Pune – ಇಂದಿನ ಡಿಜಿಟಲ್ ಯುಗದಲ್ಲಿ ಸೋಷಿಯಲ್ ಮಿಡಿಯಾ ತುಂಬಾನೆ ಪ್ರಭಾವ ಬೀರುತ್ತದೆ. ಅದರಲ್ಲೂ ಕೆಲ ಪುಟ್ಟ ಮಕ್ಕಳೂ ಸಹ ಮೊಬೈಲ್ ನಲ್ಲಿ ವಿಡಿಯೋ ನೋಡದೇ ಇದ್ದರೇ ಊಟ ಸಹ ಮಾಡೊಲ್ಲ ಎಂದೇ ಹೇಳಬಹುದು. ಇದರಿಂದ ತಮ್ಮ ಮಕ್ಕಳ ಮೇಲೆ ತುಂಬಾನೆ ಪ್ರಭಾವ ಬೀರುತ್ತದೆ ಎಂದು ಹೇಳಬಹುದು. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಸೋಷಿಯಲ್ ಮಿಡಿಯಾ ಪ್ರಭಾವಕ್ಕೆ ಒಳಗಾದ 9 ವರ್ಷದ ಬಾಲಕ 3 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಪುಣೆಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಪುಣೆಯ ಕೊಂಡ್ವಾ ಪ್ರದೇಶದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಒಂದೇ ಏರಿಯಾದಲ್ಲಿ ವಾಸ ಮಾಡುತ್ತಿರುವ ಹುಡುಗ ಹಾಗೂ ಮಗುವಿನ ಕುಟುಂಬಗಳ ನಡುವೆ ಒಳ್ಳೆಯ ಸಂಬಂಧವಿತ್ತು. ಎರಡೂ ಮನೆಯವರೂ ಪರಸ್ಪರ ಮನೆಗೆ ಹೋಗಿ ಬಂದು ಮಾಡುತ್ತಿದ್ದರಂತೆ. ಬಾಲಕ ಹಾಗೂ ಬಾಲಕಿ ಇಬ್ಬರೂ ಮನೆಯ ಹೊರಗೆ ಆಟವಾಡುತ್ತಿದ್ದರು. ಮಗು ಆರೋಪಿ ಬಾಲಕನನ್ನು ದಾದಾ ಎಂದು ಕರೆಯುತ್ತಿದ್ದಳಂತೆ. ಆ ಹೆಣ್ಣು ಮಗು ಮನೆಯಲ್ಲಿ ಒಬ್ಬಳೆ ಇದ್ದಾಗ ಬಾಲಕ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎನ್ನಲಾಗಿದೆ.
ಇನ್ನೂ ಬಾಲಕಿ ಈ ವಿಚಾರವನ್ನು ತನ್ನ ತಾಯಿಗೆ ತಿಳಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಪೊಲೀಸರಿಗೆ ಬಾಲಕಿಯ ತಾಯಿ ಮಾಃಇತಿ ನೀಡಿದ್ದಾರೆ. ಬಾಲಕನ ವಿರುದ್ದ ಲೈಂಗಿಕ ಕಿರುಕುಳ ಹಾಗೂ ಹಲ್ಲೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿದೆ. ಈ ಆರೋಪದ ಮೇರೆಗೆ ಆರೋಪಿ ಬಾಲಕನನ್ನು ಪುಣೆಯ ಕೊಂಡ್ವಾ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಾಲಕನನ್ನು ಜುವೆನೈಲ್ ಜಸ್ಟೀಸ್ ಬೋರ್ಡ್ ಮುಂದೆ ಹಾಜರುಪಡಿಸಿ ವಿಚಾರಣೆ ನಡೆಸಿದೆ. ಬಳಿಕ ಆರೋಪಿ ಬಾಲಕನಿಗೆ ಕೋರ್ಟ್ ಜಾಮೀನು ನೀಡಿ, ಆತನ ಹೆತ್ತವರ ಜೊತೆ ಕಳುಹಿಸಿದೆ ಎನ್ನಲಾಗಿದೆ. ಪೊಲೀಸರು ವಿಚಾರಣೆ ನಡೆಸಿದಾಗ ಬಾಲಕ ತಾನು ಸೋಷಿಯಲ್ ಮಿಡಿಯಾ ಪ್ರಭಾವದಿಂದ ಈ ಕೃತ್ಯವೆಸಗಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.