Marriage Fraud : ಮೂರು ವರ್ಷಕ್ಕೆ ನಾಲ್ಕು ಮದುವೆಯಾದ ಖತರ್ನಾಕ್ ಲೇಡಿ, ಹೆಣ್ಣು ಸಿಗದ ಗಂಡಸರೇ ಈಕೆಗೆ ಟಾರ್ಗೆಟ್?

Marriage Fraud – ಇಂದಿನ ಕಾಲದಲ್ಲಿ ಹಣ, ಆಸ್ತಿ ಇದ್ದರೂ ಸಹ ಅನೇಕರಿಗೆ ಮದುವೆಯಾಗಿರುವುದಿಲ್ಲ. ಅದರಲ್ಲೂ ಪುರುಷರಿಗೆ ಹೆಣ್ಣು ಸಿಗದೇ ಇರುವಂತಹ ಘಟನೆಗಳು ತುಂಬಾನೆ ಇದೆ. ಇದೀಗ ಹೆಣ್ಣು ಸಿಗದ ಪುರುಷರನ್ನೆ ಮಹಿಳೆಯೊಬ್ಬಳು ಟಾರ್ಗೆಟ್ ಮಾಡಿಕೊಂಡು ಅವರನ್ನುದೋಚಿದ್ದಾಳೆ. (Marriage Fraud) ಈಗಾಗಲೇ ನಾಲ್ಕು ಮದುವೆಯಾಗಿ ವಂಚನೆ ಮಾಡಿರುವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಹೆಣ್ಣು ಸಿಗದೇ ಅನೇಕರು ಮ್ಯಾಟ್ರಿಮೋನಿ ವೆಬ್ ಸೈಟ್ ಗಳ ಮೊರೆ ಹೋಗುತ್ತಾರೆ. ಇದರಿಂದಲೂ ಅನೇಕರು (Marriage Fraud) ಮೋಸ ಹೋಗಿದ್ದಾರೆ. ಜೊತೆಗೆ ಕೆಲ ಬ್ರೋಕರ್‍ ಗಳೂ ಸಹ ಮೋಸ ಮಾಡಿದಂತಹ ಘಟನೆಗಳು ನಡೆದಿರುತ್ತದೆ. ಇದೀಗ ಅಂತಹುದೇ ಜಾಲವೊಂದನ್ನು ತುಮಕೂರು ಪೊಲಿಸರು ಬೇದಿಸಿದ್ದಾರೆ. ಓರ್ವ ಮಹಿಳೆ -3-4 ವರ್ಷದಲ್ಲೇ ನಾಲ್ಕು ಮದುವೆಯಾಗಿದ್ದಾಳೆ. ಮದುವೆ ನಾಟಕವಾಡಿ ಹಣ, ಒಡವೆ ದೋಚುತ್ತಿದ್ದ ಗ್ಯಾಂಗ್ ಅನ್ನು (Marriage Fraud) ತುಮಕೂರು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ಸಂಬಂಧ ಲಕ್ಷ್ಮೀ ಬಾಳಸಾಬ್ ಜನಕರ್‍ ಅಲಿಯಾಸ್ ಕೋಮಲ, ಸಿದ್ದಪ್ಪ, ಲಕ್ಷ್ಮೀಬಾಯಿ ಹಾಗೂ ಬ್ರೋಕರ್‍ ಲಕ್ಷ್ಮೀ ಎಂಬುವವರನ್ನು (Marriage Fraud) ಬಂದಧಿಸಲಾಗಿದೆ.

