Mahakumbh – ಆ್ಯಪಲ್ ಕಂಪನಿಯ ಸಹ ಸಂಸ್ಥಾಪಕ ದಿವಂಗತ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ರವರು ತಮ್ಮ ಹೆಸರನ್ನು ಕಮಲಾ ಎಂದು ಬದಲಿಸಿಕೊಂಡಿದ್ದಾರೆ. ಹಿಂದೂ ಧರ್ಮದ ಆಚರಣೆಯಲ್ಲಿ ಅಪಾರ ನಂಬಿಕೆಯನ್ನು ಹೊಂದಿರುವಂತಹ ಲಾರೆನ್ ಮಹಾಕುಂಭ ಮೇಳದಲ್ಲಿ ಭಾಗವಹಿಸಲು ಪ್ರಯಾಗ್ ರಾಜ್ ಗೆ ತಲುಪಿದ್ದು ಇದೇ ಸಮಯದಲ್ಲಿ ಅವರು ತಮ್ಮ ಹೆಸರನ್ನು ಕಮಲಾ ಎಂದು ಬದಲಿಸಿಕೊಂಡಿದ್ದಾರೆ.
ಲಾರೆನ್ ಪೊವೆಲ್ ಜಾಬ್ಸ್ ಅವರಿಗೆ ನಿರಂಜನಿ ಅಖಾಡದ ಮಹಾ ಮಂಡಲೇಶ್ವರ ಸ್ವಾಮಿ ಕೈಲಾಸನಂದ ಗಿರಿ ಮಹಾರಾಜ್ ಎಂಬುವವರು ಕಮಲಾ ಎಂದು ನಾಮಕರಣ ಮಾಡಿದ್ದಾರೆ. ಲಾರೆನ್ ಪೊವೆಲ್ ಜಾಬ್ಸ್ ಅವರಿಗೆ ರವರು ಲಾರೆನ್ ರವರನ್ನು ತಮ್ಮ ಪುತ್ರಿಯಂದು ಭಾವಿಸಿ ಸನಾತನ ಧರ್ಮದ ಪೂಜಾ ಕೈಂಕರ್ಯಗಳಲ್ಲಿ ಆಕೆ ಭಾಗವಹಿಸುವ ಸಲುವಾಗಿ ಹೊಸ ಹೆಸರನ್ನು ಇಟ್ಟಿರುವುದಾಗಿ ತಿಳಿಸಿದ್ದಾರೆ. ಲಾರೆನ್ ಪೋವೆಲ್ ಜಾಬ್ಸ್ ರವರು ಭಾರತಕ್ಕೆ ಭೇಟಿ ನೀಡುತ್ತಿರುವುದು ಎರಡನೇ ಬಾರಿಯಾಗಿದೆ. ಇಲ್ಲಿಗೆ ಬಂದಾಗ ಲಾರೆನ್ ರವರು ಧ್ಯಾನಕ್ಕಾಗಿ ತಮ್ಮ ಆಶ್ರಮಕ್ಕೆ ಬಂದು ತಂಗುತ್ತಿದ್ದರು ಎಂದು ನಿರಂಜನಿ ಅಖಾಡದ ಮಹಾ ಮಂಡಲೇಶ್ವರ ಸ್ವಾಮಿ ಕೈಲಾಸನಂದ ಗಿರಿ ಮಹಾರಾಜ್ ತಿಳಿಸಿದ್ದಾರೆ.
ಇನ್ನೂ ಲಾರೆನ್ ರವರು ಮಹಾಕುಂಭ ಮೇಳದ ಸಮಯದಲ್ಲಿ ನಿರಂಜನಿ ಅಖಾಡ ಆಯೋಜನೆ ಮಾಡಿರುವ ಶೋಭಾಯಾತ್ರೆಯಲ್ಲಿ ಭಾಗವಹಿಸುತ್ತಾರೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ನಿರಂಜನಿ ಅಖಾಡದ ಮಹಾ ಮಂಡಲೇಶ್ವರ ಸ್ವಾಮಿ ಕೈಲಾಸನಂದ ಗಿರಿ ಮಹಾರಾಜ್ ನಮ್ಮ ಪೇಶ್ವಾಯಿಯಲ್ಲಿ ಕಮಲಾ ರವರನ್ನು ಸೇರಿಸಿಕೊಳ್ಳಲು ಯತ್ನಿಸುತ್ತೇವೆ. ಅದರಲ್ಲಿ ಅವರು ಭಾಗವಹಿಸುವುದು ಅವರಿಗೆ ಬಿಟ್ಟ ವಿಚಾರವಾಗಿದೆ. ಲಾರೆನ್ ಅಲಿಯಾಸ್ ಕಮಲಾ ರವರು ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳುವ ಸಂತರನ್ನು ಭೇಟಿಯಾಗಲು ಬಂದಿದ್ದಾರೆ. ಆಕೆ ವಿದೇಶಿಯರಾದ ಕಾರಣ ನಮ್ಮ ಸಂಪ್ರದಾಯಗಳ ಬಗ್ಗೆ ಅವರಿಗೆ ಹೆಚ್ಚು ಗೊತ್ತಿಲ್ಲ. ಅವರು ಗುರುವಿನ ಮಾರ್ಗದರ್ಶನದಲ್ಲಿ ಮುಂದುವರೆಯಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇನ್ನೂ ಈ ಮಹಾ ಕುಂಭಮೇಳ ಜ.13 ರಿಂದ ಆರಂಭವಾಗಿ, ಫೆ.26 ರವರೆಗೂ ನಡೆಯಲಿದೆ.