ಇತ್ತೀಚಿಗೆ ಹೃದಯಾಘಾತ ಹೆಚ್ಚಾಗಿ ಕಂಡು ಬರುತ್ತಿದೆ. ಸಣ್ಣ ಮಕ್ಕಳಿಂದ ಹಿಡಿದು ವೃದ್ದರವರೆಗೂ ನೋಡ ನೋಡುತ್ತಿದ್ದಂತೆ ಹಠಾತ್ ಆಗಿ ಕುಸಿದು ಬಿದ್ದು ಸಾಯುವಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಹೋಟೆಲ್ ಒಂದರಲ್ಲಿ ಪುಡ್ ಆರ್ಡರ್ ಮಾಡಿದ ವ್ಯಕ್ತಿಯೊಬ್ಬ ಊಟದ ತಟ್ಟೆಗೆ ಕೈ ಇಡುತ್ತಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿರುವ (Heart Attack) ಘಟನೆಯೊಂದು ನಡೆದಿದ್ದು, ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಅಂದಹಾಗೆ ಇದು ಹಳೆಯ ವಿಡಿಯೋ ಆಗಿದ್ದು, ಮತ್ತೊಮ್ಮೆ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ಭೂಮಿಯ ಮೇಲೆ ಹುಟ್ಟಿದ ಜೀವಿ ಸಾಯುವುದು ಖಚಿತ ಎಂದೇ ಹೇಳಲಾಗುತ್ತದೆ. ಸಾವು ಯಾರಿಗೆ ಯಾವಾಗ ಹೇಗೆ ಬರುತ್ತದೆ ಎಂಬುದು ಹೇಳೋಕೆ ಕಷ್ಟ. ಅದರಲ್ಲೂ ಇತ್ತೀಚಿಗೆ ಹೃದಯಾಘಾತದಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ. ಹೋಟೆಲ್ ಒಂದರಲ್ಲಿ ಒಂದು ಕುಟುಂಬ ಹೋಟೆಲ್ ಗೆ ಊಟ ಮಾಡಲು ಹೋಗಿರುತ್ತಾರೆ. ಊಟ ಆರ್ಡರ್ ಮಾಡಿದ ಕೊಂಚ ಸಮಯದಲ್ಲೇ ಆ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪುತ್ತಾನೆ. ಅಂದಹಾಗೆ ಈ ಘಟನೆ ನಡೆದಿರೋದು ಮಧ್ಯಪ್ರದೇಶದಲ್ಲಿ. ಮನೆಯಿಂದ ಹೊರಗೆ ಬಂದ ಕುಟುಂಬವೊಂದು ಊಟಕ್ಕಾಗಿ ಹೋಟೆಲ್ ಗೆ ಬಂದಿದ್ದಾರೆ. ತಮ್ಮಗಿಷ್ಟವಾದ ಆಹಾರವನ್ನು ಆರ್ಡರ್ ಮಾಡಿದ್ದಾರೆ. ಊಟ ಬಂದು ತಲುಪುವುದರ ಒಳಗೆ ಆ ಕುಟುಂಬದ ಹಿರಿಯ ವ್ಯಕ್ತಿ ಟೇಬಲ್ ಮೇಲೆ ಕುಸಿದು ಬಿದಿದ್ದಾರೆ. ಕೂಡಲೇ ಅವರ ಪ್ರಾಣ ಸಹ ಹಾರಿ ಹೋಗಿದೆ. ನೋಡ ನೋಡುತ್ತಿದ್ದಂತೆ ಆ ವ್ಯಕ್ತಿಯ ಪ್ರಾಣ ಹಾರಿಹೋಗಿದ್ದು, ಇಡಿ ಕುಟುಂಬ ಶಾಕ್ ಆಗಿದ್ದಾರೆ.
ಇನ್ನೂ ಈ ದೃಶ್ಯ ಹೋಟೆಲ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋದಲ್ಲಿ ಅಪ್ಪ, ಮಗ, ಮಗಳು ಹಾಗೂ ಅಮ್ಮ ಇರುವ ಕುಟುಂಬವೊಂದು ಹೋಟೆಲ್ ಗೆ ಹೋಗಿ ಪುಡ್ ಆರ್ಡರ್ ಮಾಡಿದ್ದಾರೆ. ತಮ್ಮ ಆರ್ಡರ್ ಬರುತ್ತಿದ್ದಂತೆ ಕುಟುಂಬದ ಹಿರಿಯ ವ್ಯಕ್ತಿ ಟೇಬಲ್ (Heart Attack) ಮೇಲೆ ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದವರೆಲ್ಲಾ ಅವರ ನೆರವಿಗೆ ಧಾವಿಸಿದ್ದಾರೆ. ಬಳಿಕ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅದಾಗಲೇ ಆ ಹಿರಿಯ ಜೀವ ಮೃತಪಟ್ಟಿದೆ. ಆರ್ಡರ್ ಮಾಡಿದ ಊಟ ತಿನ್ನುವಷ್ಟರಲ್ಲೇ ವ್ಯಕ್ತಿ ಮೃತಪಟ್ಟಿದ್ದಾರೆ.
https://x.com/priyarajputlive/status/1800746654641086566
ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ತಮ್ಮ ಸರದಿ ಯಾವಾಗ ಬರುತ್ತದೆಯೋ ಗೊತ್ತಿಲ್ಲ. ಇರೋವಷ್ಟು ದಿನ ಎಲ್ಲರೊಂದಿಗೆ ಖುಷಿಯಾಗಿ ಇರುವ ಜೀವನ ಕಳೆಯರಿ ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಇಂತಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಕುಟುಂಬದೊಂದಿಗೆ ಖುಷಿಯಿಂದ ನೃತ್ಯ ಮಾಡುವಾಗಲೇ, ಆಸ್ಪತ್ರೆಯಲ್ಲಿರುವಾಗಲೇ, ಸಂತೋಷದಿಂದ ಇರುವಾಗಲೇ ಅನೇಕರು ಹೃದಯಾಘಾತಕ್ಕೆ ತುತ್ತಾಗಿರುವಂತಹ ಸುದ್ದಿಗಳನ್ನು ಕೇಳಿದ್ದೇವೆ.