marriage fraud in tumkur 0

ಕೆಲವು ದಿನಗಳ ಹಿಂದೆಯಷ್ಟೆ (Marriage Fraud) ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅತ್ತಿಗಟ್ಟೆ ಗ್ರಾಮದಲ್ಲಿ ಮದುವೆಯೊಂದು ನಡೆದಿತ್ತು. ಪಾಲಾಕ್ಷರವರ ಮಗ ದಯಾನಂದಮೂರ್ತಿ ಯ ಮದುವೆ ಮಾಡಿಸಲು ತುಂಬಾನೆ ಕಷ್ಟಪಡುತ್ತಿದ್ದರು. ಮದುವೆ ವಯಸ್ಸು ಮೀರುತ್ತಿದ್ದು, ಹೆಣ್ಣು ಸಿಗದೆ ನೊಂದಿದ್ದರು. ಜೊತೆಗೆ ನೂರಾರು ಹೆಣ್ಣೂ ಮಕ್ಕಳನ್ನು ಸಹ ಮಗನಿಗೆ ಮದುವೆ ಮಾಡಲು ಹುಡುಕಿದ್ದರು. ಕೊನೆಯದಾಗಿ ಕುಷ್ಟಗಿ ಮೂಲದ ಬಸವರಾಜು ಎಂಬುವವರ ಮೂಲಕ ಬ್ರೋಕರ್‍ ಲಕ್ಷ್ಮೀ ಎಂಬಾಕೆ (Marriage Fraud) ಪರಿಚಯವಾಗಿದ್ದಾರೆ. ಈ ಬ್ರೋಕರ್‍ ಲಕ್ಷ್ಮೀ ಎಲ್ಲವನ್ನೂ ತಿಳಿದು, ನಿಮ್ಮ ಮಗನಿಗೆ ನಾನು ಮದುವೆ ಮಾಡಿಸುತ್ತೇನೆ ಎಂದು ಪಾಲಾಕ್ಷರವರನ್ನುನಂಬಿಸಿದ್ದಾಳೆ.

ಬಳಿಕ ಬ್ರೋಕರ್‍ ಲಕ್ಷ್ಮೀ ಹುಬ್ಬಳಿಯಲ್ಲಿ ಒಳ್ಳೆಯ ಹುಡುಗಿ (Marriage Fraud) ಇದ್ದಾಳೆ. ಆಕೆಗೆ ಅಪ್ಪ-ಅಮ್ಮ ಇಲ್ಲ, ನೀವೆ ಮದುವೆ ಮಾಡಿಕೊಳ್ಳಬೇಕೆಂದು ಹೇಳಿ ನಂಬಿಸಿದ್ದಾಳೆ, ಇದರ ಜೊತೆಗೆ ಕೋಮಲ ಎಂಬ ಹೆಸರಿನಲ್ಲಿ ಯುವತಿಯ ಪೊಟೋ ಸಹ ತೋರಿಸಿದ್ದಾರೆ. ನಂತರ ಹುಡುಗನ ಮನೆ ನೋಡಲು ಅತ್ತಿಕಟ್ಟೆ ಗ್ರಾಮಕ್ಕೆ ಬಂದಿದ್ದ ಯುವತಿ ಹಾಗೂ ಆಕೆಯ ಚಿಕ್ಕಮ್ಮ-ಚಿಕ್ಕಪ್ಪ ಕಳೆದ  ವರ್ಷ ನವೆಂಬರ್‌ 11ರಂದು ಬಂದಿದ್ದರು. ಇದೇ ವೇಳೆ ಮದುವೆ ಮಾತುಕತೆಯನ್ನೂ (Marriage Fraud) ಮುಗಿಸಿದ್ದರು. ನಂತರ, ಹುಡುಗ ಒಪ್ಪಿಗೆ ಇದ್ದಾನೆ, ನಿಮಗೂ ಹುಡುಗಿ ಒಪ್ಪಿಗೆ ಇದ್ದರೆ ನಾಳೆಯೇ ನಿಮ್ಮೂರಿನ ದೇವಸ್ಥಾನದಲ್ಲಿ ಸರಳವಾಗಿ ಮದುವೆ ಮಾಡಿಬಿಡೋಣ ಎಂದು ಹೇಳಿದ್ದಾರೆ. ಇನ್ನೂ ಸುಮಾರು ವರ್ಷಗಳಿಂದ ಮಗನಿಗೆ ಹುಡುಗಿ ಸಿಗದೇ ಹೈರಾಣಾಗಿದ್ದ ಪಾಲಾಕ್ಷ ಹಿಂದೆ (Marriage Fraud) ಮುಂದೆ ಯೋಚಿಸದೇ ದಿಢೀರ್‍ ಮದುವೆಗೆ ಒಪ್ಪಿಕೊಂಡಿದ್ದಾರೆ. ಜೊತೆಗೆ ಗ್ರಾಮದಲ್ಲಿ ಸರಳವಾಗಿ ಮದುವೆ ಮಾಡಿದ್ದಾರೆ. 200 ಕ್ಕೂ ಹೆಚ್ಚ ಮಂದಿ ಈ ಮದುವೆಗೆ ಬಂದಿದ್ದರು. ಮದುವೆಯ ನಿಮಿತ್ತ ವಧುವಿಗೆ ಚಿನ್ನದ ಸರ, ತಾಳಿ, ಕಿವಿಯೋಲೆ ಸೇರಿ 25 ಗ್ರಾಂ ತೂಕದ ಆಭರಣಗಳನ್ನು ಗಂಡಿನ ಕಡೆಯವರೇ ಮಾಡಿಸಿದ್ದರು. ಜೊತೆಗೆ ಮದುವೆ ಸೆಟ್ ಮಾಡಿಸಿಕೊಟ್ಟ ಬ್ರೋಕರ್‍ ಲಕ್ಷ್ಮೀಗೆ ಒಂದೂವರೆ ಲಕ್ಷ ಹಣ (Marriage Fraud) ಸಹ ನೀಡಿದ್ದರಂತೆ.

