Saturday, August 30, 2025
HomeStateMarriage Video: ಮದುವೆ ಮಂಟಪದಲ್ಲಿ ಕಂಠಪೂರ್ತಿ ಕುಡಿದು ರಂಪಾಟ ಮಾಡಿದ ವರ, ಮದುವೆಯನ್ನು ಕ್ಯಾನ್ಸಲ್ ಮಾಡಿದ...

Marriage Video: ಮದುವೆ ಮಂಟಪದಲ್ಲಿ ಕಂಠಪೂರ್ತಿ ಕುಡಿದು ರಂಪಾಟ ಮಾಡಿದ ವರ, ಮದುವೆಯನ್ನು ಕ್ಯಾನ್ಸಲ್ ಮಾಡಿದ ವಧು ತಾಯಿ….!

Marriage Video – ಇತ್ತೀಚಿಗೆ ಮದುವೆಗಳಿಗೆ ಸಂಬಂಧಿಸಿದಂತಹ ಸುದ್ದಿಗಳು ಭಾರಿ ಸದ್ದು ಮಾಡುತ್ತಿದೆ. ಮದುವೆಯ ಹೆಸರಿನಲ್ಲಿ ಕೆಲವರು ಲಕ್ಷಾಂತರ ದೋಚಿ ಪರಾರಿಯಾಗುತ್ತಿದ್ದರೇ, ಕೆಲವೊಂದು ಘಟನೆಗಳಲ್ಲಿ ಮದುವೆ ಮಂಟಪದಲ್ಲೇ ಮದುವೆಗಳು ಮುರಿದು ಹೋಗಿರುವ ಸುದ್ದಿಗಳನ್ನು ಕೇಳಿರುತ್ತೇವೆ. ಇಲ್ಲೊಂದು ಅಂತಹ ಘಟನೆ ನಡೆದಿದೆ. ಮದುವೆಯ ಮಂಟಪದಲ್ಲೇ ವರ ಕುಡಿದು ರಂಪಾಟ ಮಾಡಿದ್ದಾನೆ. ಈ ಕಾರಣದಿಂದ ವಧುವಿನ ತಾಯಿ ಮದುವೆಯನ್ನು ಕ್ಯಾನ್ಸಲ್ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

bride mother cancels wedding in bangalore 2

ಅಂದಹಾಗೆ ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾಗಿದೆ. ಮದುವೆಯಲ್ಲಿ ವರ ಕುಡಿದು ಬಂದು ಸ್ನೇಹಿತರ ಜೊತೆಗೆ ಸೇರಿಕೊಂಡು ಮದುವೆಯ ಮಂಟಪದಲ್ಲಿ ದುರ್ವರ್ತನೆ ತೋರಿದ್ದಾನೆ. ಕಂಠಪೂರ್ತಿ ಕುಡಿದು ಆರತಿ ತಟ್ಟೆಯನ್ನು ಎಸೆದು ಮದುವೆಯಲ್ಲಿ ರಂಪಾಟ ಮಾಡಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ತಾಯಿಯ ಈ ದಿಟ್ಟ ನಿರ್ಧಾರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದು ಕಠಿಣ ನಿರ್ಧಾರವಾದರೂ ತನ್ನ ಮಗಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ರೀತಿಯ ನಿರ್ಧಾರವನ್ನು ವಧುವಿನ ತಾಯಿ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಇನ್ನೂ @gharkekalesh ಎಂಬ ಹೆಸರಿನ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋ ಸಖತ್ ವೈರಲ್ ಆಗಿದೆ. ವಧುವಿನ ತಾಯಿ ಮದುವೆಯ ದಿನವೇ ಆತ ಈ ರೀತಿ ವರ್ತಿಸಿದ್ದಾನೆ. ಮದುವೆಗೂ ಮುನ್ನವೇ ವರ ಈ ರೀತಿಯಾಗಿ ಆಡಿದರೇ ಭವಿಷ್ಯದಲ್ಲಿ ನನ್ನ ಮಗಳ ಪರಿಸ್ಥಿತಿ ಹೇಗಿರಬಹುದು ಎಂದು ಊಹೆ ಮಾಡಿಕೊಂಡ ತಾಯಿ ಮದುವೆಯನ್ನೇ ರದ್ದು ಮಾಡಿದ್ದಾಳೆ. ವಿಡಿಯೋದಲ್ಲಿ ಆ ತಾಯಿ ಈ ವಿಚಾರವನ್ನು ಹೇಳುತ್ತಾ ಕೈ ಮುಗಿದು ಕೇಳಿಕೊಂಡಿದ್ದಾಳೆ. ಇದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here

ಇನ್ನೂ ಈ ವಿಡಿಯೋವನ್ನು ಕಳೆದ ಜ.11 ರಂದು ಹಂಚಿಕೊಂಡಿದ್ದು, ಲಕ್ಷಾಂತರ ವ್ಯೂವ್ಸ್ ಕಂಡಿದೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳನ್ನು ನೆಟ್ಟಿಗರು ಹರಿಬಿಡುತ್ತಿದ್ದಾರೆ. ಈ ತಾಯಿ ನರಕದಿಂದ ತನ್ನ ಮಗಳ ಜೀವನವನ್ನೇ ಕಾಪಾಡಿದ್ದಾಳೆ ಎಂದು ಕಾಮೆಂಟ್ ಮಾಡಿದ್ದರೇ, ಮತ್ತೋರ್ವ ನೆಟ್ಟಿಗ ಮಗಳ ಭವಿಷ್ಯದ ದೃಷ್ಟಿಯಿಂದ ಈ ತಾಯಿ ತೆಗೆದುಕೊಂಡ ನಿರ್ಧಾರ ಹಾಗೂ ತಾಯಿಯ ಧೈರ್ಯಕ್ಕೆ ಮೆಚ್ಚಲೇ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಈ ರೀತಿಯ ಹಲವಾರು ಕಾಮೆಂಟ್ ಗಳು ಹರಿದು ಬರುತ್ತಿವೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular