೋಷದ (Moharam Celebration) ವಿಷಯ ಆಯೋಜಕರು ತಿಳಿಸಿದರು.

Moharam Celebration in Gudibande 3

ಈ ವೇಳೆ (Moharam Celebration) ಗೌರಿಬಿದನೂರು ತಾಲ್ಲೂಕಿನ ಅಲ್ಲಿಪುರದ ಅಂಜುಮನೆ ಜಾಫರೀಯಾ, ಅಲಿ ಅಬ್ಬಾಸ್, ಗುಲಾಮ್ ರಜಾ,  ಉರ್ದು ಅಕಾಡಮಿ ರಾಜ್ಯ ಸಮಿತಿ ಸದಸ್ಯ ಡಾ. ನಾಥಿಕ್ ಅಲ್ಲಿಪುರಿ, ಮೌಲಾನಾ ಜಾಹೇದ್ ಅಹ್ಮದ್, ಜುಮ್ಮ ಜಮಾತ್ ಅಲ್ಲಿಪುರ್, ಮೌಲನಾ ಲುಕ್ಮಾನ್ ಹೌದರ್ ಪೋತೇನಹಳ್ಳಿ, ಅಂಜುಮನೆ ಹೈದರಿ ಪೋತೇನಹಳ್ಳಿ, ಮೊಹ್ಮದ್ ಅಕಿಲ್, ಅಲಿಜಾನ್, ಗುಡಿಬಂಡೆ  ರಿಯಾಜ್ ಪಾಷ, ಸೇರಿದಂತೆ ಮೊಹರಮ್ ಆಚರಣಾ ಸಮಿತಿ ಹಾಗೂ ಫಾತಿಮಾ ಆಚರಣಾ ಸಮಿತಿ ಸದಸ್ಯರು ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *

Next Post

G Parameshwar: ನಾವು ಬದಲಾಗದಿದ್ದರೇ ಜಾತಿ ಪದ್ದತಿ ಹೋಗಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸಚಿವ ಪರಮೇಶ್ವರ್…!

Mon Jul 29 , 2024
ಇಂದಿನ ಕಾಲ ಎಷ್ಟೇ ಮುಂದುವರೆದರೂ, ನಾಗರೀಕತೆ ಬೆಳೆದರೂ ಇನ್ನೂ ಅನೇಕ ಕಡೆ ಈ ಜಾತಿ ಪದ್ದತಿ ಎಂಬುದು ಜೀವಂತವಾಗಿಯೇ ಇದೆ. ಇದಕ್ಕೆ ಅನೇಕ ಉದಾಹರಣೆಗಳೂ ಸಹ ಇದೆ. ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಜಾತಿ ಪದ್ದತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಜಾತಿ ಪದ್ದತಿ ಹೋಗಲ್ಲ ಎಂಬುದು ನನ್ನ ಅಭಿಪ್ರಾಯವಾಗಿದೆ. ನಾವು ಬದಲಾಗದೇ ಇದ್ದರೇ ಮುಂದಿನ ದಿನಗಳಲ್ಲೂ ಗ್ರಾಮಗಳ ಹೊರಗೆ ಇರಬೇಕಾಗುತ್ತದೆ ಎಂದು (G Parameshwar)ಬೇಸರ ವ್ಯಕ್ತಪಡಿಸಿದ್ದಾರೆ. ದಾವಣಗೆರೆ […]
G Parameshwara comments on caste system
error: Content is protected !!