ಮದುವೆಯಾದ (Marriage Fraud) 2 ದಿನದ ಬಳಿಕ ಮಧುಮಗಳನ್ನು ತವರು ಮನೆಗೆ ಕರೆದುಕೊಂಡು ಹೋಗಬೇಕೆಂದು ಆಕೆಯೊಬ್ಬಳನ್ನು ಕರೆದುಕೊಂಡು ಹೋಗಿದ್ದಾರೆ. ಹಣ ಹಾಗೂ ಚಿನ್ನಾಭರಣಗಳ ಸಹಿತ ವಧುವನ್ನು ಕರೆದುಕೊಂಡು ಹೋಗಿದ್ದರು. ಒಂದು ವಾರ ಕಳೆದು ಅವರು ವಾಪಸ್ ಬಂದಿಲ್ಲ. ಈ ಸಂಬಂಧ ಹುಬ್ಬಳಿಗೆ ಹೋಗಿ ವಿಚಾರಿಸಿದಾಗ ಪಾಲಾಕ್ಷಗೆ ಅಸಲೀ ಸತ್ಯ ತಿಳಿದುಬಂದಿದೆ. ಈ ಮದುವೆ ಬಂದವರೂ ಸಹ ಕಳ್ಳರೇ ಎಂದು ಗೊತ್ತಾಗಿದೆ. (Marriage Fraud) ಬಳಿಕ ತಮ್ಮ ಊರಿಗೆ ಬಂದು ಗುಬ್ಬಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ಮದುವೆ ಪೊಟೊ ಹಾಗೂ ವಿಡಿಯೋ ಆಧರಿಸಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ನ ಎಲ್ಲರನ್ನೂ ಬಂಧಿಸಿದ್ದಾರೆ. ಇನ್ನೂ ಈ ಗ್ಯಾಂಗ್ ಕೇವಲ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ ಭಾಗದಲ್ಲೂ ಮದುವೆ ಮಾಡಿಸಿ ವಂಚನೆ ಮಾಡಿದ್ದಾರೆ (Marriage Fraud) ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

Next Post

Bagepalli News-ಬಾಗೇಪಲ್ಲಿಯಲ್ಲಿ ಹರ್ ಘರ್ ತಿರಂಗಾ ಜಾಗೃತಿ ಜಾಥಾ

Tue Aug 13 , 2024
Bagepalli News – 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಗಸ್ಟ್ 13ರಿಂದ 15ರವರೆಗೆ ನಡೆಯಲಿರುವ ಹರ್ ಘರ್ ತಿರಂಗಾ ಅಭಿಯಾನದ ನಿಮಿತ್ತ ಬಾಗೇಪಲ್ಲಿ ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸ್ವಾತಂತ್ರ್ಯ ಜಾಗೃತಿ ಜಾಥ ನಡೆಯಿತು. ಈ ಜಾಥದಲ್ಲಿ ಜನರಿಗೆ ಹರ್‍ ಗರ್‍ ತಿರಂಗಾ ಅಭಿಯಾನದಲ್ಲಿ ಭಾಗಿಯಾಗಿ ದೇಶಪ್ರೇಮ ಸಾರಬೇಕೆಂದು ಅರಿವು ಮೂಡಿಸಲಾಯಿತು. (Bagepalli News) ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪಿ.ಎಂ.ಶ್ರೀ ಶಾಲೆಯ ವಿದ್ಯಾರ್ಥಿಗಳು […]
har ghar triranga abhiyana
error: Content is protected !!